ಮಡಿಕೇರಿ, ಸೆ. ೨: ಪ್ರಸಕ್ತ (೨೦೨೬-೨೭) ಸಾಲಿನ ಸಮನ್ವಯ ಶಿಕ್ಷಣ ಚಟುವಟಿಕೆಗಳ ಯಶಸ್ವಿ ಅನುಷ್ಠಾನಕ್ಕಾಗಿ ಕೊಡಗು ಜಿಲ್ಲೆಯ ಉಪ ನಿರ್ದೇಶಕರ ಕಚೇರಿಯ ಅಧೀನದಲ್ಲಿ ಬರುವ ೩ ಬಿ.ಆರ್ಸಿ ಕೇಂದ್ರಗಳಾದ ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ ತಾಲೂಕುಗಳಲ್ಲಿ ತಲಾ ಒಬ್ಬರಂತೆ ೩ ಮಾನಸಿಕ ಆರೋಗ್ಯ ಸಲಹೆಗಾರರ ನೇಮಕಾತಿ ಮಾಡುವ ಸಂಬAಧ ಅಭ್ಯರ್ಥಿಗಳಿಂದ ೨ನೇ ಬಾರಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ತಾ.೯ ರ ಸಂಜೆ ೫ ಗಂಟೆಯೊಳಗೆ :ಉಪ ನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಸಮಗ್ರ ಶಿಕ್ಷಣ ಅಭಿಯಾನ, ಕೊಡಗು ಜಿಲ್ಲೆ, ಮಡಿಕೇರಿ-ಅವರ ಕಚೇರಿಗೆ ಅರ್ಜಿ ಸಲ್ಲಿಸಲು ತಿಳಿಸಿದೆ. ಅಭ್ಯರ್ಥಿಗಳು ಮನೋವಿಜ್ಞಾನ, ಕ್ಲಿನಿಕಲ್ ಮನೋವಿಜ್ಞಾನ, ಕೌನ್ಸಿಲಿಂಗ್ ಮನೋವಿಜ್ಞಾನ ಅಥವಾ ಸಂಬAಧಿತ ವಿಷಯಗಳಲ್ಲಿ ಎಂ.ಎ, ಎಂ.ಎಸ್.ಸಿ ಪದವಿಯನ್ನು ಹೊಂದಿರಬೇಕು.
ಶಾಲೆ ಅಥವಾ ಸಮುದಾಯ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕನಿಷ್ಟ ಒಂದು ವರ್ಷದ ಅನುಭವ, ಕನ್ನಡ, ಇಂಗ್ಲಿಷ್ ಮತ್ತು ಮೂಲಭೂತ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ೬ ತಿಂಗಳಿಗೆ ಮಾತ್ರ ಸೇವೆ ಪಡೆಯಲಾಗುವುದು. ವಯೋಮಿತಿ ೨೮-೪೦ ವರ್ಷ ಒಳಪಟ್ಟವರನ್ನು ಮಾತ್ರ ಪರಿಗಣಿಸಲಾಗುವುದು. ಶಾಲಾ ಶಿಕ್ಷಣ ಇಲಾಖೆಯಿಂದ ಕಾಲ ಕಾಲಕ್ಕೆ ಹೊರಡಿಸುವ ಆದೇಶಗಳನ್ವಯ ಕ್ರಮ ಕೈಗೊಳ್ಳಲಾಗುವುದು.
ಹೆಚ್ಚಿನ ಮಾಹಿತಿಗೆ ದೂ.ಸಂ.೯೪೪೮೯೯೯೩೪೪, ೯೪೪೮೯೯೯೪೦೦, ಉಪ ನಿರ್ದೇಶಕರು ಹಾಗೂ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿಗಳು ಶಾಲಾ ಶಿಕ್ಷಣ ಇಲಾಖೆ-ಮಡಿಕೇರಿ; ಇವರನ್ನು ಸಂಪರ್ಕಿಸಬಹುದು ಎಂದು ಸಮಗ್ರ ಶಿಕ್ಷಣ ಅಭಿಯಾನದ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಹಾಗೂ ಉಪ ನಿರ್ದೇಶಕರಾದ ಮಹೇಶ್ ಅವರು ತಿಳಿಸಿದ್ದಾರೆ.