ಮಡಿಕೇರಿ, ಆ. ೨೮: ಕರಾವಳಿ ಹಾಗೂ ಕೊಡಗು ಜಿಲ್ಲೆಯ ಸಂಪರ್ಕ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಚತುಷ್ಪರ್ಥ ರಸ್ತೆ ನಿರ್ಮಾಣ ಯೋಜನೆಗೆ ದಕ್ಷಿಣ ಕನ್ನಡ ಸಂಸದರಾದ ಬ್ರಿಜೇಶ್ ಚೌಟಾ ಅವರ ಉತ್ಸುಕತೆಯಲ್ಲಿ ನಡೆಯುತ್ತಿದೆ. ಈ ಚತುಷ್ಪಥ ರಸ್ತೆ ಮಾಣಿ ಹಾಗೂ ಸಂಪಾಜೆ ತನಕ ನಿರ್ಮಾಣವಾಗಲಿದ್ದು, ಇದಕ್ಕೆ ಸಂಬAಧಿಸಿದAತೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ. ಈ ವರದಿಯ ಪೂರ್ವ ಸಿದ್ಧತೆ ಕುರಿತಾದ ಪ್ರಗತಿಯ ವಿವರವನ್ನು ಸಂಸದರಾದ ಬ್ರಿಜೇಶ್ ಚೌಟಾ ಅವರು ಅಧಿಕಾರಿಗಳಿಂದ ಪಡೆಯುವ ಮೂಲಕ ವಿವರ ಸಂಗ್ರಹಿಸಿದರು.

ರಸ್ತೆ ವಿಸ್ತರಣೆ, ಮೂಲ ಸೌಲಭ್ಯಗಳನ್ನು ಒದಗಿಸುವ ವಿಸ್ತೃತ ಯೋಜನಾ ವರದಿ ತಯಾರಿಕೆ ಪರಿಶೀಲಿಸಿದ ಸಂಸದ ಚೌಟಾ ಅವರು ತಾಂತ್ರಿಕ ಅಂಶ ಸೇರಿದಂತೆ ಮುಂದಿನ ಯೋಜನೆಯ ಸಾಧಕ - ಬಾಧಕದ ಬಗ್ಗೆ ಅಧಿಕಾರಿಗಳಿಗೆ ಅಗತ್ಯ ಸೂಚನೆಯನ್ನೂ ನೀಡಿದರು. ಮಾಣಿ - ಸಂಪಾಜೆ ರಸ್ತೆ ಯೋಜನೆ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸಂಪರ್ಕ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವ ಉದ್ದೇಶದಿಂದ ರೂಪಿತವಾಗಿದೆ. ಚತುಷ್ಪಥ ರಸ್ತೆಯ ಅನುಷ್ಠಾನದಿಂದ ಕೊಡಗು ಹಾಗೂ ಕರಾವಳಿ ಭಾಗದ ಸಂಚಾರ ವ್ಯವಸ್ಥೆ ಮೇಲ್ದರ್ಜೆಗೇರುವದರೊಂದಿಗೆ ಪ್ರವಾಸೋದ್ಯಮಕ್ಕೂ ಉತ್ತೇಜನಕಾರಿಯಾಗುವ ನಿರೀಕ್ಷೆ ಹೊಂದಲಾಗಿದೆ. ಈ ಯೋಜನೆ ಸಂಪಾಜೆವರೆಗೆ ಮಾತ್ರ ಇದ್ದು, ಅಲ್ಲಿಂದ ಮಡಿಕೇರಿವರೆಗಿನ ಯಾವುದೇ ಗುಡ್ಡಬೆಟ್ಟಗಳನ್ನು ಅಗೆದು ರಸ್ತೆ ವಿಸ್ತರಿಸುವ ಪ್ರಸ್ತಾವನೆ ಇಲ್ಲ ಎಂದು ಹೇಳಲಾಗಿದೆ.