ಚೆಟ್ಟಳ್ಳಿ, ಆ. ೨೯: ನಾಲ್ಕುನಾಡಿನಾದ್ಯಂತ ಸಾಂಪ್ರದಾಯಿಕ ಕೈಲ್ ಪೊಳ್ದ್ ನಮ್ಮೆಯನ್ನು ಸಂಪ್ರದಾಯಬದ್ಧವಾಗಿ ಆಚರಿಸಲಾಯಿತು.

ಪಾಡಿ ಇಗ್ಗುತಪ್ಪ ದೇವಾಲಯದ ನೆಲೆಯಲ್ಲಿ ಆಗಸ್ಟ್ ೧೮ರಂದು ತಕ್ಕಮುಖ್ಯಸ್ಥರ ಸಮ್ಮುಖದಲ್ಲಿ ಜ್ಯೋತಿಷಿಗಳಿಂದ ನಾಲ್ಕುನಾಡಿನ ಕೈಲ್ ಪೊಳ್ದ್ ಆಚರಣೆಯ ಸಮಯವನ್ನು ನಿಗದಿಪಡಿಸಲಾಗಿತ್ತು.

ಅದರಂತೆ ಹಬ್ಬದ ದಿನ ನಾಡಿನ ಐನ್‌ಮನೆಗಳಲ್ಲಿ ಕುಟುಂಬಸ್ಥರು ಒಂದೆಡೆ ಸೇರಿ ಕೋವಿ, ಕತ್ತಿ ಸೇರಿದಂತೆ ಆಯುಧಗಳಿಗೆ ಪೂಜೆ ಸಲ್ಲಿಸುವುದು, ಹಬ್ಬದ ವಿಶೇಷವಾದ ತೆಂಗಿನಕಾಯಿಗೆ ಗುಂಡು ಹೊಡೆಯುವುದು ಸೇರಿದಂತೆ ವಿವಿಧ ಸಾಂಪ್ರದಾಯಿಕ ಕ್ರೀಡೆಗಳಿಗೆ ಸಿದ್ಧತೆ ನಡೆಸಲಾಗಿತ್ತು.

ನಾಲ್‌ನಾಡಿನಲ್ಲಿ ಹಲವೆಡೆ ಐನ್‌ಮನೆಗಳಲ್ಲಿ ಆಚರಿಸಿದರೆ, ಮನೆ ಮನೆಗಳಲ್ಲಿಯೂ ಆಯುಧಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.