ಮಡಿಕೇರಿ, ಆ. ೨೯: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪೇರಿಯಂಡ ಪಿ. ಪೆಮ್ಮಯ್ಯ ಮತ್ತು ಜಿ.ಕೆ ದೇವಕಿ ಪೆಮ್ಮಯ್ಯ ದಂಪತಿ ಕೊಡಗು ಜಿಲ್ಲೆಯ ಲೇಖಕರುಗಳು ಬರೆದ ಉತ್ತಮ ಪುಸ್ತಕಕ್ಕೆ ಪ್ರಶಸ್ತಿಯನ್ನು ಪ್ರಧಾನಿಸುವಂತೆ ಕೋರಿ ದತ್ತಿ ಸ್ಥಾಪಿಸಿದ್ದು, ದತ್ತಿ ದಾನಿಗಳ ಆಶಯದಂತೆ ಕೊಡಗು ಜಿಲ್ಲೆಯ ಲೇಖಕ ಮತ್ತು ಲೇಖಕಿಯರು ತಾವು ಪ್ರಕಟಿಸಿರುವ ಕಥೆ, ಕವನ, ಕಾದಂಬರಿ, ಕಥಾ ಸಂಕಲನ, ವೈಚಾರಿಕ ಲೇಖನಮಾಲೆ, ಲೇಖನಗಳ ಗುಚ್ಛ ಕೃತಿಗಳನ್ನು ಈ ಪ್ರಶಸ್ತಿಯ ಸ್ಪರ್ಧೆಗೆ ಕಳುಹಿಸಬಹುದಾಗಿದೆ.
೨೦೨೬-೨೭ನೇ ಸಾಲಿನಲ್ಲಿ ನೀಡುವ ಪ್ರಥಮ ಪ್ರಶಸ್ತಿ ಪುರಸ್ಕಾರ ಪಡೆಯಲು ಆಸಕ್ತ ಲೇಖಕರು ತಾವು ರಚಿಸಿದ ಪುಸ್ತಕದ ನಾಲ್ಕು ಪ್ರತಿಗಳನ್ನು ಅರ್ಜಿಯೊಂದಿಗೆ ಕಳುಹಿಸತಕ್ಕದ್ದು. ೨೦೨೧ರ ನಂತರ ಪ್ರಕಟಿತ ಪುಸ್ತಕಗಳನ್ನು ಮಾತ್ರ ಕಳುಹಿಸತಕ್ಕದ್ದು. ಸ್ಪರ್ಧೆಗೆ ಪುಸ್ತಕ ಕಳುಹಿಸುವ ಲೇಖಕರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರಬೇಕು. ಓರ್ವ ಲೇಖಕ ಒಂದು ಕೃತಿಯನ್ನು ಮಾತ್ರ ಕಳುಹಿಸತಕ್ಕದ್ದು. ಲಕೋಟೆಯ ಮೇಲೆ ಶ್ರೀ ಪೇರಿಯಂಡ ಪಿ. ಪೆಮ್ಮಯ್ಯ ಮತ್ತು ಜಿ.ಕೆ ದೇವಕಿ ಪೆಮ್ಮಯ್ಯ ದತ್ತಿ ಪ್ರಶಸ್ತಿಗೆ ಎಂದು ಬರೆಯತಕ್ಕದ್ದು. ಕೊಡಗು ಜಿಲ್ಲೆಯ ಲೇಖಕ ಮತ್ತು ಲೇಖಕಿಯರಿಗೆ ಮಾತ್ರ ಅವಕಾಶ.
ಕೃತಿಗಳನ್ನು ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಂಬೇಡ್ಕರ್ ಭವನದ ಬಳಿ, ಸುದರ್ಶನ ವೃತ್ತ, ಮಡಿಕೇರಿ. ಮೊ. ೯೪೪೮೩ ೪೬೨೭೬. ಇಲ್ಲಿಗೆ ತಾ. ೩೧ ರ ಒಳಗಾಗಿ ತಲುಪಿಸಬೇಕೆಂದು ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.