ವೀರಾಜಪೇಟೆ, ಸೆ. ೫: ವೀರಾಜಪೇಟೆಯ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ವತಿಯಿಂದ ಆಯೋಜಿಸಲಾಗಿರುವ ೧೮ನೇ ವರ್ಷದ ಓಣಂ ಆಚರಣೆಗೆ ಮುತ್ತಪ್ಪ ದೇವಾಲಯದಲ್ಲಿ ಸಂಜೆ ಪೈಂಗುತ್ತಿ ಇಡುವುದರ ಮೂಲಕ ಚಾಲನೆ ನೀಡಲಾಯಿತು.

ತಾ. ೬ ರಂದು ನಡೆಯಲಿರುವ ಓಣಂ ಆಚರಣೆಯ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ ೮.೩೦ಕ್ಕೆ ಮಹಾಬಲಿಯನ್ನು ಬರಮಾಡಿಕೊಂಡು, ದೀಪ ಬೆಳಗಿಸುವ ಮೂಲಕ ಪ್ರಮುಖ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಬೆಳಿಗ್ಗೆ ೯.೩೦ಕ್ಕೆ ಶ್ರೀ ಚೈತನ್ಯ ಮಠದ ಮುತ್ತಪ್ಪ ದೇವಸ್ಥಾನದಿಂದ ಮಹಾಬಲಿಯ ವೈಭವದ ಮೆರವಣಿಗೆ ಆರಂಭಗೊAಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಲಿದೆ.ಮಧ್ಯಾಹ್ನ ೧೨ ಗಂಟೆಗೆ ಭಕ್ತಾದಿಗಳಿಗೆ ಸಾಂಪ್ರದಾಯಿಕ ಓಣಂ ಸದ್ಯ ವ್ಯವಸ್ಥೆ ಮಾಡಲಾಗಿದೆ. ಮೆರವಣಿಗೆ ಸಂದರ್ಭ ಶ್ರೀ ಕೃಷ್ಣನ ವೇಷಧಾರಿಗಳು ಗಮನ ಸೆಳೆಯಲಿದ್ದಾರೆ. ಕಾರ್ಯಕ್ರಮದಲ್ಲಿ ಮಕ್ಕಳ ಕೃಷ್ಣ ವೇಷ ಪ್ರದರ್ಶನವೂ ಇರಲಿದೆ.

ಇಂದು ಚಾಲನೆ ಸಂದರ್ಭ ಸಂದರ್ಭ ವೀರಾಜಪೇಟೆಯ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ. ಸುಮೇಶ್, ಕಾರ್ಯದರ್ಶೀ ಸಿ.ಆರ್. ಬಾಬು ಸೇರಿದಂತೆ ಇತರರು ಇದ್ದರು.