ಮಡಿಕೇರಿ, ಸೆ. ೬: ಕೊಡವ ಸಂಘಟನೆಯೊAದು ಬೇಡಿಕೆಯೊಡ್ಡುತ್ತಿರುವ ಕೊಡವ ಲ್ಯಾಂಡ್, ಕೊಡವರಿಗೆ ಎಸ್.ಟಿ. ಸ್ಥಾನಮಾನ, ಭೌಗೋಳಿಕ ಹಾಗೂ ರಾಜಕೀಯ ಸ್ಥಾನಮಾನ ಸೇರಿದಂತೆ ಇನ್ನಿತರ ಬೇಡಿಕೆಗಳು ಗೌಡ ಸಮಾಜ ಸೇರಿದಂತೆ ಮೂಲನಿವಾಸಿಗಳಿಗೆ ಆತಂಕ ಸೃಷ್ಟಿಮಾಡಲಿದ್ದು, ಇದರ ವಿರುದ್ಧ ನ್ಯಾಯಾಂಗ ಹೋರಾಟ ಕೈಗೊಳ್ಳಲು ಕೊಡಗು ಗೌಡ ಸಮಾಜ ಒಕ್ಕೂಟದ ವಿಶೇಷ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ನಗರದ ಗೌಡ ಸಮಾಜದಲ್ಲಿ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಜಾಗೃತಿ ಮೂಡಿಸಿ, ಕೊಡವ ಸಂಘಟನೆಯೊAದು ನ್ಯಾಯಾಲಯ ಹಾಗೂ ಸರಕಾರಕ್ಕೆ ಸಲ್ಲಿಸುತ್ತಿರುವ ಬೇಡಿಕೆಯಿಂದ ಗೌಡ ಸಮುದಾಯಕ್ಕೆ ಆಗಲಿರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ‘ಪಿಪಿಟಿ ಪ್ರಸೆಂಟೇಷನ್’ ನೀಡಲಾಯಿತು.
ಒಕ್ಕೂಟದ ಉಪಾಧ್ಯಕ್ಷ ತೇನನ ರಾಜೇಶ್ ಸಂಘಟನೆಯೊAದು ಬೌಗೋಳಿಕ, ರಾಜಕೀಯ ಸ್ವಾಯತತ್ತೆ, ಎಸ್.ಟಿ. ಸ್ಥಾನಮಾನ, ಕೊಡವ ಭಾಷೆಯನ್ನು ೮ನೇ ಪರಿಚ್ಛೇಧಕ್ಕೆ ಸೇರಿಸುವುದು, ಶಸ್ತಾçಸ್ತç ಹೊಂದುವ ಹಕ್ಕು ಹೀಗೆ ನಾನಾ ವಿಷಯಗಳ ಕುರಿತು ನ್ಯಾಯಾಂಗ ಹೋರಾಟ ನಡೆಸುತ್ತಿರುವ ಕುರಿತು ನಡೆಯುತ್ತಿರುವ ವಿದ್ಯಮಾನಗಳನ್ನು ‘ಪಿಪಿಟಿ ಪ್ರಸೆಂಟೇಷನ್’ ಮೂಲಕ ಪ್ರಸ್ತುತಪಡಿಸಿದರು.
ರಾಜಕೀಯ ಸ್ಥಾನಮಾನ, ಕೊಡವ ಲ್ಯಾಂಡ್ ಹಕ್ಕೊತ್ತಾಯಗಳು ಗೌಡ ಸಮುದಾಯ ಸೇರಿದಂತೆ ಇತರೆ ಸಮುದಾಯಗಳ ಮೇಲೂ ಪರಿಣಾಮ ಬೀರಲಿದ್ದು, ಇದರ ವಿರುದ್ಧ ನ್ಯಾಯಾಂಗ ಹೋರಾಟದ ಅವಶ್ಯಕತೆ ಇದೆ ಎಂದು ಹೇಳಿದರು.
ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ ಮಾತನಾಡಿ, ಕೊಡವ ಸಂಘಟನೆ ನ್ಯಾಯಾಲಯಕ್ಕೆ ವಿವಿಧ ವಿಚಾರಗಳ ಕುರಿತು ಅರ್ಜಿ ಸಲ್ಲಿಸಿದ್ದು, ಇದರ ವಿರುದ್ಧ ವಿಚಾರದಲ್ಲಿ ನ್ಯಾಯಾಂಗ ಹೋರಾಟ ಕೈಗೊಳ್ಳಲಾಗುತ್ತಿದ್ದು, ಗೌಡ ಸಮುದಾಯ ಇದರ ಪಾಲುದಾರಿಕೆ ಹೊಂದಬೇಕು. ಗೌಡ ಜನಾಂಗವು ಎಲ್ಲ ಸಮುದಾಯಗಳೊಂದಿಗೆ ಸೌಹಾರ್ದಯುತವಾಗಿ ಬದುಕಿಕೊಂಡು ಬಂದಿದೆ. ಆದರೆ ಕೆಲವರು ಈ ಸೌಹಾರ್ದ ವಾತಾವರಣಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಜನಾಂಗದ ಹಿತಾಸಕ್ತಿಗೆ ಮಾರಕವಾಗಬಹುದಾದ
೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಅಂಶಗಳನ್ನು ವಿರೋಧಿಸುವುದು ಅನಿವಾರ್ಯವಾಗಿದೆ. ಒಂದು ಜನಾಂಗಕ್ಕೆ ಮಾತ್ರ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಬೇಡಿಕೆ ಈಡೇರಿದರೆ, ಅದು ಆ ಜನಾಂಗದ ಪ್ರಾಬಲ್ಯಕ್ಕೆ ಕಾರಣವಾಗಬಹುದು. ಆದ್ದರಿಂದ ಇಂತಹ ವಿಚಾರಗಳಲ್ಲಿ ನ್ಯಾಯಾಲಯದ ಮೂಲಕ ಪ್ರತಿರೋಧ ವ್ಯಕ್ತಪಡಿಸಬೇಕಾಗಿದೆ ಎಂದರು.
ಯಾವುದೇ ಜನಾಂಗದ ಮೇಲೆ ಗೌಡ ಸಮುದಾಯಕ್ಕೆ ದ್ವೇಷ ಅಥವಾ ಅಸೂಯೆ ಇಲ್ಲ. ನಮ್ಮ ಜನಾಂಗದ ಹಕ್ಕು, ಅಸ್ತಿತ್ವ ಮತ್ತು ಭವಿಷ್ಯದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ಹೋರಾಟ ನಡೆಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಹಿರಿಯ ವಕೀಲ ಕುಡೆಕಲ್ ವಿದ್ಯಾಧರ ಮಾತನಾಡಿ, ಸ್ವಾತಂತ್ರö್ಯ ಹೋರಾಟದಲ್ಲಿ ದೊಡ್ಡ ಪಾಲು ಗೌಡ ಸಮುದಾಯ ಹೊಂದಿದೆ. ಇದೀಗ ಕೊಡವ ಸಮುದಾಯ ಬುಡಕಟ್ಟು ಪರಿಶಿಷ್ಟ ಸ್ಥಾನಮಾನ ಬಯಸುತ್ತಿದ್ದಾರೆ. ಮಾನದಂಡದಡಿ ಇದನ್ನು ನೀಡಲು ಸಾಧ್ಯವಿಲ್ಲ ಎಂದು ಸಂಬAಧಿಸಿದ ಅಧಿಕಾರಿಗಳು ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೂ ಹಕ್ಕು ಕೇಳಲಾಗುತ್ತಿದೆ. ಕೊಡವ ಸಂಘಟನೆಯೊAದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಗಳ ವಿರುದ್ಧ ಹೋರಾಟ ಅಗತ್ಯವಾಗಿದ್ದು, ಜನಾಂಗದವರು ಹಣಕಾಸು ನೆರವು ನೀಡಬೇಕು ಎಂದು ಮನವಿ ಮಾಡಿದರು.
ನಿವೃತ್ತ ಪ್ರಾಂಶುಪಾಲ ಕುಯ್ಯಮುಡಿ ಅಶ್ವಿನ್ ಕುಮಾರ್ ಮಾತನಾಡಿ, ಕಸ್ತೂರಿ ರಂಗನ್ ವರದಿಯ ಸಾಧಕ-ಬಾಧಕಗÀಳ ಬಗ್ಗೆ ಮಾತನಾಡಿದರು.
ಇದೇ ಸಂದರ್ಭ ಕಾನೂನು ಹೋರಾಟಕ್ಕೆ ಅಗತ್ಯವಾದ ಆರ್ಥಿಕ ಕ್ರೋಢಿಕರಣಕ್ಕೂ ಚಾಲನೆ ನೀಡಲಾಯಿತು. ಬೆಂಗಳೂರು ಗೌಡ ಸಮಾಜದಿಂದ ರೂ. ೧ ಲಕ್ಷ ಹಣದ ಚೆಕ್ ವಿತರಿಸಲಾಯಿತು.
ಸಭೆಯಲ್ಲಿ ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಬೆಂಗಳೂರು ಗೌಡ ಸಮಾಜದ ಅಧ್ಯಕ್ಷ ಮನೋಜ್ ಅಯ್ಯೇಟಿ, ಮಡಿಕೇರಿ ಗೌಡ ಸಮಾಜದ ಅಧ್ಯಕ್ಷ ದಂಬೆಕೋಡಿ ಆನಂದ್, ಕುದುಪಜೆ ಮೋಹನ್, ಒಕ್ಕೂಟದ ಕಾರ್ಯದರ್ಶಿ ಪೇರಿಯನ ಉದಯ, ಅಂಬೆಕಲ್ಲು ನವೀನ್ ಸೇರಿದಂತೆ ಇನ್ನಿತರರು ಹಾಜರಿದ್ದರು.