ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಕೆಳಗೆ ಸಹಿ ಮಾಡಿರುವ ಕುಶಾಲನಗರದ ವಕೀಲರಾದ ಶ್ರೀ ಜಗದೀಶ ಕೆ.ಆರ್, ವಕೀಲರು ಇವರ ಮೂಲಕ ಪ್ರಕಟಿಸುವುದೇನೆಂದರೆ, ಅನುಸೂಚಿಯಲ್ಲಿ ವಿವರಿಸಿರುವ ಆಸ್ತಿಯು ಎಸ್.ಜಿ. ನೇತ್ರಾವತಿ.ಮತ್ತು ಹೆಚ್.ವಿ. ಲತಾಮಣಿ ಅವರಿಗೆ ಸೇರಿದ್ದಾಗಿರುತ್ತದೆ. ಅವರು ಮನೆ ಬದಲಾಯಿಸುವ ಸಮಯದಲ್ಲಿ ಮೂಲ ಕ್ರಯಪತ್ರವು ಸೋಮವಾರಪೇಟೆಯ ನೊಂದಾವಣೆ ಕಚೇರಿಯ ೧ನೇ ಪುಸ್ತಕದ ೭೦೪ನೇ ಸಂಪುಟದ ನೊಂದಾಯಿತ ಕ್ರಯಪತ್ರ ಸಂಖ್ಯೆ ೩೨೮/೯೧-೯೨ ರ ದಾಖಲೆಯು ಕಳೆದುಹೋಗಿರುತ್ತದೆ.
ಮೇಲ್ಕಂಡ ಮೂಲ ದಾಖಲೆಯನ್ನು ಹುಡುಕಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದರೂ ಸಹ ಅವುಗಳು ಪತ್ತೆಯಾಗಿರುವುದಿಲ್ಲ ಹಾಗೂ ಕಳೆದುಹೋಗಿವೆ / ತಪ್ಪಿಹೋಗಿವೆ ಎಂದು ಭಾವಿಸಲಾಗಿದೆ. ಈ ಸಂಬAಧ ಸದರಿ ದಾಖಲೆಗಳು ಕಳೆದುಹೋದ ಬಗ್ಗೆ ಸಂಬAಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಮೇಲ್ಕಂಡ ದಾಖಲೆಗಳು ಮತ್ತು / ಅಥವಾ ಅನುಸೂಚಿ ಆಸ್ತಿಯ ಬಗ್ಗೆ ಯಾವುದೇ ವ್ಯಕ್ತಿ ಬ್ಯಾಂಕ್, ಹಣಕಾಸು ಸಂಸ್ಥೆ, ಪ್ರಾಧಿಕಾರ ಅಥವಾ ಇತರೆ ಯಾವುದೇ ವ್ಯಕ್ತಿಗೆ ಯಾವುದೇ ರೀತಿಯ ಹಕ್ಕು, ಶೀರ್ಷಿಕೆ, ಆಸಕ್ತಿ, ಹಕ್ಕುಭಾರ, ಜಪ್ತಿ, ಅಡಮಾನ, ವಶ, ಸ್ವಾಧೀನ ಅಥವಾ ಆಕ್ಷೇಪಣೆ ಇದ್ದಲ್ಲಿ, ಅದಕ್ಕೆ ಸಂಬAಧಿಸಿದ ಸೂಕ್ತ ದಾಖಲೆಗಳೊಂದಿಗೆ ಈ ಪ್ರಕಟಣೆ ಪ್ರಕಟವಾದ ದಿನಾಂಕದಿAದ ೭ (ಏಳು) ದಿನಗಳೊಳಗಾಗಿ ಕೆಳಗೆ ಸಹಿ ಮಾಡಿರುವ ವಕೀಲರಿಗೆ ಲಿಖಿತವಾಗಿ ತಿಳಿಸತಕ್ಕದ್ದು.
ನಿಗದಿತ ಅವಧಿಯೊಳಗೆ ಯಾವುದೇ ಹಕ್ಕು ಅಥವಾ ಆಕ್ಷೇಪಣೆ ಸ್ವೀಕರಿಸದಿದ್ದಲ್ಲಿ, ಯಾವುದೇ ವ್ಯಕ್ತಿಯಿಂದ ಯಾವುದೇ ಹಕ್ಕು ಅಥವಾ ಆಕ್ಷೇಪಣೆ ಇರುವುದಿಲ್ಲವೆಂದು ಪರಿಗಣಿಸಲಾಗುವುದು. ನಂತರ ಎಸ್.ಜಿ. ನೇತ್ರಾವತಿ ಮತ್ತು ಹೆಚ್.ವಿ. ಲತಾಮಣಿ ಅವರು ಸಂಬAಧಪಟ್ಟ ಇಲಾಖೆಯಿಂದ ಸದರಿ ದಾಖಲೆಗಳ ಪ್ರಮಾಣೀಕೃತ ಪ್ರತಿಗಳ ನಕಲು ಪ್ರತಿಗಳನ್ನು ಪಡೆದು. ಕಾನೂನು ಪ್ರಕಾರ ಸದರಿ ಆಸ್ತಿಯನ್ನು SಃI ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಅಡಮಾನ ಮಾಡಲು ಆಕ್ಷೇಪಣೆ ಇರುವುದಿಲ್ಲವೆಂದು ಪರಿಗಣಿಸಲಾಗುವುದು. ಮೇಲ್ಕಂಡ ಅವಧಿ ಮುಗಿದ ನಂತರ ಸಲ್ಲಿಸಲಾಗುವ ಯಾವುದೇ ಹಕ್ಕು ಅಥವಾ ಆಕ್ಷೇಪಣೆಯನ್ನು ಪರಿಗಣಿಸಲಾಗುವುದಿಲ್ಲ.
ಅನುಸೂಚಿತ ಆಸ್ತಿ ವಿವರ
ಕುಶಾಲನಗರ ತಾಲೂಕು ಮುಳ್ಳುಸೋಗೆ ಗ್ರಾಮದ ಸರ್ವೆ ನಂ.೮ರ ೦.೦೫ ಏಕ್ರೆ ಮನೆದಳವಾಗಿ ಪರಿವರ್ತಿತ ಜಾಗವು ಕುಶಾಲನಗರ ಮುನಿಸಿಪಾಲಿಟಿಯ ವ್ಯಾಪ್ತಿಯೊಳಗೆ ಇರುತ್ತದೆ. ಇದರ ಚಕ್ಕುಬಂದಿ: ಪೂರ್ವಕ್ಕೆ ಸೈಟ್ ನಂ.೧, ಪಶ್ಚಿಮಕ್ಕೆ ಸೈಟ್ ನಂ.೯, ಉತ್ತರಕ್ಕೆ ಸೈಟ್ ನಂ.೬ ಮತ್ತು ೭, ದಕ್ಷಿಣಕ್ಕೆ ರಸ್ತೆ ಇರುತ್ತದೆ.
೦೪.೦೯.೨೦೨೬ ಕೆ.ಆರ್. ಜಗದೀಶ, ವಕೀಲರು, ಕುಶಾಲನಗರ,
ಕುಶಾಲನಗರ ಮೊ. ೯೪೪೯೪೦೨೩೩೮, ೭೨೦೪೩೩೦೬೬೩
ಎಸ್.ಜಿ. ನೇತ್ರಾವತಿ ಮತ್ತು ಹೆಚ್.ವಿ. ಲತಾಮಣಿ ಇವರ ಪರವಾಗಿ