ಮುಳ್ಳೂರು, ಸೆ. ೬: ಇತ್ತೀಚಿನ ದಿನಗಳಲ್ಲಿ ರೈತರು ಕೃಷಿಯತ್ತ ಆಸಕ್ತಿ ಕಳೆದುಕೊಳ್ಳುತ್ತಿದ್ದು ನಗರ ಜೀವನದತ್ತ ಆಸಕ್ತಿ ತೋರುತ್ತಿದ್ದಾರೆ. ಗ್ರಾಮಗಳಲ್ಲಿ ಹೊಲ, ಗದ್ದೆ, ತೋಟಗಳಿದ್ದರೂ ರೈತರು ಕಾರ್ಮಿಕರ ಸಹಾಯದಿಂದ ವ್ಯವಸಾಯ ಮಾಡುತ್ತಾರೆ ಸೋಮವಾರಪೇಟೆ ತಾಲೂಕಿನಲ್ಲಿ ಬಹಳಷ್ಟು ರೈತರು ಭತ್ತ ಬೆಳೆಯುತ್ತಿದ್ದ ಗದ್ದೆಯಲ್ಲಿ ಅಡಿಕೆ, ಕಾಫಿ, ಬಾಳೆ ಬೆಳೆಯುತ್ತಿದ್ದಾರೆ ಮತ್ತು ಗ್ರಾಮಗಳಲ್ಲೂ ಒಗ್ಗಟ್ಟು, ಭಾವೈಕ್ಯತೆ ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಗ್ರಾ.ಪಂ.ಗೆ ಸೇರಿದ ಹೆಗ್ಗಳ ಎಂಬ ಪುಟ್ಟ ಗ್ರಾಮದಲ್ಲಿ ಗ್ರಾಮಕ್ಕೆ ಸೇರಿದ ಗದ್ದೆಯಲ್ಲಿ ಹಲವಾರು ವರ್ಷಗಳಿಂದ ಗ್ರಾಮಸ್ಥರೆಲ್ಲಾರೂ ಸೇರಿಕೊಂಡು ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾರೆ. ಇದರಿಂದ ಬರುವ ಆದಾಯವನ್ನು ಗ್ರಾಮದ ಅಭಿವೃದ್ದಿ, ಗ್ರಾಮ ದೇವರ ವಾರ್ಷಿಕ ಪೂಜೆ, ದೇವಸ್ಥಾನದ ಅಭಿವೃದ್ಧಿ ಕೆಲಸಗಳಿಗೆ ಉಪಯೋಗಿಸುತ್ತಾರೆ.
ಹೆಗ್ಗಳ ಪುಟ್ಟ ಗ್ರಾಮವಾಗಿದ್ದು ೨೭ ಮನೆಗಳಿದ್ದು ಸುಮಾರು ೧೫೦ ಮಂದಿ ಜನಸಂಖ್ಯೆಯನ್ನು ಹೊಂದಿದ್ದು ವ್ಯವಸಾಯ ಮೂಲ ಕಸುಬಾಗಿದೆ. ಗ್ರಾಮದಲ್ಲಿ ಪುರಾತನ ಶ್ರೀ ತಿರುಮಲದೇವಿ ದೇವಸ್ಥಾನ ಇದೆ ಇದರ ಹೆಸರಿನಲ್ಲಿ ೩.೫೦ ಏಕರೆ ಗದ್ದೆ ಮತ್ತು ೨.೨೯ ಏಕರೆ ತೋಟ ಇದ್ದು ಇದರಲ್ಲಿ ಹಲವಾರು ವರ್ಷಗಳಿಂದ ಮಹಾತ್ಮಗಾಂಧಿ ಗ್ರಾಮಾಭಿವೃದ್ದಿ ಯುವಕ ಸಂಘದ ಮೂಲಕ ಗ್ರಾಮಸ್ಥರೆಲ್ಲಾರೂ ಸೇರಿಕೊಂಡು ಭತ್ತ ಬೆಳೆದು ವ್ಯವಸಾಯ ಮಾಡುತ್ತಾರೆ. ಗದ್ದೆಯನ್ನು ಉಳಿಮೆ ವi
Áಡುವುದು, ಭತ್ತ ಬೀಜ ಬಿತ್ತನೆ, ಸಸಿ ತೆಗೆಯುವುದು ನಾಟಿ ಮಾಡುವುದು ಈ ಎಲ್ಲಾ ವ್ಯವಸಾಯ ಪ್ರಕ್ರಿಯೆಗಳನ್ನು ಗ್ರಾಮದ ಪುರುಷರು, ಮಹಿಳೆಯರು, ಯುವಕ, ಯುವತಿಯರು ಸೇರಿಕೊಂಡು ನಾಟಿ ಕಾರ್ಯ ಮಾಡುತ್ತಾರೆ ಅದೇ ರೀತಿಯಲ್ಲಿ ಈ ಬಾರಿಯು ಗ್ರಾಮಸ್ಥರು ಭತ್ತ ನಾಟಿ ಕೆಲಸ ಮಾಡಿ ಮುಗಿಸಿದ್ದಾರೆ.