ಮಡಿಕೇರಿ, ಸೆ. ೮: ಕೊಡಗು ಗೌಡ ಸಮಾಜಗಳ ಒಕ್ಕೂಟದ ವಿಶೇಷ ಸಭೆಯಲ್ಲಿ ನಡೆದ ಚರ್ಚೆಗಳು ಮತ್ತು ನಿರ್ಣಯಗಳು ಯಾವುದೇ ಜನಾಂಗದ ವಿರುದ್ಧವಾಗಿರುವುದಿಲ್ಲ. ಒಂದು ಜನಾಂಗದ ಭಾಷೆಯ ಎಂಟನೇ ಪರಿಚ್ಛೇದವಾಗಲಿ, ಕೋವಿಯ ತಕರಾರಾಗಲಿ, ಸಂಸ್ಕೃತಿಯ ವಿರುದ್ಧವಾಗಲಿ ಯಾವುದೇ ನಿರ್ಣಯಗಳು ಅಥವಾ ಮಾತುಗಳು ಆ ಸಭೆಯಲ್ಲಿ ಬಂದಿರುವುದಿಲ್ಲ. ಶಾಸಕರಾದ ಡಾ. ಮಂತರ್ ಗೌಡ ಹಾಗೂ ಮಾಜಿ ಶಾಸಕರಾದ ಬೋಪಯ್ಯ ಅವರು ಅಭಿನಂದನಾ ಸಮಾರಂಭದ ಅತಿಥಿಗಳೇ ಹೊರತು ಈ ನಿರ್ಣಯಕ್ಕೆ ಸಂಬAಧಿಸಿದವರಲ್ಲ ಎಂದು ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ ಹಾಗೂ ಆಡಳಿತ ಮಂಡಳಿಯವರು ಪ್ರತಿಕ್ರಿಯೆ ನೀಡಿದ್ದಾರೆ.

ಸಿಎನ್‌ಸಿಯು ಉಚ್ಚ ನ್ಯಾಯಾಲಯದಲ್ಲಿ ಹಾಕಿರುವ ಸಾರ್ವಜನಿಕ ಹಿತಾಸಕ್ತಿಯ ದಾವೆಯ ವಿರುದ್ಧ ಒಕ್ಕೂಟವು ತೆಗೆದುಕೊಂಡ ನಿರ್ಣಯ ಸಿಎನ್‌ಸಿಯ ಮೇಲೆ ಹೊರತು ಒಂದು ಜನಾಂಗದ ಮೇಲಲ್ಲ. ಆ ದಾವೆಯ ಮುಖ್ಯ ಅಂಶಗಳನ್ನು ಹೇಳದೆ ಮರೆಮಾಚಿ ಪ್ರಚೋದನೆಗಾಗಿ ಕೋವಿ, ಭಾಷೆ , ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ ಎಂಬ ಸಮಾಜಗಳ ಮತ್ತು ಸಂಘಟನೆಗಳ ಹೇಳಿಕೆ ಆತಂಕಕಾರಿ ಬೆಳವಣಿಗೆ ಎಂದಿದ್ದಾರೆ ಹಾಗೂ ಒಕ್ಕೂಟದ ಅಭಿಪ್ರಾಯಗಳನ್ನು ಈ ಕೆಳಗಿನಂತೆ ನೀಡಿದ್ದಾರೆ.

ಪ್ರಸಕ್ತ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವಕೀಲ ಸುಬ್ರಮಣ್ಯ ಸ್ವಾಮಿ ಅವರು ನಡೆಸುತ್ತಿರುವ ಸಿಎನ್‌ಸಿಯ ದಾವೆಯ ಮುಖ್ಯ ಬೇಡಿಕೆಗಳು.

೧. ಕೊಡವ ಸ್ವಾಯತ್ತ ಮಂಡಳಿ, ಕೊಡವ ಲ್ಯಾಂಡ್ ರಚನೆ

ಈ ಸ್ವಾಯತ್ತ ಮಂಡಳಿಗಳಿಗೆ ಕೊಡಗಿನ ವ್ಯಾಪ್ತಿಯಲ್ಲಿ ಭೂಮಿ, ಕಾಡು, ಕೃಷಿ, ಮತ್ತು ಸಾಮಾಜಿಕ ಪದ್ಧತಿಗಳಿಗೆ ಮತ್ತು ಸಂಪನ್ಮೂಲಗಳಿಗೆ ಸಂಬAಧಿಸಿದAತೆ ಸ್ವಂತ ಕಾನೂನನ್ನು ರೂಪಿಸಬಹುದು ಮತ್ತು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬಹುದು. ಅಂದರೆ ಕೊಡಗಿನಲ್ಲಿ ಸರಕಾರಕ್ಕೆ ಸರಿ ಸಮಾನವಾಗಿ ಸ್ಥಳೀಯ ಆಡಳಿತದ ಪೂರ್ತಿ ಅಧಿಕಾರ ಈ ಮಂಡಳಿಗೆ ಇರಲಿದೆ. ಉದಾಹರಣೆಗೆ ಮುಂದೆ ಯಾವುದೇ ಜಾಗಗಳನ್ನು ಕೊಡಗಿನಲ್ಲಿ ಮಾರುವುದಕ್ಕೆ, ತೆಗೆದುಕೊಳ್ಳುವುದಕ್ಕೆ ಅನುಮತಿ ಕೊಡಬಹುದು ಮತ್ತು ನಿರಾಕರಿಸಬಹುದು. ಕೊಡಗಿಗೆ ಬರಬೇಕೆಂದರೆ ಪರ್ಮಿಟ್ ತೆಗೆದುಕೊಳ್ಳಬೇಕೆಂದು ಕೇಳಬಹುದು. ಇಂತಹÀ ಹಲವಾರು ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಕಾನೂನುಗಳು ಇಲ್ಲಿ ಅಡಕವಾಗಿದೆ. ಒಂದು ವೇಳೆ ಈ ಸ್ವಾಯುತ್ತ ಮಂಡಳಿ ಸಿಕ್ಕಿದರೆ ಏನಾಗಬಹುದು ಎಂದು ಎಲ್ಲ ಜನಾಂಗದವರು ಯೋಚಿಸಬೇಕಾಗುತ್ತದೆ.

೨ ರಾಜಕೀಯ ಪ್ರಾತಿನಿಧ್ಯ

ಪ್ರತ್ಯೇಕ ಲೋಕಸಭಾ ಸದಸ್ಯ, ಪ್ರತ್ಯೇಕ ಶಾಸಕ. ಕೇವಲ ಶೇ ೮ ಜನಸಂಖ್ಯೆ ಹೊಂದಿರುವ ಜನಾಂಗಕ್ಕೆ ಅತಿ ಚಿಕ್ಕ ಜಿಲ್ಲೆ ಕೊಡಗಿನಲ್ಲಿ ಸದ್ಯಕ್ಕೆ ರಾಜಕೀಯವಾಗಿ ಅತಿ ಹೆಚ್ಚಿನ ಪ್ರಾಶಸ್ತö್ಯ ಇದ್ದು ಎರಡು ರಾಷ್ಟಿçÃಯ ಪಕ್ಷಗಳ ಅಧ್ಯಕ್ಷ ಸ್ಥಾನ ಸೇರಿದಂತೆ, ಶಾಸಕರ ಲಭ್ಯತೆ ಇರುವಾಗ ಮತ್ತೊಂದು ಪ್ರತ್ಯೇಕ ಶಾಸಕ ಮತ್ತು ಲೋಕಸಭಾ ಸದಸ್ಯ ಅವಶ್ಯಕತೆ ಆದರೆ ಉಳಿದವರ ಪಾಡೇನು?

೩ ಎಸ್‌ಟಿ ಟ್ಯಾಗ್

ಒಂದು ಆರ್ಥಿಕ ಪ್ರಬಲವಾಗಿರುವ, ದೊಡ್ಡ ಮಟ್ಟದ ಜಮೀನು ಹೊಂದಿರುವ ಒಂದು ಪ್ರಭಾವಶಾಲಿ ಜನಾಂಗಕ್ಕೆ ಎಸ್ ಟಿ ಸಿಕ್ಕಿದರೆ ಕೆಲವರಿಂದ ಅದರ ದುರುಪಯೋಗ ಖಂಡಿತ. ಮುಂದಿನ ದಿನಗಳಲ್ಲಿ ಕೊಡಗು ಮತ್ತೊಂದು ಮಣಿಪುರವಾಗುವ ಸಾಧ್ಯತೆ ಇಲ್ಲದಿಲ್ಲ.

೪. ಈ ಹಿಂದಿನಿAದಲೂ ಕೊಡವರು ಮಾರಿರುವ ತೋಟಗಳನ್ನು, ಜಾಗಗಳನ್ನು ಭೂ ಹಕ್ಕುಗಳ ಕಾಯ್ದೆಯ ಅನ್ವಯ ವಾಪಸ್ ಹಸ್ತಾಂತರ ಮಾಡಬೇಕು ಎಂಬ ಆಗ್ರಹ.

ಬಹುಶಃ ಇಂಥ ಬೇಡಿಕೆ ದೇಶದಲ್ಲೇ ಮೊದಲು ಇರಬಹುದು. ಇಂಥ ಆತಂಕಕಾರಿ ಬೇಡಿಕೆ ಅರ್ಥ ಅಂದರೆ ಯಾರು ಅನ್ಯ ಜನಾಂಗದವರು ಈ ಹಿಂದೆ ಜಮೀನುಗಳನ್ನು ತೋಟಗಳನ್ನು ಖರೀದಿ ಮಾಡಿದವರು ಪುಕ್ಕಟೆಯಾಗಿ ಅದನ್ನು ಈ ಜನಾಂಗಕ್ಕೆ ಬಿಟ್ಟುಬಿಡಬೇಕು. ಈ ಬೇಡಿಕೆಗಳಿಗೆ ಕಮಿಷನ್ ನೇಮಕ ಮಾಡಬೇಕೆಂಬ ತರ್ಕಹೀನ ಬೇಡಿಕೆಗಳ ವಿರುದ್ಧ ಕೊಡಗು ಗೌಡ ಸಮಾಜಗಳ ಒಕ್ಕೂಟದ ಹೋರಾಟವೇ ಹೊರತು ಒಂದು ಜನಾಂಗದ ಮೇಲಲ್ಲ. ಇದು ಕೇವಲ ಗೌಡರಿಗೆ ಆಗುವ ತೊಂದರೆ ಅಲ್ಲ, ಕೊಡಗಿನ ಎಲ್ಲ ನಿವಾಸಿಗಳಿಗೆ ಇದು ಆತಂಕಕಾರಿ ವಿಷಯ. ಕೊಡಗು ಗೌಡ ಸಮಾಜಗಳ ಒಕ್ಕೂಟವು ಕೊಡಗಿನಲ್ಲಿ ಎಲ್ಲ ಜನಾಂಗದವರ ಜೊತೆಯಲ್ಲಿ ಸೌಹಾರ್ದತೆಯಿಂದ ಬಾಳುತ್ತಿದೆ ಮತ್ತು ಮುಂದೆಯೂ ಅದಕ್ಕೆ ಬದ್ಧವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.