ಶ್ರೀಮಂಗಲ, ಸೆ. ೬: ಪೊನ್ನಂಪೇಟೆಯ ಇಗ್ಗುತಪ್ಪ ಕೊಡವ ಸೌಹಾರ್ದ ಸಹಕಾರ ಸಂಘವು ೨೦೨೫- ೨೬ರ ಸಾಲಿನ ಆರ್ಥಿಕ ವರ್ಷದಲ್ಲಿ ೨೦೫೪ ಸದಸ್ಯರನ್ನು ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ ರೂ.೧೨೬.೭೦ ಕೋಟಿ ವ್ಯವಹಾರ ಮಾಡಿ, ರೂ.೩೭.೬೭ ಲಕ್ಷ ಲಾಭವನ್ನು ಗಳಿಸಿದ್ದು ಸದಸ್ಯರಿಗೆ ಶೇ. ೧೨ರ ಡಿವಿಡೆಂಟನ್ನು ಮಹಾಸಭೆಯಲ್ಲಿ ಘೋಷಣೆ ಮಾಡಲಾಗುತ್ತದೆ ಹಾಗೂ ಆಡಿಟ್ ‘ಎ’ ವರ್ಗೀಕರಣ ಹೊಂದಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷರಾದ ಅರಮಣಮಾಡ ಬೋಪಯ್ಯ ಅವರು ತಿಳಿಸಿದರು.
ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು ಸಂಘದಲ್ಲಿ ಅತ್ಯಂತ ಪಾರದರ್ಶಕತೆಯಿಂದ ಕೆಲಸ ಕಾರ್ಯಗಳು ನಡೆಸುತ್ತಾ ಬರುತ್ತಿದೆ. ಸಹಕಾರಿಯ ಸದಸ್ಯರಿಂದಲೂ, ಸದಸ್ಯರೇತರರಿಂದಲೂ ನಿರಖು ಠೇವಣಿ, ಸಂಚಯ ಠೇವಣಿ ದೈನಂದಿನ ಠೇವಣಿ ಹೀಗೆ ವಿವಿಧ ರೀತಿಯ ಠೇವಣಿಯಾಗಿ ರೂ. ೩೩.೭೭ ಕೋಟಿ ಠೇವಣಿ ಸಂಫ ಹೊಂದಿರುತ್ತದೆ. ಸಂಸ್ಥೆಯು ಕಳೆದ ಸಾಲಿಗಿಂತ ಶೇಕಡ ೩೦ ರಷ್ಟು ಪ್ರಗತಿಯನ್ನು ಸಾಧಿಸಿದೆ ಎಂದು ಅವರು ತಿಳಿಸಿದರು.
ಸದಸ್ಯರಿಗೆ ಮತ್ತು ಸದಸ್ಯರೇತರಿಗೆ ವಿವಿಧ ರೀತಿಯ ಸಾಲಗಳಾದ ವ್ಯವಸಾಯ ಅಭಿವೃದ್ಧಿ ಸಾಲ, ಆಭರಣ ಸಾಲ, ಗೃಹ ನಿರ್ಮಾಣ ಸಾಲ, ಪಿಗ್ಮಿ ಸಾಲ,ವಾಹನ ಸಾಲ, ಕೃಷಿ ಯಂತ್ರೋಪಕರಣ ಸಾಲ ಸೇರಿ ರೂ ೩೧.೦೨ ಕೋಟಿ ಸಾಲ ವಿತರಿಸಲಾಗಿದೆ. ಸಾಲಗಳ ವಸೂಲಾತಿಯು ಶೇಕಡ ೯೩ ರಷ್ಟು ಆಗಿರುತ್ತದೆ. ಇದಕ್ಕೆ ಆಡಳಿತ ಮಂಡಳಿಯ ನಿಯಮ ಬದ್ಧ ಸೇವೆ, ಕಾನೂನು ಬದ್ಧವಾಗಿದ್ದು ಹಾಗೂ ಸದಸ್ಯರ ಸಹಕಾರದಿಂದಲೂ ಅಭಿವೃದ್ಧಿ ಹೊಂದುತ್ತಿರುವುದಾಗಿದೆ ಎಂದು ಅವರು ವಿವರಿಸಿದರು.
ಸಂಘದಲ್ಲಿ ಠೇವಣಾತಿ ಭದ್ರತೆ ದೃಷ್ಟಿಯಿಂದ ಇತರ ಬ್ಯಾಂಕುಗಳಲ್ಲಿ ರೂ. ೭.೧೭ ಕೋಟಿ ವಿನಿಯೋಗ ಮಾಡಲಾಗಿದೆ. ಇತರ ವಾಣಿಜ್ಯ ಬ್ಯಾಂಕು ಮತ್ತು ರಿಸರ್ವ್ ಬ್ಯಾಂಕ್ ನಂತೆ ಎಸ್ ಎಲ್ ಆರ್ ಶೇ. ೨೦ರಷ್ಟು ಠೇವಣಿಯನ್ನು ಇತರ ಬ್ಯಾಂಕಿನಲ್ಲಿ ತೊಡಗಿಸಿ ಠೇವಣಿ ಭದ್ರತೆಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು. ಪೊನ್ನಂಪೇಟೆ ಟಿ. ಆರ್. ರಸ್ತೆಯಲ್ಲಿ ಸ್ವಂತ ಕಟ್ಟಡವನ್ನು ಸಂಸ್ಥೆ ಹೊಂದಿರುತ್ತದೆ ಸಂಸ್ಥೆಯ ಸದಸ್ಯರು ಇನ್ನಿತರ ಸೌಲಭ್ಯಗಳಾದ ಮರಣನಿಧಿ ರೂ. ೧೦ ಸಾವಿರ ಹಾಗೂ ಸಹಕಾರಿ ಜೀವ ನಿಧಿ ರೂ. ೧ ಲಕ್ಷ ಅವರ ನಾಮಿನಿಗೆ ಮೃತಪಟ್ಟ ನಂತರ ಕೊಡಲಾಗುವುದು.ಅದು ಅಲ್ಲದೆ ಸಾಲಗಾರರ ಹಿತ ದೃಷ್ಟಿಯಿಂದ ಸಾಲಗಾರನು ಸಾಲ ಪಡೆದು ಸುಸ್ತಿಯಾಗದೇ ಮೃತಪಟ್ಟಲ್ಲಿ ಸಾಲಗಾರ ಕ್ಷೇಮ ಅಭಿವೃದ್ದಿ ನಿಧಿಯಿಂದ ನಿಬಂಧನೆಗೆ ಒಳಪಟ್ಟು ಒಂದು ಲಕ್ಷ ಮಿತಿಯೊಳಗೆ ಮನ್ನಾ ಮಾಡಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ರೂ.೨.೭೦ಲಕ್ಷ ಹಣವನ್ನು ಏಳು ಜನ ಮೃತಪಟ್ಟ ಸಾಲಗಾರ ಸದಸ್ಯರ ಸಾಲ ಮನ್ನಾ ಮಾಡಲಾಗಿರುತ್ತದೆ. ಇದು ಯಾವುದೇ ಸಹಕಾರಿ ಸಂಸ್ಥೆಯಲ್ಲಿ ಇಲ್ಲದ ಈ ವ್ಯವಸ್ಥೆ ನಮ್ಮ ನಮ್ಮ ಸಂಘದಲ್ಲಿ ಅಳವಡಿಸಲಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಸದಸ್ಯರಿಗೆ ಇನ್ನಿತರ ಸೇವಾ ಸೌಲಭ್ಯಗಳನ್ನು ಲಾಕರ್ ಸೌಲಭ್ಯ, ಇ ಸ್ಟ್ಯಾಂಪಿAಗ್, ಮೊಬೈಲ್ ಹಾಗೂ ಟಿವಿ ರಿಚಾರ್ಜ್ ರೈಲ್ವೆ ಬುಕಿಂಗ್, ಆರ್ ಟಿ ಸಿ ಸೇವಾ ಸೌಲಭ್ಯವನ್ನು ನೀಡಲಾಗುತ್ತಿದೆ, ಸಂಸ್ಥೆಯಲ್ಲಿ ಒಂಬತ್ತು ಸಿಬ್ಬಂದಿಗಳು ಇದ್ದು ಸೇವಾ ಮನೋಭಾವನೆಯಿಂದ ಸೇವೆಯನ್ನು ಸಲ್ಲಿಸಿರುತ್ತಾರೆ. ಸಂಸ್ಥೆಯ ದೈನಂದಿನ ಠೇವಣಿ ಸಂಗ್ರಹಕಾರಾಗಿ ಆರು ಜನ ಏಜೆಂಟರು ಕಾರ್ಯನಿರ್ವಹಿಸುತ್ತಿದ್ದಾರೆ.
ಸಂಸ್ಥೆಯು ಗೋಣಿಕೊಪ್ಪದಲ್ಲಿ ಪ್ರತ್ಯೇಕ ಶಾಖೆಯನ್ನು ಹೊಂದಿದ್ದು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಗೋಣಿಕೊಪ್ಪ ಶಾಖೆಯು ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೂ.೧೦.೧೯ ಲಕ್ಷ ಲಾಭ ಗಳಿಸಿರುತ್ತದೆ. ಗೋಣಿಕೊಪ್ಪ ಶಾಖೆಗೆ ಸ್ವಂತ ಕಟ್ಟಡವನ್ನು ನಿರ್ಮಿಸಲು ಗೋಣಿಕೊಪ್ಪದ ಎಂ.ಎA. ಲೇಔಟ್ ನಲ್ಲಿ ೫.೫೦ ಸೆಂಟು ಜಾಗವನ್ನು ರೂ. ೫೦ ಲಕ್ಷ ಹಣದಲ್ಲಿ ನಿವೇಶನ ಖರೀದಿಸಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ, ನವೆಂಬರ್ ತಿಂಗಳಲ್ಲಿ ಹೊಸ ಕಟ್ಟಡದಲ್ಲಿ ಮುಂದುವರೆಯಲಿದೆ . ನಮ್ಮ ಸಂಘದ ಎರಡನೇ ಶಾಖೆಯನ್ನು ಟಿ. ಶೆಟ್ಟಿಗೇರಿ- ಶ್ರೀಮಂಗಲ ನಡುವೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಸಮೀಪದ ಕಟ್ಟಡದಲ್ಲಿ ಮುಂದಿನ ತಿಂಗಳಲ್ಲಿ ತೆರೆಯಲಾಗುವುದು ಇದರ ಪೂರ್ವ ಸಿದ್ಧತೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು. ಸಂಘದ ವಾರ್ಷಿಕ ಮಹಾಸಭೆಯು ತಾ. ೭ ರಂದು ರಂದು ಸಂಘದ ಸಭಾಂಗಣದಲ್ಲಿ ನಡೆಸಲಾಗುವುದು, ಸರ್ವ ಸದಸ್ಯರು ಹಾಜರಾಗುವಂತೆ ಅವರು ಕೋರಿದರು.
ಸಂಸ್ಥೆ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಚಿರಿಯಪಂಡ ಕೆ. ಕಾಶಿಯಪ್ಪ, ನಿರ್ದೇಶಕರುಗಳಾದ ಕಬ್ಬಚ್ಚಿರ ಎಂ.ಚಿದAಬರ, ಕಡೆಮಾಡ ಜಿ.ಭೀಮಯ್ಯ, ಕಳ್ಳಿಚಂಡ ಜಿ. ಕುಶಾಲಪ್ಪ, ಮುದ್ದಿಯಡ ಪಿ ಪ್ರಕಾಶ್, ಐನಂಡ ಕೆ. ಮಂದಣ್ಣ, ಕಳ್ಳಿಚಂಡ ಡಿ. ಪೂಣಚ್ಚ, ಗುಮ್ಮಟ್ಟಿರ ಜಿ ಗಂಗಮ್ಮ, ಚೊಟ್ಟೆಕಾಳಪಂಡ ಪಿ ಆಶಾ, ಕೋದೇಂಗಡ ಎಸ್. ಸುರೇಶ್, ಕೂಕಂಡ ಎನ್. ಕಾವೇರಪ್ಪ, ಮಾಣಿಯಪಂಡ ಜಿ. ಪಾರ್ವತಿ, ಹಾಗೂ ಸಂಘದ ಸಿ.ಇ.ಒ ಮದ್ರೀರ ಎಸ್. ಗಣಪತಿ ಹಾಜರಿದ್ದರು.