ಮಡಿಕೇರಿ, ಸೆ. ೪: ೨೦೨೬-೨೭ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಮಡಿಕೇರಿ ತಾಲ್ಲೂಕಿಗೆ ಸಂಬAಧಿಸಿದAತೆ ಕೆ.ಬಾಡಗ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸರಸ್ವತಿ ಬಿ.ಕೆ, ಅಯ್ಯಂಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್.ಎಸ್. ಶಾಂತಿ ಮತ್ತು ಮೂರ್ನಾಡು ಪ್ರೌಢ ಶಾಲೆಯ ಪ್ರಶಾಂತ್ ಎಸ್.ಡಿ. ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸೋಮವಾರಪೇಟೆ ತಾಲೂಕಿಗೆ ಸಂಬAಧಿಸಿದAತೆ ಕಲ್ಕಂದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಉಮೇಶ್ ಕುಮಾರ್ ಕೆ.ಪಿ., ನೆಲ್ಲಿಹುದಿಕೇರಿ ಕೆಪಿಎಸ್ ಪ್ರಾಥಮಿಕ ಶಾಲೆಯ ರೆಮ್ಮಿ ಪಿ.ಸಿ., ನೇರುಗಳಲೆ ಸರ್ಕಾರಿ ಪ್ರೌಢಶಾಲೆಯ ರತ್ನ ಕುಮಾರ್ ಕೆ.ಆರ್. ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಹಾಗೆಯೇ ವೀರಾಜಪೇಟೆ ತಾಲೂಕಿಗೆ ಸಂಬAಧಿಸಿದAತೆ ಬಾಳುಗೋಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇರಿ ಲೋಬೋ, ಕುಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಲೀಮಾ ಪಿ.ಹೆಚ್. ಹಾಗೂ ಪೊನ್ನಂಪೇಟೆ ಕೆಪಿಎಸ್ ಪ್ರೌಢಶಾಲೆಯ ಅನ್ರಿತಾ ಫುಟಾರ್ಡೊ ಅವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಹೇಶ್ ತಿಳಿಸಿದ್ದಾರೆ.
ಅನುದಾನ ರಹಿತ ಶಾಲಾ ಶಿಕ್ಷಕರು
ಸೋಮವಾರಪೇಟೆಯ ಸುಜಲಾದೇವಿ, ನೆಲ್ಯಹುದಿ ಕೇರಿಯ ವಿಶಾಲಕ್ಷಿ ಎ.ಎ, ಪೊನ್ನಂಪೇಟೆಯ ರೀಣಾ ಕೆ.ಎಸ್., ಟಿ. ಶೆಟ್ಟಿಗೇರಿಯ ನವ್ಯಾ ಗಂಗಮ್ಮ ಸಿ.ಎ., ವೀರಾಜಪೇಟೆಯ ವಿಮಲಾ ವಿ.ಎಸ್. ಹಾಗೂ ಸೈಯದಾ ನಖತ್ ಅಸ್ಯಾ ಅವರುಗಳು ಅನುದಾನ ರಹಿತ ಶಾಳೆಯ ಜಿಲ್ಲಾಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಭಾಜನರಾಗಿದ್ದಾರೆ.