ಸಿದ್ದಾಪುರ, ಸೆ. ೬: ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ತಾ. ೮ ರಂದು ಕಾರ್ಮಿಕ ಸಂಘಟನೆ ವತಿಯಿಂದ ವಿಧಾನಸೌಧ ಚಲೋ ಕಾರ್ಯಕ್ರಮದ ಅಂಗವಾಗಿ ಪ್ರಚಾರ ಸಭಾ ಕಾರ್ಯಕ್ರಮವು ಸಿದ್ದಾಪುರ ನೆಲ್ಲಿಹುದಿಕೇರಿ, ಪಾಲಿಬೆಟ್ಟ ವ್ಯಾಪ್ತಿಯಲ್ಲಿ ನಡೆಯಿತು.
ಈ ಸಂದರ್ಭ ಸಿ.ಐ.ಟಿ.ಯು. ಸಂಘಟನೆಯ ಮುಖಂಡರಾದ ಪಿ.ಆರ್. ಭರತ್, ಕಾರ್ಮಿಕ ಸಂಘಟನೆಗಳ ಪ್ರಮುಖರಾದ ಎನ್.ಡಿ. ಕುಟ್ಟಪ್ಪನ್, ಹೆಚ್.ಬಿ. ರಮೇಶ್, ಟಿ.ಟಿ. ಉದಯ್ ಕುಮಾರ್, ಮೊಣಪ್ಪ, ಅಬ್ದುಲ್ ರಹಿಮಾನ್ ಇನ್ನಿತರರು ಹಾಜರಿದ್ದರು.