ಮಡಿಕೇರಿ, ಸೆ. ೬: ಈ ಬಾರಿ ಗೌರಿ ಗಣೇಶೋತ್ಸವ ಆಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಉತ್ಸವ ಸಮಿತಿಗಳು ಎಚ್ಚರವಹಿಸಬೇಕೆಂದು ಉತ್ಸವ ಸಮಿತಿಗಳಿಗೆ ಸೂಚನೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅಹಿತಕರ ಘಟನೆಗಳು ನಡೆದರೆ ಆಯೋಜಕರೆ ಜವಾಬ್ದಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.
ನಗರದ ಸಮುದ್ರ ಹೊಟೇಲ್ ಸಭಾಂಗಣದಲ್ಲಿ ಪೊಲೀಸ್ ಮಡಿಕೇರಿ ಉಪವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಗೌರಿಗಣೇಶೋತ್ಸವ ಸಮಿತಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಈ ವರ್ಷ ಏಕಗವಾಕ್ಷಿ ಸಮಿತಿಯನ್ನು ಜಿಲ್ಲೆಯಲ್ಲಿ ರಚಿಸಲಾಗಿದ್ದು, ಸದರಿ ಸಮಿತಿಯಲ್ಲಿ ಆಯಾ ತಾಲೂಕಿನ ತಹಶೀಲ್ದಾರರು, ಪರಿಸರ ಅಧಿಕಾರಿಗಳು, ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ, ಚೆಸ್ಕಾಂ ಇಲಾಖೆ, ಅಗ್ನಿಶಾಮಕ ಇಲಾಖೆ, ತಾಲೂಕು ಪಂಚಾಯ್ತಿಯ ಕಾರ್ಯನಿರ್ವಾಹಣಾ ಅಧಿಕಾರಿಯವರು, ಪಂಚಾಯ್ತಿ ಮತ್ತು ನಗರ ಸಭೆಯ ಮುಖ್ಯ ಅಧಿಕಾರಿಯವರು ಇರಲಿದ್ದಾರೆ. ಒಂದು ವಾರ ಮುಂಚಿತವಾಗಿ ಗಣೇಶ ಸಮಿತಿಯವರು ಮನವಿಯನ್ನು ಸಲ್ಲಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಈ ಸಮಿತಿ ತಾ. ೧೩ ರವರೆಗೆ ಚಾಲ್ತಿಯಲಿರುತ್ತದೆ. ಗಣೇಶ ಪ್ರತಿಷ್ಟಾಪನಾ ಸ್ಥಳ ಖಾಸಗಿ/ ಸಾರ್ವಜನಿಕ ಸ್ಥಳವಾಗಿದ್ದಲ್ಲಿ ಸಂಬAಧಿಸಿದ ಸ್ಥಳದ ಮಾಲೀಕರಿಂದ/ಪ್ರಾಧಿಕಾರದಿAದ ಲಿಖಿತ ಅನುಮತಿಯನ್ನು ಪಡೆದುಕೊಳ್ಳಬೇಕು. ಗೌರಿ ಗಣೇಶ ಪ್ರತಿಷ್ಠಾಪನೆ ಸಂಬAಧ ಸಂಘಟಕರಿಗೆ ಅನುಕೂಲವಾಗುವಂತೆ ಪೊಲೀಸ್, ಕಂದಾಯ, ಅಗ್ನಿಶಾಮಕ, ಲೋಕೋಪಯೋಗಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಇಲಾಖೆಗಳ ವತಿಯಿಂದ ನಿರಾಕ್ಷೇಪಣ ಪತ್ರ ಕಡ್ಡಾಯವಾಗಿದ್ದು ಅವುಗಳನ್ನು ಪಡೆಯಲು ಈ ಬಾರಿ ಏಕಗವಾಕ್ಷಿ ಪದ್ಧತಿ ವ್ಯವಸ್ಥೆಯನ್ನು ಜಿಲ್ಲೆಯ ೫ ತಾಲೂಕುಗಳಲ್ಲೂ ಮಾಡಲಾಗುವುದು. ಗೌರಿ ಗಣೇಶ ಪ್ರತಿಷ್ಠಾಪನೆ ಸಂಬAಧ ಎಲ್ಲಾ ಆಯೋಜಕರ ಐ.ಡಿ. ಕಾರ್ಡ್, ಪ್ರತಿಷ್ಠಾಪನಾ ಸ್ಥಳ, ಮೆರವಣಿಗೆ ಮಾರ್ಗ, ವಿಸರ್ಜನಾ ದಿನಾಂಕ ಮುಂತಾದವುಗಳ ವಿವರಗಳನ್ನು ಮುಂಚಿತವಾಗಿ ಆಯೋಜಕರು ಸ್ಥಳೀಯ ಪೊಲೀಸ್ ಠಾಣೆಗೆ ನೀಡಬೇಕು. ಆಯೋಜಕರು ಗೌರಿ ಗಣೇಶ ಪ್ರತಿಷ್ಠಾಪನೆ ಮಾಡಿದ ನಂತರ ಗೌರಿ ಗಣೇಶ ಮೂರ್ತಿಗಳ ವಿಸರ್ಜನೆ ದಿನದವರೆಗೂ ಸ್ವಯಂ ಸೇವಕರುಗಳನ್ನು ನೇಮಿಸಬೇಕು. ಗೌರಿ ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಜೂಜಾಟ ಇತ್ಯಾದಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಬಾರದು. ತಪ್ಪಿದಲ್ಲಿ ಆಯೋಜಕರುಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಎಲ್ಲಾ ಗೌರಿ ಗಣೇಶ ಪ್ರತಿಷ್ಠಾಪನಾ ಸ್ಥಳಗಳಲ್ಲಿ ಆಯೋಜಕರುಗಳು ಕಡ್ಡಾಯವಾಗಿ ತಾತ್ಕಾಲಿಕ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಎಸ್ಪಿ ಹೇಳಿದರು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಪ್ಲೆಕ್ಸ್, ಬ್ಯಾನರ್, ಬಂಟಿAಗ್ಸ್, ಆರ್ಚ್ ಮುಂತಾದವುಗಳನ್ನು ಅಳವಡಿಸಲು ಸಂಬAಧಿಸಿದ ಇಲಾಖೆಗಳಿಂದ ನಿಯಮಾನುಸಾರ ಅನುಮತಿ ಪಡೆದು ಗುರುತಿಸಿದ ಸ್ಥಳಗಳಲ್ಲಿ ಅಳವಡಿಸಿ ಕಾರ್ಯಕ್ರಮ ಮುಗಿದ ಕೂಡಲೇ ಅವುಗಳನ್ನು ತೆರವುಗೊಳಿಸಬೇಕು. ಗಣೇಶ ಮೂರ್ತಿಗಳನ್ನು ಖರೀದಿಸುವ ಸಮಯದಲ್ಲಿ ಎತ್ತರ ಹಾಗೂ ಅಗಲ ಕಡಿಮೆ ಇರುವ ಮೂರ್ತಿಗಳನ್ನು ಖರೀದಿಸಬೇಕು. ಹಾಗೂ ವಿಸರ್ಜನಾ ವೇಳೆಯಲ್ಲಿ ವಾಹನದ ಪರಿಮಿತಿಯಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ಇರಿಸಿ ಮೆರವಣಿಗೆ ತೆರಳಲು ಕ್ರಮ ವಹಿಸಬೇಕು. ಹೆಚ್ಚಿನ ಎತ್ತರ ಹಾಗೂ ಅಗಲವಿರುವ ಮೂರ್ತಿಗಳನ್ನು ಬಳಸಿ ಮೆರವಣಿಗೆ ವೇಳೆ ಯಾವುದೇ ಅನಾಹುತಗಳು ಸಂಭವಿಸಿದಲ್ಲಿ ಆಯೋಜಕರುಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಗೌರಿ ಗಣೇಶ ಮೂರ್ತಿಗಳ ವಿಸರ್ಜನಾ ವೇಳೆಯಲ್ಲಿ ನದಿ, ಕೆರೆ, ಬಾವಿ ಇತ್ಯಾದಿ ಸ್ಥಳಗಳಲ್ಲಿ ನೀರಿಗೆ ಇಳಿಯುವಾಗ ಈಜು ಗೊತ್ತಿರುವವರನ್ನು ಇಳಿಸಬೇಕು. ಪ್ರತಿ ಗೌರಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನಾ ಪೆಂಡಲ್ಗಳಲ್ಲಿ ಬೆಂಕಿ ಅನಾಹುತಗಳನ್ನು ತಪ್ಪಿಸಲು ಕಡ್ಡಾಯವಾಗಿ ಒಂದು ಬಕೆಟ್ ನೀರು ಹಾಗು ಒಂದು ಬಕೆಟ್ ಮರಳು ಇಟ್ಟುಕೊಳ್ಳಬೇಕು. ಗೌರಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನಾ ಪೆಂಡಲ್ಗಳಲ್ಲಿ ಹಾಗೂ ವಿಸರ್ಜನಾ ಸ್ಥಳಗಳಲ್ಲಿ ಒಳ್ಳೆಯ ಬೆಳಕಿನ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಪ್ರತಿಯೊಬ್ಬ ಆಯೋಜಕರುಗಳು ಗೌರಿ ಗಣೇಶ ಹಬ್ಬದ ಸಂಬAಧ ಸರ್ಕಾರ ಹೊರಡಿಸಿದ ಎಸ್ಓಪಿಯನ್ನು ಓದಿ ತಿಳಿದುಕೊಳ್ಳಬೇಕು ಹಾಗೂ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು. ಅದರ ಪ್ರತಿಯನ್ನು ಪ್ರತಿ ಆಯೋಜಕರುಗಳಿಗೆ ನೀಡಲಾಗುವುದು ಎಂದು ಬಿಂದುಮಣಿ ನುಡಿದರಲ್ಲದೆ ಪೊಲೀಸ್ ಇಲಾಖೆ ವತಿಯಿಂದ ಗೌರಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನಾ ಹಾಗೂ ವಿಸರ್ಜನಾ ಸಂಬAಧ ಸರ್ಕಾರದ ಮಾರ್ಗಸೂಚಿ ಮತ್ತು ನಿಯಮಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಲಾಗುತ್ತಿದೆ ಎಂದರು.
ಗೌರಿ ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಸಮಯ ಪರಿಪಾಲನೆ ಮಾಡಬೇಕು. ಧ್ವನಿವರ್ಧಕ (ಡಿ.ಜೆ.)ಗಳನ್ನು ನಿಗದಿತ ಡೆಸಿಬಲ್ ಗಳಿಗಿಂತ ಹೆಚ್ಚಾಗಿ ಬಳಸಿದಲ್ಲಿ ಅಂತವರುಗಳ ವಿರುದ್ಧ ಕಲಂ ೧೫ ಪರಿಸರ ಸಂರಕ್ಷಣಾ ಕಾಯ್ದೆಯ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಳೆದ ಬಾರಿ ಒಂದು ಲಾರಿಯ ತುಂಬಾ ಸ್ಪೀಕರ್ ಬಾಕ್ಸ್ಗಳನ್ನು ತುಂಬಿಕೊAಡು ಡಿ.ಜೆ. ಬಳಸಿದ್ದು ಗಮನಕ್ಕೆ ಬಂದಿದ್ದು, ಈ ಬಗ್ಗೆ ತÀನ್ನ ಬಳಿ ಭಾವಚಿತ್ರವಿದೆ. ಈ ಬಾರಿ ಅಂತಹ ವಾಹನಗಳು ಕಂಡು ಬಂದಲ್ಲಿ ಅವುಗಳನ್ನು ಪೊಲೀಸ್ ವಶಕ್ಕೆ ಪಡೆದುಕೊಂಡು ಕೇಸು ದಾಖಲಿಸಲಾಗುವುದು.
Pಡಿessuಡಿe miಜ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಹೊರಡಿಸಲಾದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರತೀ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನಾ ಆಯೋಜಕರುಗಳನ್ನೊಳಗೊಂಡAತೆ ಜಿಲ್ಲಾ ಮಟ್ಟದಲ್ಲಿ ಒಂದು ವಾಟ್ಸಾö್ಯಪ್ ಗ್ರೂಪ್ನ್ನು ರಚಿಸಿ ಪೊಲೀಸ್ ಇಲಾಖೆಯಿಂದ ಕಾಲಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸಬೇಕು ಹಾಗೂ ಆಯೋಜಕರು ತಮ್ಮ ಮಾಹಿತಿಯನ್ನು ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು. ಗಣೇಶೋತ್ಸವವನ್ನು ಅಚ್ಚುಕಟ್ಟಾಗಿ ಆಚರಿಸುವ ಸಂಬAಧ ಪೊಲೀಸ್ ಇಲಾಖೆಯೊಂದಿಗೆ ಉತ್ಸವ ಸಮಿತಿಗಳು ಕೈಜೋಡಿಸಬೇಕು. ಎಂದು ಎಸ್ಪಿ ಬಿಂದುಮಣಿ ಹೇಳಿದರು.
ಡಿವೈಎಸ್ಪಿ ಸೂರಜ್ ಮಾತನಾಡಿ, ಗೌರಿ ಗಣೇಶ ಮೂರ್ತಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸುವ ಸಮಯದಲ್ಲಿ ಪೊಲೀಸ್ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಗೌರಿ ಗಣೇಶ ಪ್ರತಿಷ್ಟಾಪನಾ ಸ್ಥಳ, ಬ್ಯಾನರ್ ಬಂಟಿAಗ್ಸ್ ಅಳವಡಿಕೆಯ ಸಂಬAಧ ಪಟ್ಟ ನಗರ ಸಭೆ, ಚೆಸ್ಕಾಂ, ಅಗ್ನಿಶಾಮಕ, ಹಾಗೂ ಇತರೆ ಸಂಬAಧಪಟ್ಟ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಗೌರಿ ಗಣೇಶ ಪ್ರತಿಷ್ಟಾಪನಾ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಮುಂಚಿತವಾಗಿ ಇಲಾಖೆಗೆ ಮಾಹಿತಿ ನೀಡಬೇಕು. ಭದ್ರತೆ ದೃಷ್ಟಿಯಿಂದ ಗಣೇಶ ಮೂರ್ತಿಗಳ ಪ್ರತಿಷ್ಟಾಪನಾ ಸ್ಥಳದಲ್ಲಿ ಸಿಸಿ ಕ್ಯಾಮರಾವನ್ನು ಅಳವಡಿಸುವುದು. ಹಾಗೂ ದಿನದ ೨೪ ಗಂಟೆಗಳಲ್ಲಿಯೂ ಕಾವಲಿಗೆ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಬೇಕು. ಗಣೇಶ ಪೆಂಡಾಲ್ಗೆ ಹಾಗೂ ಗಣೇಶ ವಿಸರ್ಜನಾ ಮೆರವಣಿಗೆಗೆ ಧ್ವನಿವರ್ಧಕ ಬಳಕೆಗೆ ಪ್ರತ್ಯೇಕ ಪ್ರತ್ಯೇಕವಾಗಿ ಅನುಮತಿಯನ್ನು ಪಡೆಯಬೇಕು. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಧ್ವನಿವರ್ಧಕ ಬಳಕೆಯನ್ನು ಬೆಳಿಗ್ಗೆ ೬ ಗಂಟೆಯಿAದ ರಾತ್ರಿ ೧೦ ಗಂಟೆಯವರೆಗೆ ಮಾತ್ರ ಬಳಸಬೇಕು. ರಸ್ತೆ, ಫುಟ್ಪಾತ್ಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ಮೂರ್ತಿಗಳನ್ನು ಪ್ರತಿಷ್ಟಾಪಿಸಬಾರದು ಗೌರಿ, ಗಣೇಶ ಮೂರ್ತಿಗಳ ಪ್ರತಿಷ್ಟಾಪನೆ ಸಂಬAಧ ಸಾರ್ವಜನಿಕರಿಂದ/ವಾಹನ ಚಾಲಕರಿಂದ/ಅAಗಡಿ ಮುಂಗಟ್ಟುಗಳಿAದ ಬಲವಂತವಾಗಿ ಚಂದಾ ವಸೂಲಿ ಮಾಡಬಾರದು. ಅನಧಿಕೃತವಾಗಿ ವಿದ್ಯುತ್ ಕಂಬಗಳಿAದ ವಿದ್ಯುತ್ ಪಡೆಯದೇ, ಚೆಸ್ಕಾಂ ಇಲಾಖೆಯಿಂದ ಅನುಮತಿ ಪಡೆದುಕೊಂಡು ವಿದ್ಯುತ್ ಬಳಸಬೇಕು. ಮೆರವಣಿಗೆ ಸಮಯದಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗದAತೆ ನೋಡಿಕೊಳ್ಳಬೇಕು. ಗಣೇಶ ವಿಸರ್ಜನೆಗೆ ಬಳಸುವ ವಾಹನವನ್ನು ಪರಿವರ್ತಿಸುವುದಾದರೆ ಸಂಬAಧಪಟ್ಟ ಆರ್.ಟಿ.ಓ ಅವರಿಂದ ಅನುಮತಿ ಪಡೆದುಕೊಳ್ಳಬೇಕೆಂದು ಹೇಳಿದರು.
ನಂತರ ನಗರ ಸಭಾ ಸದಸ್ಯ ಅರುಣ್ ಶೆಟ್ಟಿ ಮಾತನಾಡಿ ಮಡಿಕೇರಿ ನಗರದಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಇದರಿಂದ ಗಣೇಶ ವಿಸರ್ಜನಾ ಮೆರವಣಿಗೆ ಸಾಗಲು ಕಷ್ಟವಾಗಿದೆ. ಹಾಗೂ ರಸ್ತೆ ಬದಿ ಕಾಡನ್ನು ಕಡಿದು ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಕೋರಿದರು.
ಅಂಜಪರವAಡ ಕುಶಾಲಪ್ಪ ಮಾತನಾಡಿ, ಮೆರವಣಿಗೆ ಸಮಯದಲ್ಲಿ ಡಿಜೆ ಬಳಸುವುದಾದಲ್ಲಿ ಹಗಲಿನಲ್ಲಿ ಹಾಗೂ ರಾತ್ರಿ ಸಮಯದಲ್ಲಿ ಎಷ್ಟು ಡೆಸಿಬಲ್ ಇರಬೇಕು ಎಂಬುದರ ಬಗ್ಗೆ ವಿವರಣೆ ಬಯಸಿದರು.
ಶಾಂತಿನಿಕೇತನ ಚೇತನ್ ಮಾತನಾಡಿ, ಡಿ.ಜೆ ಬಳಸಲು ರಾತ್ರಿ ೧೧ ಗಂಟೆಯವರೆಗೆ ಅನುಮತಿ ನೀಡುವಂತೆ, ಸಿಂಗಲ್ ವಿಂಡೋ ಸಮಿತಿಯನ್ನು ಆದಷ್ಟು ಬೇಗ ತೆರೆಯುವಂತೆ ಕೋರಿದರು.
ಪ್ರಸನ್ನ ಭಟ್ ಮಾತನಾಡಿ, ಬೇರೆ ತಾಲೂಕುಗಳಲ್ಲಿ ಸಹ ಗಣೇಶ ಮೆರವಣಿಗೆಯಲ್ಲಿ ಡಿ.ಜೆಯನ್ನು ರಾತ್ರಿ ೧೦ ಗಂಟೆಗೆ ನಿಲ್ಲಿಸುವಂತೆ ನೋಡಿಕೊಂಡಲ್ಲಿ ನಾವು ಇದರ ನಿಯಮವನ್ನು ಪಾಲಿಸುತ್ತೇವೆ ಎಂದರು.
ಮುನೀಶ್ವರ ದೇವಸ್ಥಾನ ಸಮಿತಿಯ ಸದಸ್ಯರು ಮಾತನಾಡಿ ಮೆರವಣಿಗೆ ಸಮಯದಲ್ಲಿ ಬ್ಯಾಂಡ್ ಸೆಟ್ ಅನ್ನು ರಾತ್ರಿ ೧೦ರ ನಂತರ ನಿಲ್ಲಿಸುವಂತೆ ಪೊಲೀಸರು ಸೂಚಿಸುತ್ತಾರೆ. ಈ ಬಗ್ಗೆ ಪರಿಶೀಲಿಸಿ ಎಂದು ಮನವಿ ಮಾಡಿದರು.
ಚರಣ್ ಮಾತನಾಡಿ, ಮೆರವಣಿಗೆ ಸಾಗುವ ರಸ್ತೆಗಳಲ್ಲಿ ವಿದ್ಯುತ್ ಲೈನ್ಗಳು ತುಂಬಾ ಕೆಳ ಭಾಗದಿಂದ ಹಾದು ಹೋಗಿದ್ದು, ಇದರಿಂದಾಗಿ ಮೆರವಣಿಗೆಗೆ ತುಂಬಾ ತೊಂದರೆ ಉಂಟಾಗುತ್ತದೆ ಆದ್ದರಿಂದ ಸಂಬAಧÀಪಟ್ಟ ಕೆ.ಇ.ಬಿ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿದರು.
ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಡಿ.ಜೆಯನ್ನು ರಾತ್ರಿ ೧೦ ರ ನಂತರ ಬಳಸಬೇಡಿ, ಬ್ಯಾನರ್ ಬಂಟಿAಗ್ಸ್ ಅಳವಡಿಸಲು ಮನವಿಯನ್ನು ಸಲ್ಲಿಸಿದಲ್ಲಿ ಅನುಮತಿ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮಹಿಳಾ ಪೊಲೀಸ್ ಠಾಣೆ ನಿರೀಕ್ಷಕ ಉಮೇಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಮೋಹನ್ ಕುಮಾರ್, ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಲೋಕೋಪಯೋಗಿ ಇಲಾಖೆ ಅಭಿಯಂತರ ಪ್ರಭು ಹಾಗೂ ಚೆಸ್ಕಾಂ ಅಭಿಯಂತರರು ಇದ್ದರು.