ವೀರಾಜಪೇಟೆ: ಕೊಡವ ಸಮುದಾಯಗಳ ಅಸ್ತಿತ್ವ ಮತ್ತು ಹಕ್ಕುಗಳ ನ್ಯಾಯಸಮ್ಮತ ಬೇಡಿಕೆಗಳಿಗಾಗಿ ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಗೌಡ ಸಮಾಜಗಳ ಒಕ್ಕೂಟ ನಿರ್ಣಯ ಕೈಗೊಂಡಿರುವುದನ್ನು ಫೇಡರೇಷನ್ ಆಫ್ ಕೊಡವ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಜಂಟಿ ಹೇಳಿಕೆ ನೀಡಿದ್ದಾರೆ.
ಪತ್ರಿಕೆಗೆ ಮಾಹಿತಿ ನೀಡಿ ಕೊಡಗಿನಲ್ಲಿ ಕೊಡವ ಹಾಗು ಗೌಡ ಜನಾಂಗಗಳು ದೀರ್ಘ ಕಾಲದಿಂದಲು ಆತ್ಮೀಯ ಹಾಗೂ ಸಾಮಾಜಿಕ ಸಂಬAಧಗಳೊAದಿಗೆ ಸಾಮರಸ್ಯವಾಗಿ ಜೀವನ ನಡೆಸುತ್ತಿದ್ದೇವೆ. ಕೊಡವ ಜನಾಂಗಕ್ಕೆ ಒಳಿತಾಗುವ ವಿಚಾರವನ್ನು ಸರ್ಕಾರದ ಮುಂದೆ ಪ್ರತಿಪಾದಿಸಿದರೆ ಮತ್ತೊಂದು ಜನಾಂಗ ಅದನ್ನು ವಿರೋಧಿಸುತ್ತದೆ ಎಂದರೆ ಅವರ ಮನಸ್ಥಿತಿ ಎಷ್ಟರ ಮಟ್ಟಿಗೆ ಇದೆ ಎಂಬುದು ಮನವರಿಕೆಯಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಿಕ ಹಕ್ಕನ್ನು ಕೇಳುವುದಕ್ಕೆ ಯಾರ ಅಪ್ಪಣೆ ಬೇಕಾಗಿಲ್ಲ ಎಂದು ಅವರುಗಳು ಹೇಳಿದ್ದಾರೆ.
ಕಟ್ಟೆಮಾಡು ವಿಚಾರ ಜನರ ಮನಸ್ಸಿನಿಂದ ದೂರ ಹೋಗುತ್ತಿದ್ದಂತೆ ಪರಿಶಿಷ್ಟ ಪಂಗಡಕ್ಕೆ ಕೊಡವ ಜನಾಂಗವನ್ನು ಸೇರ್ಪಡೆಗೊಳಿಸುವ ವಿಚಾರದ ಬಗ್ಗೆ ಅಪಸ್ವರ ಎತ್ತುತ್ತಿರುವುದು ಅವರಿಗೆ ಶೋಭೆ ತರುವಂತದಲ್ಲ ಎಂದಿದ್ದಾರೆ.