ಇತ್ತೀಚಿಗೆ ೮೦ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹು ಸಂಭ್ರಮ ದಿಂದ ಆಚರಿಸಲಾಯಿತು.
ಸ್ವಾತಂತ್ರ್ಯ ಎನ್ನುವುದು ಕೇವಲ ಧ್ವಜ ಹಾರಿಸುವ ದಿನವಲ್ಲ. ನಾವು ಯಾರನ್ನು ಆಯ್ಕೆ ಮಾಡಬೇಕು, ಅವರು ಹೇಗೆ ಆಡಳಿತ ನಡೆಸಬೇಕು, ಸರ್ಕಾರವನ್ನು ಯಾರು ಪ್ರಶ್ನಿಸಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ನಮಗೆ ದೊರೆತ ದಿನವೂ ಹೌದು. ಆ ಸ್ವಾತಂತ್ರ್ಯದ ಪ್ರಮುಖ ಸಂಸ್ಥೆಗಳಲ್ಲಿ ನಮ್ಮ ಸಂಸತ್ತು ಕೂಡ ಒಂದು. ಆದರೆ ಸ್ವಾತಂತ್ರ್ಯ ದಿನಾಚರಣೆಯ ಮುನ್ನವೇ ಮುಗಿದ ಸಂಸತ್ತಿನ ಮುಂಗಾರು ಅಧಿವೇಶನವನ್ನು ನೋಡಿದಾಗ ಒಂದು ಪ್ರಶ್ನೆ ಸಹಜವಾಗಿ ಮೂಡುತ್ತದೆ. ಜನರು ತಮ್ಮ ಪ್ರತಿನಿಧಿಗಳನ್ನು ಸಂಸತ್ತಿಗೆ ಕಳುಹಿಸುವುದು ಚರ್ಚೆ ನಡೆಸಲು, ಪ್ರಶ್ನೆ ಕೇಳಲು, ಸರ್ಕಾರವನ್ನು ಉತ್ತರದಾಯಿತ್ವ ವನ್ನಾಗಿಸಲು. ಹಾಗಿದ್ದರೆ ಸಂಸತ್ತಿನ ಕಲಾಪವೇ ನಡೆಯದಿದ್ದರೆ ನಷ್ಟ ಯಾರಿಗೆ? ಇದು ಯಾವುದೇ ಒಂದು ಪಕ್ಷದ ಪ್ರಶ್ನೆಯಲ್ಲ. ಸರ್ಕಾರಕ್ಕೂ, ಪ್ರತಿಪಕ್ಷಕ್ಕೂ, ಪ್ರತಿಯೊಬ್ಬ ಸಂಸದನಿಗೂ ಸಂಬAಧಿಸಿದ ಪ್ರಶ್ನೆ.
೧೯ ದಿನಗಳ ಅಧಿವೇಶನ, ಆದರೆ ನಡೆದ ಚರ್ಚೆ ಎಷ್ಟು?
೨೦೨೬ರ ಮುಂಗಾರು ಅಧಿವೇಶನ ಜುಲೈ ೨೦ರಿಂದ ಆಗಸ್ಟ್ ೧೩ರವರೆಗೆ ನಡೆಯಿತು. ಎರಡೂ ಸದನಗಳು ಒಟ್ಟು ೧೯ ದಿನ ಸಭೆ ಸೇರಿದವು. ಆದರೆ ಪುನರಾವರ್ತಿತ ಗದ್ದಲ ಮತ್ತು ಕಲಾಪ ವ್ಯತ್ಯಯದಿಂದ ಸಂಸತ್ತಿನ ಕಾರ್ಯಕ್ಷಮತೆ ಬಹಳ ಕಡಿಮೆಯಾಯಿತು. PಖS ಐegisಟಚಿಣive ಖeseಚಿಡಿಛಿh ಪ್ರಕಾರ ಲೋಕಸಭೆಯ ಉತ್ಪಾದಕತೆ ಸುಮಾರು ೧೯%, ರಾಜ್ಯಸಭೆಯದು ೩೯% ಆಗಿತ್ತು.
ಅಂದರೆ, ಜನರ ಹಣದಲ್ಲಿ ನಡೆಯುವ ದೇಶದ ಅತ್ಯುನ್ನತ ಶಾಸನ ಸಂಸ್ಥೆಯಲ್ಲಿ ನಿಗದಿಪಡಿಸಿದ ಸಮಯದ ಬಹುಪಾಲು ಪರಿಣಾಮಕಾರಿ ಯಾಗಿ ಬಳಸಲಾಗಲಿಲ್ಲ. ಇದಕ್ಕಿಂತ ಆತಂಕಕಾರಿ ಸಂಗತಿ ಪ್ರಶ್ನೋತ್ತರ ವೇಳೆಯದ್ದು. ಸರ್ಕಾರವನ್ನು ನೇರವಾಗಿ ಪ್ರಶ್ನಿಸುವ, ಸಚಿವರಿಂದ ಉತ್ತರ ಪಡೆಯುವ ಅತ್ಯಂತ ಪ್ರಮುಖ ವ್ಯವಸ್ಥೆಯಾದ ಕಿuesಣioಟಿ ಊouಡಿ, ಲೋಕಸಭೆಯಲ್ಲಿ ನಿಗದಿತ ಸಮಯದ ಕೇವಲ ೧% ಮತ್ತು ರಾಜ್ಯಸಭೆಯಲ್ಲಿ ೧೨% ಮಾತ್ರ ಕಾರ್ಯನಿರ್ವಹಿಸಿದೆ ಎಂದು PಖS ತಿಳಿಸಿದೆ.
ಇದನ್ನು ಕೇವಲ “ಸಂಸತ್ತಿನಲ್ಲಿ ಗದ್ದಲವಾಯಿತು” ಎಂದು ನೋಡಬಹುದೇ? ನನ್ನ ಪ್ರಕಾರ ಸಾಧ್ಯವಿಲ್ಲ.
ಮಸೂದೆ ಪಾಸಾಗುವುದಷ್ಟೆ ಸಾಕೇ?
ಈ ಅಧಿವೇಶನದಲ್ಲಿ ಎರಡೂ ಸದನಗಳು ೧೨ ಮಸೂದೆಗಳನ್ನು ಅಂಗೀಕರಿಸಿವೆ. ಆದರೆ ಅವುಗಳಲ್ಲಿ ೧೧ ಮಸೂದೆಗಳು ಯಾವುದೇ ಸದಸ್ಯರ subsಣಚಿಟಿಣive ಜebಚಿಣe ಇಲ್ಲದೆ ಅಂಗೀಕಾರಗೊAಡಿವೆ ಎಂಬುದು ಈ ಅಧಿವೇಶನದ ಮತ್ತೊಂದು ಗಂಭೀರ ಸಂಗತಿ. ಇಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸಬೇಕು.ಮಸೂದೆ ಅಂಗೀಕಾರ ವಾಗಿರುವುದೇ ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಸರ್ಕಾರಕ್ಕೆ ತನ್ನ ಶಾಸನಾತ್ಮಕ ಕಾರ್ಯಕ್ರಮವನ್ನು ಮುಂದುವರಿಸುವ ಹಕ್ಕಿದೆ. ಬಹುಮತ ಹೊಂದಿರುವ ಸರ್ಕಾರಕ್ಕೆ ಮಸೂದೆಗಳನ್ನು ಮಂಡಿಸಿ ಅಂಗೀಕರಿಸುವ ರಾಜಕೀಯ ಅಧಿಕಾರವೂ ಇದೆ. ಆದರೆ ಪ್ರಜಾಪ್ರಭುತ್ವದ ಸೌಂದರ್ಯ ಕೇವಲ ಸಂಖ್ಯಾಬಲದಲ್ಲಿಲ್ಲ. ಒಂದು ಮಸೂದೆ ಯಲ್ಲಿರುವ ಅಂಶಗಳ ಬಗ್ಗೆ ಪ್ರಶ್ನೆ ಕೇಳುವುದು, ದೋಷವಿದ್ದರೆ ತೋರಿಸುವುದು, ತಿದ್ದುಪಡಿ ಸೂಚಿಸುವುದು, ಜನರ ಮೇಲೆ ಅದರ ಪರಿಣಾಮ ಏನಾಗಬಹುದು ಎಂದು ಚರ್ಚಿಸುವುದು, ಇವೆಲ್ಲವೂ ಸಂಸದೀಯ ಪ್ರಕ್ರಿಯೆಯ ಭಾಗ.
ಚರ್ಚೆಯಿಲ್ಲದೆ ಮಸೂದೆ ಪಾಸಾದರೆ ಕಾನೂನು ಬರುತ್ತದೆ; ಆದರೆ ಕಾನೂನಿನ ಗುಣಮಟ್ಟದ ಬಗ್ಗೆ ಸಾರ್ವಜನಿಕವಾಗಿ ವಿಶ್ವಾಸ ಹೇಗೆ ಬರುತ್ತದೆ?
ಪ್ರತಿಪಕ್ಷದ ಜವಾಬ್ದಾರಿ ಏನು?
ಪ್ರತಿಪಕ್ಷದ ಕೆಲಸ ಸರ್ಕಾರವನ್ನು ಪ್ರಶ್ನಿಸುವುದು. ಅದು ಅದರ ಹಕ್ಕು ಮಾತ್ರವಲ್ಲ, ಜವಾಬ್ದಾರಿಯೂ ಹೌದು. ಸರ್ಕಾರದ ನೀತಿಯಲ್ಲಿ ತಪ್ಪಿದ್ದರೆ ಪ್ರಶ್ನಿಸಬೇಕು. ಮಸೂದೆಯಲ್ಲಿ ದೋಷವಿದ್ದರೆ ಹೇಳಬೇಕು. ಜನರ ಸಮಸ್ಯೆಗಳನ್ನು ಸದನದಲ್ಲಿ ಎತ್ತಬೇಕು. ಸರ್ಕಾರ ಉತ್ತರ ಕೊಡದಿದ್ದರೆ ಒತ್ತಡ ತರಬೇಕು. ಆದರೆ ಸದನವೇ ನಡೆಯದಂತೆ ಮಾಡುವುದು ಪ್ರತಿಭಟನೆಯ ಅತ್ಯುತ್ತಮ ಮಾರ್ಗವೇ? ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಬಹುದು. ಮಾಧ್ಯಮಗಳ ಮೂಲಕ ಜನರ ಗಮನ ಸೆಳೆಯಬಹುದು. ಚರ್ಚೆ ಮಾಡಬಹುದು. ಮತದಾನದ ಸಂದರ್ಭದಲ್ಲಿ ಜನರ ಮುಂದೆ ತಮ್ಮ ವಾದ ಮಂಡಿಸಬಹುದು. ಆದರೆ ಸದನದೊಳಗೆ ಮಾತನಾಡುವ ಅವಕಾಶವನ್ನೇ ಕಳೆದುಕೊಂಡರೆ ಪ್ರತಿಪಕ್ಷದ ಅಸ್ತ್ರವೇ ದುರ್ಬಲವಾಗುವುದಿಲ್ಲವೇ ?
ಸರ್ಕಾರದ ಜವಾಬ್ದಾರಿಯೂ ಕಡಿಮೆ ಇಲ್ಲ:
ಇದರರ್ಥ ಎಲ್ಲಾ ತಪ್ಪೂ ಪ್ರತಿಪಕ್ಷದ್ದೇ ಎಂದು ಹೇಳುವುದೂ ಸರಿಯಲ್ಲ. ಸಂಸತ್ತು ಸುಗಮವಾಗಿ ನಡೆಯುವಂತೆ ಮಾಡುವುದು ಸರ್ಕಾರದ ಜವಾಬ್ದಾರಿಯೂ ಹೌದು. ಪ್ರತಿಪಕ್ಷದ ಪ್ರಶ್ನೆಗಳಿಗೆ ಉತ್ತರಿಸುವುದು, ಚರ್ಚೆಗೆ ಅವಕಾಶ ಕಲ್ಪಿಸುವುದು, ಅಗತ್ಯವಿದ್ದರೆ ಮಸೂದೆಗಳನ್ನು ಹೆಚ್ಚಿನ ಪರಿಶೀಲನೆಗೆ ಸಮಿತಿಗಳಿಗೆ ಕಳುಹಿಸುವುದು ಸರ್ಕಾರದ ಸಂಸದೀಯ ಹೊಣೆಗಾರಿಕೆಯಾಗಿದೆ. ಹೀಗಾಗಿ ಈ ವಿಷಯವನ್ನು “ಸರ್ಕಾರ ಸರಿ-ಪ್ರತಿಪಕ್ಷ ತಪ್ಪು” ಅಥವಾ “ಪ್ರತಿಪಕ್ಷ ಸರಿ-ಸರ್ಕಾರ ತಪ್ಪು” ಎಂಬ ಎರಡೂ ದೃಷ್ಟಿಯಿಂದ ನೋಡಬಾರದು. ಸಂಸತ್ತು ನಡೆಯದಿದ್ದರೆ ಎರಡೂ ಕಡೆಯ ಜವಾಬ್ದಾರಿಯೂ ಪ್ರಶ್ನೆಗೆ ಒಳಗಾಗಬೇಕು. ನಷ್ಟವಾಗುವುದು ಹಣ ಮಾತ್ರವಲ್ಲ ಸಂಸತ್ತಿನ ಕಲಾಪಕ್ಕೆ ಪ್ರತಿ ನಿಮಿಷಕ್ಕೆ ಸುಮಾರು ರೂ೨.೫ ಲಕ್ಷ ವೆಚ್ಚವಾಗುತ್ತದೆ ಎಂಬುದು ವ್ಯಾಪಕವಾಗಿ ಉಲ್ಲೇಖವಾಗುವ ಅಂದಾಜು. ಈ ಅಧಿವೇಶನದಲ್ಲಿ ಸುಮಾರು ೭,೦೨೩ ನಿಮಿಷಗಳ ಸಮಯ ವ್ಯತ್ಯಯಗೊಂಡಿದ್ದು, ಅದರ ಆಧಾರದ ಮೇಲೆ ರೂ.೧೭೫.೬ ಕೋಟಿಯಷ್ಟು ಸಾರ್ವಜನಿಕ ಹಣದ ಬಳಕೆ ವ್ಯರ್ಥವಾಯಿತು ಎಂಬ ಅಂದಾಜು ಹೊರಬಂದಿದೆ. ಆದರೆ ಇಲ್ಲಿ ಒಂದು ಎಚ್ಚರಿಕೆ ಅಗತ್ಯ. ರೂ. ೧೭೫.೬ ಕೋಟಿ ಅಧಿಕೃತ ಸರ್ಕಾರದ “ನಷ್ಟ”ದ ಅಂಕಿಯಲ್ಲ; ಪ್ರತಿ ನಿಮಿಷದ ಅಂದಾಜು ವೆಚ್ಚವನ್ನು ಆಧರಿಸಿದ ಲೆಕ್ಕಾಚಾರ. ಆದರೆ ನನಗೆ ಅನಿಸುವಂತೆ, ಇಲ್ಲಿ ರೂ.೧೭೫ ಕೋಟಿ ಎನ್ನುವುದು ದೊಡ್ಡ ಪ್ರಶ್ನೆಯ ಒಂದು ಭಾಗ ಮಾತ್ರ.
ನಷ್ಟವಾಗುವುದು ಜನರ ಹಣ ಮಾತ್ರವಲ್ಲ
ಒಬ್ಬ ರೈತನ ಸಮಸ್ಯೆ ಕೇಳಲು ಸಿಗದ ಸಮಯ ನಷ್ಟವಾಗುತ್ತದೆ. ಒಬ್ಬ ಯುವಕನ ಉದ್ಯೋಗದ ಪ್ರಶ್ನೆ ಕೇಳಲು ಸಾಧ್ಯವಾಗದೆ ಸಮಯ ನಷ್ಟವಾಗುತ್ತದೆ. ಬೆಲೆ ಏರಿಕೆ, ಶಿಕ್ಷಣ, ಆರೋಗ್ಯ, ಸಣ್ಣ ಉದ್ಯಮ, ಬ್ಯಾಂಕಿAಗ್, ತೆರಿಗೆ, ಮಹಿಳೆಯರ ಸಮಸ್ಯೆ, ಇಂತಹ ನೂರಾರು ವಿಷಯಗಳ ಬಗ್ಗೆ ಸರ್ಕಾರವನ್ನು ಪ್ರಶ್ನಿಸುವ ಅವಕಾಶ ನಷ್ಟವಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ಜನರ ವಿಶ್ವಾಸ ನಷ್ಟವಾಗುತ್ತದೆ.
ಸಂಸದರು ಯಾರ ಪ್ರತಿನಿಧಿಗಳು?
ನಾವು ಚುನಾವಣೆಯ ಸಮಯದಲ್ಲಿ ನಮ್ಮ ಮತವನ್ನು ಹಾಕುತ್ತೇವೆ. ಆ ಮತದ ಆಧಾರದ ಮೇಲೆ ಒಬ್ಬ ವ್ಯಕ್ತಿ ಸಂಸದನಾಗುತ್ತಾನೆ. ನಂತರ ಐದು ವರ್ಷಗಳ ಕಾಲ ಆತ ಕೇವಲ ತನ್ನ ಪಕ್ಷದ ಪ್ರತಿನಿಧಿಯಲ್ಲ. ಅವನನ್ನು ಆಯ್ಕೆ ಮಾಡಿದ ಜನರ ಪ್ರತಿನಿಧಿ.
ಆ ಜನರಲ್ಲಿ ಅವನನ್ನು ಬೆಂಬಲಿಸಿದವರೂ ಇದ್ದಾರೆ. ವಿರೋಧಿಸಿದವರೂ ಇದ್ದಾರೆ. ಆದರೆ ಸಂಸತ್ತಿಗೆ ಹೋದ ಮೇಲೆ ಅವರ ಪರವಾಗಿ ಪ್ರಶ್ನೆ ಕೇಳುವುದು, ದೇಶದ ಕಾನೂನುಗಳ ಬಗ್ಗೆ ಚರ್ಚಿಸುವುದು ಮತ್ತು ಸರ್ಕಾರವನ್ನು ಉತ್ತರದಾಯಿಯನ್ನಾಗಿಸುವುದು ಅವನ ಕರ್ತವ್ಯ. ಹೀಗಿರುವಾಗ ಸಂಸತ್ತಿನ ಒಂದು ಪೂರ್ಣ ದಿನ ವ್ಯರ್ಥವಾದಾಗ, ಅದು ಕೇವಲ ಸಂಸದರ ಸಮಯವಲ್ಲ. ಅದು ಮತದಾರನ ಸಮಯ. ಅದು ತೆರಿಗೆದಾರನ ಹಣ. ಅದು ಪ್ರಜಾಪ್ರಭುತ್ವದ ಅವಕಾಶ.
ಹೀಗಾಗಿ ಕೊನೆಯ ಪ್ರಶ್ನೆ ಮತ್ತೆ ಅದೇ: ಸಂಸತ್ತು ನಡೆಯದಿದ್ದರೆ ನಷ್ಟ ಯಾರಿಗೆ? ಉತ್ತರ ಸ್ಪಷ್ಟ: ಕೊನೆಗೆ ನಷ್ಟವಾಗುವುದು ಜನರಿಗೇ...