ಮಡಿಕೇರಿ, ಸೆ. ೮: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂವಹನ ಸಲಹೆಗಾರರಾಗಿ ಕೊಡಗಿನವರಾದ ಹಿರಿಯ ಪತ್ರಕರ್ತ ಬಿದ್ದಾಟಂಡ ದೀಪಕ್ ತಿಮ್ಮಯ್ಯ ಅವರು ನೇಮಕಗೊಂಡಿದ್ದಾರೆ.
ಈ ಬಗ್ಗೆ ಇಂದು ಅಧಿಕೃತ ಆದೇಶ ಹೊರಬಿದ್ದಿದ್ದು, ಸರಕಾರದ ಅಧೀನ ಕಾರ್ಯದರ್ಶಿ (ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ) ಗಾಯತ್ರಿ ಜಿ.ಎನ್. ಅವರು ಪ್ರಕಟಣೆ ಹೊರಡಿಸಿದ್ದಾರೆ. ದೀಪಕ್ ಮೂಲತಃ ಅಭ್ಯತ್ಮಂಗಲ ಗ್ರಾಮದವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.