ಗೋಣಿಕೊಪ್ಪಲು, ಆ. ೨೮: ಗೋಣಿಕೊಪ್ಪ ಸಮೀಪದ ಕಳತ್ಮಾಡು ಹೊಸೂರು ಗ್ರಾಮದಲ್ಲಿ ಕಳೆದ ೨೦ ದಿನಗಳ ಅವಧಿಯಲ್ಲಿ ನಿಗೂಢÀ ಕಾಯಿಲೆಗೆ ತುತ್ತಾಗಿ ರೈತರ ಸುಮಾರು ೮ ಎಮ್ಮೆಗಳು ಸಾವನ್ನಪ್ಪಿರುವ ಘಟನೆಗೆ ಸಂಬAಧಿಸಿದAತೆ ಶಿವಮೊಗ್ಗದ ನುರಿತ ತಜ್ಞ ವೈದ್ಯರು ಆಗಮಿಸಿ ರಾಸುಗಳ ಮರಣೋತ್ತರ ಪರೀಕ್ಷೆ ನಡೆಸಿ ೪ ವಿಧಗಳಲ್ಲಿ ವಿಶೇಷ ಅಂಗಾAಗಳು, ರಕ್ತದ ಮಾದರಿ, ಹೃದಯ ಭಾಗ. ಕರುಳಿನ ಭಾಗಗಳನ್ನು ಸಂಗ್ರಹಿಸಿ ಹೆಚ್ಚಿನ ಪರಿಶೋಧನೆಗೆ ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ.
ಇದರಲ್ಲಿ ೨ ಕರು ಹಾಕಿರುವ ಎಮ್ಮೆ ಹಾಗೂ ೨ ಗರ್ಭ ಧರಿಸಿದ ಎಮ್ಮೆಗಳು ಸೇರಿವೆ.
ಗ್ರಾಮದ ಪ್ರಗತಿಪರ ರೈತರಾದ ಕೊಲ್ಲೀರ ಉಮೇಶ್, ಗಯಾ ಕಾವೇರಪ್ಪ, ಗೋಪಿ ಚಿಣ್ಣಪ್ಪ, ಗೌತಮ್, ಮೃದಲ್ ಸುಬ್ರಮಣಿ ಇವರುಗಳಿಗೆ ಸೇರಿದ ಎಮ್ಮೆ ಮತ್ತು ಕರುಗಳು ಸಾವನಪ್ಪಿದ್ದವು. ಒಟ್ಟು ೨೭ ರಾಸುಗಳನ್ನು ಹೊಂದಿದ್ದು ೨೦ ದಿನದಲ್ಲಿ ಈ ಸರಣಿ ಸಾವು ಸಂಭವಿಸಿತ್ತು. ಪಶು ಸಂಗೋಪನಾ ಇಲಾಖೆಯಿಂದಲೂ ರಾಸುಗಳ ಮರಣೋತ್ತರ ಪರೀಕ್ಷೆ ನಡೆಸಿದರೂ ಸಾವಿನ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿರಲಿಲ್ಲ.
ಸ್ಥಳಕ್ಕೆ ಜಿಲ್ಲಾ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಲಿಂಗರಾಜ್ ದೊಡ್ಡಮನಿ, ಅಮ್ಮತ್ತಿ ಪಶು ವೈದ್ಯಕೀಯ ಇಲಾಖೆಯ ಡಾ. ನವೀನ್, ಡಾ. ವರುಣ್, ಡಾ. ರಾಕೇಶ್, ಡಾ. ನವೀನ್ ಪೊನ್ನಂಪೇಟೆಯ ಪಶು ವೈದ್ಯಾಧಿಕಾರಿ ಡಾ. ಗಿರೀಶ್, ಶಿವಮೊಗ್ಗ ಪಶುವೈದ್ಯ ಕಾಲೇಜಿನ ಡಾ. ಎನ್.ಬಿ. ಶ್ರೀಧರ್ ಭಟ್ ಹಾಗೂ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೈಸೂರಿನ ಪ್ರಾದೇಶಿಕ ಡಯೋಗ್ನೋಸ್ಟಿಕ್ ಪ್ರಯೋಗಾಲಯದ ವಿಜ್ಞಾನಿ ಡಾ. ಸುಮಂತ್ ಸ್ಥಳಕ್ಕೆ ಆಗಮಿಸಿ ಎಮ್ಮೆಯ ಸೆಗಣಿ ಮತ್ತು ಇತ್ಯಾದಿಗಳನ್ನು ಸಂಗ್ರಹಿಸಿ ಹೆಚ್ಚಿನ ಸಂಶೋಧನೆಗಾಗಿ ಈ ಹಿಂದೆ ಮೈಸೂರಿಗೆ ಕೊಂಡೊಯ್ದಿದ್ದರು. ಇದೀಗ ಮತ್ತೊಮ್ಮೆ ಎಮ್ಮೆಯ ವಿವಿಧ ಭಾಗಗಳನ್ನು ಸಂಗ್ರಹಿಸಿ ಸಂಶೋಧನೆಗಾಗಿ ಕಳುಹಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ವೈದ್ಯ ಹಾಗೂ ಸಂಶೋಧಕ ಡಾ. ಶ್ರೀಧರ್ ಭಟ್, ಮಲೆನಾಡಿನಲ್ಲಿ ರಾಸುಗಳಿಗೆ ಬರುತ್ತಿರುವ ನಿಗೂಢ ಕಾಯಿಲೆಗಳಲ್ಲಿ ಇದೂ ಒಂದಾಗಿದ್ದು, ಸಂಶೋಧನೆಯ ಅಗತ್ಯವಿದೆ ಎಂದರು.
ದನಗಳಿಗೆ ಯಾವುದೇ ಸಮಸ್ಯೆ ಕಂಡುಬAದಿಲ್ಲ. ಎಮ್ಮೆಗಳಲ್ಲಿ ಕಂಡುಬAದಿರುವ ಕಾಯಿಲೆಗಳಲ್ಲಿ ಇದು ಮೊದಲಾಗಿದೆ. ಹೃದಯದಲ್ಲಿ ರಕ್ತಸ್ರಾವವಿದೆ, ಕರುಳಿನಲ್ಲಿ ರಕ್ತದ ಕಲೆ ಇದೆ. ಹೊಟ್ಟೆ ಭಾಗದಲ್ಲಿ ಹುಣ್ಣುಗಳಿವೆ ಎಂದರು.
ರಾಸುಗಳಿಗೆ ಬರುವ ಗಂಟಲುರೋಗ ಇದಲ್ಲ. ಸೂಕ್ಷö್ಮಣು ಜೀವಿಯಂತಹ ಹೊಸ ಪ್ರಭೇದದಿಂದ ಇದು ಆಗಿರಬಹುದು. ಹೀಗಾಗಿ ಅಂಗಾAಗಳನ್ನು ಬೆಂಗಳೂರು ಹಾಗೂ ಶಿವಮೊಗ್ಗಗಳ ಪ್ರಯೋಗಾಲಯಗಳಿಗೆ ತೆಗೆದುಕೊಂಡು ಹೋಲಾಗುವುದು ಎಂದರು.
ಇಂತಹ ರೋಗ ಲಕ್ಷಣ ಕಂಡುಬAದಲ್ಲಿ ರಾಸುಗಳನ್ನು ಮನೆಯಲ್ಲಿಯೇ ಕಟ್ಟಿಹಾಕಬೇಕು. ಪೌಷ್ಟಿಕಾಂಶ ಆಹಾರಗಳಾದ ಶೇಂಗಾ ಹಿಂಡಿಯಿAದ ಪದಾರ್ಥಗಳನ್ನು ದಿನಕ್ಕೆ ಒಂದು ಕೆಜಿಯಂತೆ ನೀಡಬೇಕು ಹಾಗೂ ರಕ್ತಹೀನತೆ ಕಂಡುಬAದಿದ್ದು, ಅದರಿಂದಾಗಿ ಉಣ್ಣಿಗಳು ಮೈಮೇಲೆ ಹರಿದಾಡುತ್ತಿವೆ ಎಂದರು.
ಅದಕ್ಕಾಗಿ ಉಣ್ಣಿ ನಾಶಕಗಳನ್ನು ಉಪಯೋಗಿಸುವಂತೆ ಸಲಹೆ ನೀಡಿದರು. - ಹೆಚ್.ಕೆ. ಜಗದೀಶ್/ಟಿ.ಎಲ್. ಶ್ರೀನಿವಾಸ್