ಮಡಿಕೇರಿ, ಸೆ. ೫: ಶ್ರೀಕೃಷ್ಣನನ್ನು ಶ್ರದ್ಧಾಭಕ್ತಿಯಿಂದ ಪೂಜಿಸುವುದರ ಜೊತೆಗೆ ಜ್ಞಾನ, ಸತ್ಯ ಹಾಗೂ ಪ್ರೀತಿಯ ಸಂಕೇತದಿAದ ನೋಡುತ್ತೇವೆ. ಈ ನಿಟ್ಟಿನಲ್ಲಿ ಶ್ರೀಕೃಷ್ಣನ ಆದರ್ಶವನ್ನು ತಿಳಿದುಕೊಳ್ಳುವಂತಾಗಬೇಕು ಎಂದು ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯ ಸಮಿತಿ ಗೌರವಾಧ್ಯಕ್ಷರಾದ ಜಿ.ವಿ. ರವಿಕುಮಾರ್ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶ್ರಾವಣ ಮಾಸದಲ್ಲಿ ಕೃಷ್ಣಾಷ್ಟಮಿಯನ್ನು ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿAದ ಆಚರಿಸಲಾಗುತ್ತಿದೆ ಎಂದರು.

ಶ್ರೀಕೃಷ್ಣನಿಗೆ ಪುಷ್ಪಾಲಂಕಾರ, ಪುಷ್ಪಾರ್ಚನೆ ಹಾಗೂ ವಿಶೇಷ ಪೂಜೆಗಳನ್ನು ಮಾಡುವುದರ ಹಿಂದಿನ ಉದ್ದೇಶ ಕೇವಲ ಆಚರಣೆಗೆ ಸೀಮಿತವಾಗಬಾರದು. ಅವರ ಆದರ್ಶ ಗುಣಗಳು, ಶಿಸ್ತು, ಪ್ರೀತಿ, ಒಗ್ಗಟ್ಟು ಮತ್ತು ಸಹಬಾಳ್ವೆಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೃಷ್ಣನ ಸಂದೇಶಗಳು ಇನ್ನಷ್ಟು ಪ್ರಸ್ತುತವಾಗಿವೆ. ಆಡಂಬರದ ಆಚರಣೆಗಿಂತ ಕೃಷ್ಣನ ಜೀವನ ಮೌಲ್ಯಗಳನ್ನು ಪಾಲಿಸುವುದು ಮುಖ್ಯ ಎಂದು ಹೇಳಿದರು.

ಮಹಾಭಾರತ ಯುದ್ಧದ ಸಂದರ್ಭದಲ್ಲಿ ಅರ್ಜುನನಿಗೆ ಶ್ರೀಕೃಷ್ಣ ನೀಡಿದ ಭಗವದ್ಗೀತೆಯ ಉಪದೇಶ ಇಂದಿಗೂ ಮಾನವಕುಲಕ್ಕೆ ದಾರಿದೀಪವಾಗಿದೆ. ಮಾನವನ ಬದುಕು, ಕರ್ತವ್ಯ, ಧರ್ಮ ಮತ್ತು ಜೀವನ ಮೌಲ್ಯಗಳಿಗೆ ಸಂಬAಧಿಸಿದ ಎಲ್ಲಾ ಸಂದೇಶಗಳು ಭಗವದ್ಗೀತೆಯಲ್ಲಿ ಅಡಕವಾಗಿವೆ ಎಂದು ತಿಳಿಸಿದರು.

ಗೌಳಿ ಸಮುದಾಯದವರು ಕೃಷ್ಣಾ ಷ್ಟಮಿಯನ್ನು ವಿಶೇಷವಾಗಿ ಆರಾಧಿಸುತ್ತಿದ್ದು, ಗೋವರ್ಧನಗಿರಿಯನ್ನು ಎತ್ತಿ ಗೋವುಗಳು ಹಾಗೂ ಗೋಪಾಲಕರನ್ನು ರಕ್ಷಿಸಿದ ಶ್ರೀಕೃಷ್ಣನ ಜೀವನ ಪ್ರಸಂಗಗಳು ಸಮುದಾಯದೊಂದಿಗೆ ವಿಶೇಷ ಸಂಬAಧ ಹೊಂದಿವೆ ಎಂದು ತಿಳಿಸಿದರು.

ಶ್ರೀಕೃಷ್ಣನ ಬಾಲ್ಯದ ಜೀವನದಿಂದ ಹಿಡಿದು ಮಹಾಭಾರತದವರೆಗಿನ ಪ್ರತಿಯೊಂದು ಘಟನೆಯೂ ಜೀವನಕ್ಕೆ ಪಾಠವಾಗಿದೆ. ಸಂಕಷ್ಟಗಳನ್ನು ಎದುರಿಸುವ ಧೈರ್ಯ, ಕೆಟ್ಟದ್ದನ್ನು ತೊರೆದು ಒಳ್ಳೆಯತನದ ಹಾದಿಯಲ್ಲಿ ಸಾಗುವ ಗುಣ ಹಾಗೂ ಧರ್ಮದ ಪರವಾಗಿ ನಿಲ್ಲುವ ಸಂದೇಶವನ್ನು ಕೃಷ್ಣ ನೀಡಿದ್ದಾನೆ ಎಂದರು.

ಕುಶಾಲನಗರ ನಿವೃತ್ತ ಕಲಾ ಶಿಕ್ಷಕರಾದ ಉ.ರಾ. ನಾಗೇಶ್ ಅವರು ಉಪನ್ಯಾಸ ನೀಡಿ, ಕೃಷ್ಣನ ಜೀವನ ಸಂದೇಶಗಳು ಇಂದಿಗೂ ಪ್ರಸ್ತುತ. ಬದುಕುವ ಕಲೆಯನ್ನು ತೋರಿಸಿದ ಯೋಗೇಶ್ವರ. ಕೃಷ್ಣ ಜನ್ಮಾಷ್ಟಮಿ ಇತರ ಜಯಂತಿಗಳಿಗಿAತ ವಿಭಿನ್ನವಾದ ಆಚರಣೆಯಾಗಿದ್ದು, ಭಗವಂತನನ್ನು ಮನುಷ್ಯ ರೂಪದಲ್ಲಿ ಕಂಡುಕೊAಡ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಮಡಿಕೇರಿ ನಗರಸಭೆ ಅಧ್ಯಕ್ಷರಾದ ಪಿ. ಕಲಾವತಿ, ಕೃಷ್ಣಾಷ್ಟಮಿ ಹಬ್ಬವು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಮಕ್ಕಳಲ್ಲಿ ಸಂಭ್ರಮ, ಉತ್ಸಾಹ ಹಾಗೂ ಕುಟುಂಬಗಳಲ್ಲಿ ಸಂತಸದ ವಾತಾವರಣವನ್ನು ಮೂಡಿಸುವ ವಿಶೇಷ ಹಬ್ಬವಾಗಿದೆ ಎಂದರು.

ಸಮಿತಿ ಖಜಾಂಚಿ ಜಿ.ಸಿ. ರಮೇಶ್ ಮಾತನಾಡಿ, ಕಾರಾಗೃಹದಲ್ಲಿ ಜನಿಸಿದ ಶ್ರೀಕೃಷ್ಣನು ತನ್ನ ಜೀವನದುದ್ದಕ್ಕೂ ಧರ್ಮ, ನ್ಯಾಯ ಮತ್ತು ಕರ್ತವ್ಯದ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ ಎಂದು ಹೇಳಿದರು.

ಮಡಿಕೇರಿ ತಾಲೂಕು ತಹಶೀಲ್ದಾರ್ ಶ್ರೀಧರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯ ಸಮಿತಿ ಅಧ್ಯಕ್ಷರಾದ ಜಿ.ಎಲ್.ದಾಸ, ಗೌರವಾಧ್ಯಕ್ಷರಾದ ಜಿ.ಎ. ಚಾಮಿ, ಜಿ.ಜಿ.ಬಾಲಕೃಷ್ಣ, ಉಪಾಧ್ಯಕ್ಷರಾದ ಜಿ.ಸಿ. ಜಗದೀಶ್, ಪ್ರಧಾನ ಕಾರ್ಯದರ್ಶಿ ಜಿ.ಆರ್. ಗಣೇಶ್, ನಿರ್ದೇಶಕರಾದ ರಘುರಾಮ್, ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಎಚ್.ಎಲ್. ದಿವಾಕರ್, ಮಹಿಳಾ ಸಂಚಾಲಕಿ ಪ್ರೇಮಾ ಕೃಷ್ಣಪ್ಪ ಪಾಲ್ಗೊಂಡಿದ್ದರು.

ರಮ್ಯ ನಿರೂಪಿಸಿದರು, ಬ್ಲಾಸಂ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿ, ವಂದಿಸಿದರು.