ಮಡಿಕೇರಿ, ಆ. ೨೯: ಪ್ರಾಕೃತಿಕ ವಿಪತ್ತು ಸಂಭವಿಸಿದಾಗ ಅದನ್ನು ಎದುರಿಸುವ ಬಗ್ಗೆ ರಾಷ್ಟಿçÃಯ ವಿಪತ್ತು ನಿರ್ವಹಣಾ ಪಡೆ ವತಿಯಿಂದ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.

ನಗರದ ಸಂತ ಮೈಕಲರ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೃದಯ ಗಾಯ, ಬೆಂಕಿ ತಗಲಿದಾಗ, ಸಿಡಿಲು ಬಡಿದಾಗ, ಹಾವು ಕಚ್ಚಿದಾಗ ಹೇಗೆ ತಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ವಿಪತ್ತು ನಿರ್ವಹಣಾ ಪಡೆಯ ರೆಸ್ಕೂö್ಯ ಕಮಾಂಡರ್ ನಾಗರಾಜು ಆದರಗೆರೆ ವಿವರವಾಗಿ ಮಾಹಿತಿ ನೀಡಿದರು. ತಂಡದ ಮುಖ್ಯಸ್ಥ, ಸಬ್ ಇನ್ಸ್ಪೆಕ್ಟರ್ ಅರುಳ್ ಮುರುಘನ್ ಹಾಗೂ ೧೨ ಮಂದಿ ಸದಸ್ಯರುಗಳು ಪಾಲ್ಗೊಂಡಿದ್ದರು. ಮಕ್ಕಳಿಗೆ ಉತ್ತಮ ಮಾಹಿತಿಯನ್ನು ಒದಗಿಸಿಕೊಟ್ಟ ಹಿನ್ನೆಲೆಯಲ್ಲಿ ಶಾಲೆಯ ಫಾದರ್ ಮುರುಘನ್ ಹಾಗೂ ನಾಗರಾಜ್ ಅವರನ್ನು ಸನ್ಮಾನಿಸಿ ಗೌರವಿಸಿದರು.