*ಗೋಣಿಕೊಪ್ಪ, ಆ. ೨೯: ರೈತರು ಅಳವಡಿಸಿಕೊಂಡಿರುವ ೧೦ ಹೆಚ್‌ಪಿ ಮೋಟಾರ್‌ಗಳಿಗೆ ವಿದ್ಯುತ್ ಬಿಲ್ ವಿಧಿಸುತ್ತಿರುವ ಕ್ರಮ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಕೊಡಗು ಜಿಲ್ಲಾ ಸಾರ್ವಜನಿಕ ಹಿತ ರಕ್ಷಣಾ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ಗೋಣಿಕೊಪ್ಪ ಬೈಪಾಸ್ ರಸ್ತೆಯ ಸಾಯಿಬಾಬಾ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಸಿ.ಎಂ. ವಿಶ್ವನಾಥ್ ಬೋಸ್, ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಮಾತ್ರ ೧೦ ಹೆಚ್‌ಪಿ ಮೋಟಾರ್ ಅಳವಡಿಸಿಕೊಂಡಿರುವ ರೈತರಿಗೆ ವಿದ್ಯುತ್ ಬಿಲ್ ವಿಧಿಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಚೆಸ್ಕಾಂ ಇಲಾಖೆ ಸ್ಪಷ್ಟನೆ ನೀಡುವುದರ ಜೊತೆಗೆ ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹಲವು ವರ್ಷಗಳಿಂದ ಗೋಣಿಕೊಪ್ಪ ದಸರಾ ಕಾರ್ಯಕ್ರಮವು ಗೋಣಿಕೊಪ್ಪದ ಜನರಿಗೆ ಮಾತ್ರ ಸೀಮಿತವಾಗುವಂತಾಗಿದೆ. ಪೊನ್ನಂಪೇಟೆ ತಾಲೂಕಿನ ವಿವಿಧ ಸಂಘ-ಸAಸ್ಥೆಗಳನ್ನು ಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷಿಸಲಾಗುತ್ತಿದೆ. ಈ ವಿಚಾರವನ್ನು ಕ್ಷೇತ್ರದ ಶಾಸಕರು ಗಂಭೀರವಾಗಿ ಪರಿಗಣಿಸಿ, ಎಲ್ಲರನ್ನೂ ಒಳಗೊಂಡ ರೀತಿಯಲ್ಲಿ ದಸರಾ ಆಯೋಜನೆಗೆ ಕ್ರಮ ಕೈಗೊಳ್ಳಬೇಕು. ದಸರಾ ಸಮಿತಿಯಲ್ಲಿ ಎಲ್ಲಾ ಸಂಘಟನೆಗಳ ಪ್ರಮುಖರನ್ನು ಸೇರಿಸಿಕೊಂಡು ದಸರಾ ಆಚರಣೆಗೆ ಮುಂದಾಗಬೇಕು ಎಂದು ವಿಶ್ವನಾಥ್ ಬೋಸ್ ಹೇಳಿದರು.

ತಾಲೂಕು ಕಚೇರಿಯ ಆಡಳಿತ ವ್ಯವಸ್ಥೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ತಮ್ಮ ಅಗತ್ಯ ದಾಖಲೆಗಳನ್ನು ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ. ತಮ್ಮ ಕೆಲಸಗಳಿಗಾಗಿ ಪ್ರತಿನಿತ್ಯ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ ಪಾರದರ್ಶಕ ಆಡಳಿತ ನೀಡಬೇಕು ಎಂದು ಆಗ್ರಹಿಸಿದರು.

ಹೊಟೇಲ್, ಬೇಕರಿಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಆಹಾರ ಸುರಕ್ಷತೆ ಮತ್ತು ಶುಚಿತ್ವದ ಕೊರತೆ ಕಂಡುಬರುವ ಹೊಟೇಲ್, ಬೇಕರಿ, ಮೀನು ಹಾಗೂ ಮಾಂಸ ಮಾರಾಟ ಮಳಿಗೆಗಳ ಮೇಲೆ ಸಂಬAಧಿಸಿದ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾಫಿ ವ್ಯಾಪಾರದಲ್ಲಿ ಕೆಲವು ವ್ಯಾಪಾರಿಗಳಿಂದ ಬೆಳೆಗಾರರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಕಾಫಿ ತೂಕದಲ್ಲಿ ವ್ಯತ್ಯಾಸ ಮಾಡುವ ಮೂಲಕ ಬೆಳೆಗಾರರನ್ನು ಶೋಷಿಸಲಾಗುತ್ತಿದೆ ಎಂಬ ಆರೋಪಗಳಿದ್ದು, ಸಂಬAಧಿಸಿದ ಇಲಾಖೆಗಳು ತೂಕದ ಯಂತ್ರಗಳು ಹಾಗೂ ವಹಿವಾಟುಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಹೇಳಿದರು.

ಇದೇ ರೀತಿ ಮೀನು ಮತ್ತು ಮಾಂಸ ಮಾರಾಟದಲ್ಲಿಯೂ ಅಂಗಡಿಗಳ ನಡುವೆ ಬೆಲೆ ವ್ಯತ್ಯಾಸ ಕಂಡುಬರುತ್ತಿದೆ. ಇದರಿಂದ ಗ್ರಾಹಕರಿಗೆ ಅನ್ಯಾಯವಾಗುವ ಸಾಧ್ಯತೆ ಇರುವುದರಿಂದ ಸ್ಥಳೀಯ ಪಂಚಾಯಿತಿಗಳು ದರ ನಿಯಂತ್ರಣ ಹಾಗೂ ಬೆಲೆಪಟ್ಟಿ ಪ್ರದರ್ಶನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ಹಿತ ರಕ್ಷಣಾ ಸಮಿತಿ ಒತ್ತಾಯಿಸಿದೆ.

ಸಾರ್ವಜನಿಕ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷ ರಂಜನ್ ಉತ್ತಪ್ಪ, ಕಾರ್ಯದರ್ಶಿ ಕೆ.ಪಿ. ಕಾವೇರಪ್ಪ, ಸಹ ಕಾರ್ಯದರ್ಶಿ ಸ್ವಾತಿ, ಸಂಘಟನಾ ಕಾರ್ಯಾದರ್ಶಿ ಕೆ.ಎಸ್ ನರೇಂದ್ರ, ಸಲಹೆಗಾರ ಸಿ.ಎಂ. ಬೋಪಣ್ಣ, ಖಜಾಂಚಿ ಜಿ.ಎಸ್. ಪೂವಪ್ಪ, ನಿರ್ದೇಶಕರುಗಳಾದ ಕೋದೆಂಗಡ ವಿಠಲ, ದಾದಾ ಬೋಪಯ್ಯ, ಅಕ್ಕಮ್ಮ, ಕಾಳಿಮಾಡ ದಿಲೀಪ್, ಬಾಚಂಗಡ ಲೀಲಾ, ಎಂ.ಎA. ವಾಣಿ, ಎಂ.ಬಿ. ರವಿಶಂಕರ್ ಇದ್ದರು.