ಶನಿವಾರಸಂತೆ, ಸೆ. ೬: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕೋಣಿಗನಹಳ್ಳಿ ಗ್ರಾಮದ ಶ್ರೀಲಕ್ಷಿö್ಮÃ ಚನ್ನಕೇಶವ ಕೃಪಾಪೋಷಿತ ನಾಟಕ ಮಂಡಳಿಯ ಕಲಾವಿದರು, ಹೂವಿನ ಹಡಗಲಿ ಕರ್ನಾಟಕ ಬರಹಗಾರರ ಸಂಘದ ವತಿಯಿಂದ ಮೈಸೂರಿನ ಪುರಭವನದಲ್ಲಿ ಆಯೋಜಿಸಿದ್ದ ‘ರಂಗ ಕಲರವ’ ಕಾರ್ಯಕ್ರಮದಲ್ಲಿ ಪೌರಾಣಿಕ ನಾಟಕ ಪ್ರದರ್ಶನ ನೀಡಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೋಣಿಗನಹಳ್ಳಿ ಗ್ರಾಮದ ನಿವೃತ್ತ ವಿದ್ಯಾರ್ಥಿನಿಲಯದ ಮೇಲ್ವಿಚಾರಕ ಕೆ.ಪಿ. ಗುರುವಪ್ಪ ಅವರ ನಿರ್ದೇಶನದಲ್ಲಿ ನಾಟಕ ಪ್ರದರ್ಶನಗೊಂಡಿತು. ರಂಗ ಕಲಾವಿದ ಹಾಗೂ ಶಿಕ್ಷಕ ಕೆ.ಎನ್. ಕಿರಣ್ ಕುಮಾರ್ ಅವರು ಶನಿದೇವರ ಪಾತ್ರದಲ್ಲಿ, ಪ್ರದೀಪ್ ಅವರು ನಾರದನ ಪಾತ್ರದಲ್ಲಿ, ರವಿ ಅವರು ಲಕ್ಷಿö್ಮÃದೇವಿಯ ಪಾತ್ರದಲ್ಲಿ, ಕೆ.ಎನ್. ಕಿಶನ್ ಕುಮಾರ್ ಅವರು ಮಹಾಂದತನ ಪಾತ್ರದಲ್ಲಿ ಹಾಗೂ ಕೆ.ಎಚ್. ದುರ್ಗೇಶ್ ಅವರು ವಿಷ್ಣುವಿನ ಪಾತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.