ಮಡಿಕೇರಿ, ಆ. ೨೯: ಕಸ್ತೂರಿ ರಂಗನ್ ವರದಿ ಜಾರಿಯಿಂದ ಕೊಡಗಿನ ಸ್ಥಳೀಯರಿಗೆ ಯಾವುದೇ ತೊಂದರೆ ಯಾಗುವುದಿಲ್ಲ. ಬದಲಾಗಿ ಪರಿಸರ ಸಂರಕ್ಷಣೆಯೊAದಿಗೆ ಆರ್ಥಿಕ ಪ್ರೋತ್ಸಾಹವೂ ದೊರೆಯಲಿದೆ ಎಂದು ಪರಿಸರ ಹಾಗೂ ಆರೋಗ್ಯ ಪ್ರತಿಷ್ಠಾನದ ಕಾರ್ಯದರ್ಶಿ ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ೫೩ ಗ್ರಾಮಗಳು ಸೂಕ್ಷ್ಮ ಪರಿಸರ ವಲಯಕ್ಕೆ ಒಳಪಡಲಿವೆ ಎಂಬ ಹಿನ್ನೆಲೆಯಲ್ಲಿ ಕೆಲವೊಂದು ಗೊಂದಲಗಳಿವೆ. ಸ್ಥಳೀಯ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ತಳಮಟ್ಟದ ಸಮಸ್ಯೆಗಳನ್ನು ಸಂಸದರಿಗೆ ತಿಳಿಸಬೇಕು. ಸಂಬAಧಪಟ್ಟವರೊAದಿಗೆ ಸಮಗ್ರವಾಗಿ ಚರ್ಚಿಸಿ, ವರದಿಯಲ್ಲಿರುವ ಬೇಕು-ಬೇಡಗಳ ಬಗ್ಗೆ ಸ್ಪಷ್ಟತೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ಹಾನಿಕಾರಕ ಅಂಶಗಳನ್ನು ತೆಗೆದುಹಾಕಿ, ಜನರಿಗೆ ಲಾಭದಾಯಕವಾಗಿರುವ ಅಂಶಗಳನ್ನು ಉಳಿಸಿಕೊಳ್ಳಬೇಕು.ಈ ವರದಿಯಿಂದ ಕಾಫಿ ಬೆಳೆಗಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಮನೆ ನಿರ್ಮಾಣ ಸೇರಿದಂತೆ ಇತರ ನಿರ್ಮಾಣ ಚಟುವಟಿಕೆಗಳಿಗೂ ಅಡ್ಡಿಯಾಗುವುದಿಲ್ಲ. ಕೊಂಬೆ ಕಡಿಯುವುದಕ್ಕೂ ಸಮಸ್ಯೆಯಿಲ್ಲ. ಚಾಲ್ತಿಯಲ್ಲಿರುವ ನಿಯಮಗಳಂತೆ ಅಗತ್ಯ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
ಕಸ್ತೂರಿ ರಂಗನ್ ವರದಿಗೆ ಒಳಪಡುವ ಗ್ರಾಮಗಳ ಜನರನ್ನು ಅಲ್ಲಿಂದ ಖಾಲಿ ಮಾಡಿಸುತ್ತಾರೆ ಎಂಬುದು ದೊಡ್ಡ ಸುಳ್ಳಾಗಿದೆ. ಇಲ್ಲಿ ಬದುಕಲು ಯಾವುದೇ ತೊಂದರೆ ಇಲ್ಲ. ಕೊಡಗಿನ ಜನರ ಬಂದೂಕು ಹೊಂದುವ ಹಕ್ಕನ್ನು ಕಸಿದು ಕೊಳ್ಳಬಾರದು. ಈ ವಿಚಾರದಲ್ಲಿ ಶಾಸಕರು ಮುತುವರ್ಜಿ ವಹಿಸಬೇಕು ಎಂದು ಒತ್ತಾಯಿಸಿದರು. ಕಸ್ತೂರಿ ರಂಗನ್ ವರದಿಯಿಂದ ಪರಿಸರಕ್ಕೆ ಮಾರಕ ವಾಗಿರುವ ಯೋಜನೆಗಳಿಂದ ಕೊಡಗಿಗೆ ರಕ್ಷಣೆ ದೊರೆಯಲಿದೆ. ಮುಂದಿನ ಐದು ವರ್ಷಗಳಲ್ಲಿ ಗಣಿಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು. ವರದಿ ವ್ಯಾಪ್ತಿಗೆ ಬರುವ ಜನರಿಗೆ ಆರ್ಥಿಕ ಪ್ರೋತ್ಸಾಹಧನ ದೊರೆಯಲಿದೆ. ಹೀಗಾಗಿ ವರದಿಯಿಂದ ಕೊಡಗಿಗೆ ಲಾಭವೇ ಹೆಚ್ಚಿದೆ. ಲಾಭವೇ ಹೆಚ್ಚಿರುವ ಕಾರಣದಿಂದ ಇಡೀ ಜಿಲ್ಲೆಗೆ ಇದು ಅನ್ವಯಿಸಬೇಕು. ಕೊಡಗು ಕಾವೇರಿ ಜಲಾನಯನ ಪ್ರದೇಶವಾಗಿರುವುದರಿಂದ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ‘ಕೊಡಗು ಚಾರ್ಟರ್’ ಎಂಬ ಬೇಡಿಕೆಯನ್ನು ನಾವು ಮುಂದಿಡುತ್ತಿದ್ದೇವೆ. ವಿದ್ಯುತ್, ರಸ್ತೆ ಹಾಗೂ ವನ್ಯಜೀವಿ - ಮಾನವ ಸಂಘರ್ಷ ನಿಯಂತ್ರಣ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಡಲಾಗುವುದು. ವಾಣಿಜ್ಯ ಉದ್ದೇಶಕ್ಕಾಗಿ ಭೂಪರಿವರ್ತನೆ ಸ್ಥಗಿತಗೊಳಿಸಬೇಕು. ಕೊಡಗಿನಲ್ಲಿ ಜಾಗವನ್ನು ಮೂಲನಿವಾಸಿಗಳು ಹಾಗೂ ಜಮ್ಮಾ ಹಿಡುವಳಿದಾರರಿಗೆ ಮಾತ್ರ ಮಾರಾಟಕ್ಕೆ ಅವಕಾಶ ನೀಡಬೇಕು ಎಂದರು. ಪ್ರತಿಷ್ಠಾನ ಸದಸ್ಯ ಗೋಪಿನಾಥ್ ತಿಮ್ಮಯ್ಯ ಮಾತನಾಡಿ, ಕಸ್ತೂರಿ ರಂಗನ್ ವರದಿ ಸ್ಥಳೀಯರಿಗೆ ಲಾಭದಾಯಕವಾಗಿದ್ದು, ಹೊರಗಿನವರು ಮಾತ್ರ ಬಾಧಿತರಾಗಲಿದ್ದಾರೆ. ರೆಸಾರ್ಟ್ಗಳಂತಹ ವಾಣಿಜ್ಯ ಚಟುವಟಿಕೆ ನಡೆಸುವವರಿಗೆ ಮಾತ್ರ ಸಮಸ್ಯೆಯಾಗಲಿದೆ ಎಂದರು.
ಗೋಷ್ಠಿಯಲ್ಲಿ ಫ್ರ‍್ಯಾಕ್ಲಿನ್ ಹಾಗೂ ಶಾನ್ ಬೋಪಯ್ಯ ಉಪಸ್ಥಿತರಿದ್ದರು.