ಮಡಿಕೇರಿ: ಕೊಡವರಿಗೆ ಸಂವಿಧಾನಬದ್ಧವಾಗಿ ತಲುಪಬೇಕಾದ ಹಕ್ಕು ಬಾಧ್ಯತೆಗಳ ಬಗ್ಗೆ ನ್ಯಾಯಾಂಗ ಹೋರಾಟ ಎಂಬ ತೀರ್ಮಾನಕ್ಕೆ ತಕರಾರಿಲ್ಲ; ಸಂವಿಧಾನ ನಮಗೇನು ಕೊಡಬೇಕೋ ಅದನ್ನು ಕೊಟ್ಟೆ ಕೊಡುತ್ತದೆ ಮತ್ತು ನಾವು ಪಡೆಯುತ್ತೇವೆ ಕೂಡ ಎಂದಿರುವ ಕೊಡವಾಮೆರ ಕೊಂಡಾಟ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎರಡು ಪ್ರಮುಖ ರಾಜಕೀಯ ಪಕ್ಷಗಳ ನಿಲುವನ್ನ ಸ್ಪಷ್ಟಪಡಿಸಲು ಒತ್ತಾಯಿಸಿದೆ.

ಕಾರ್ಯಕ್ರಮದಲ್ಲಿ ಒಬ್ಬರು ಹಾಲಿ, ಮತ್ತೊಬ್ಬರು ಮಾಜಿ ಶಾಸಕರು ಇದ್ದರು. ಈ ಇಬ್ಬರೂ ಕೂಡ ಆ ತೀರ್ಮಾನದ ಪಾಲುದಾರರೇ ಆಗಿರುವುದರಿಂದ, ಅವರು ಪ್ರತಿನಿಧಿಸುವ ಪಕ್ಷಗಳ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದೆ.

ನಾವು ಕೇಳಿರುವುದು ನಮ್ಮ ಸಂವಿಧಾನಬದ್ದ ಬೇಡಿಕೆಯನ್ನು; ಅದೂ ನಮ್ಮ ಮೂಲ ಸ್ಥಾನದಲ್ಲೇ. ಅದನ್ನು ಅಧಿಕೃತವಾಗಿ ಕೇಳಿದ್ದು ಒಂದು ಸಂಘಟನೆಯಾದರೂ ಆ ಬೇಡಿಕೆಗಳೆಲ್ಲವೂ ಇಡೀ ಕೊಡವರ ಹಕ್ಕು ಮತ್ತು ಇಡೀ ಸಮುದಾಯವೇ ಆ ಸಂಘಟನೆಯ ಬೆನ್ನಿಗಿದೆ ಎಂದು ಕೊಡವಾಮೆರ ಕೊಂಡಾಟ ಸಂಘಟನೆ ಸ್ಪಷ್ಟಪಡಿಸಿದೆ.