ಬಿಟ್ಟಂಗಾಲ, ಆ. ೨೮: ಇಂದಿನ ಕಾಲದಲ್ಲಿ ಒಳ್ಳೆಯತನಕ್ಕೆ ಜನರು ಒಲವು ತೋರಿಸುತ್ತಾರೆ ಹೊರತು ದೊಡ್ಡಸ್ತಿಕೆಗಲ್ಲ. ದೊಡ್ಡತನ ಮೆರೆಯುವ ಜನಗಳನ್ನು ಸಮಾಜ ಇಷ್ಟಪಡುವುದಿಲ್ಲ. ಆ ಕಾಲ ಮುಗಿಯಿತು. ಆದ್ದರಿಂದ ದೊಡ್ಡತನ ಬಿಟ್ಟು ಒಳ್ಳೆತನದಲ್ಲಿ ಬದುಕು ಕಟ್ಟಿಕೊಳ್ಳುವಂತೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಕರೆ ನೀಡಿದರು.
ಬಿಟ್ಟಂಗಾಲದಲ್ಲಿರುವ ಕೊಡಗು ಹೆಗ್ಗಡೆ ಸಮಾಜದಲ್ಲಿ ಅಕಾಡೆಮಿಯ ೧೮ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದು ಸಮುದಾಯದ ಸಂಸ್ಕೃತಿ, ಪದ್ಧತಿ, ಆಚಾರ-ವಿಚಾರ, ಸಂಪ್ರದಾಯಗಳನ್ನು ಪಾಠ ಪುಸ್ತಕದ ಮೂಲಕ ತಿಳಿದುಕೊಳ್ಳಲು ಸಾಧ್ಯವಿಲ್ಲ. ಇವೆಲ್ಲವನ್ನು ಪದ್ಧತಿ, ಆಚಾರ-ವಿಚಾರಗಳನ್ನು ದೊಡ್ಡತನ ಕಡೆಗಣಿಸಿದಲ್ಲಿ ಮುಂದಿನ ದಿನಗಳಲ್ಲಿ ಅಂತಹ ವ್ಯಕ್ತಿಯನ್ನು ಯಾರೂ ಇಷ್ಟಪಡುವುದಿಲ್ಲ, ವಿದ್ಯಾಸಂಸ್ಥೆಗಳಲ್ಲಿ ಮಕ್ಕಳಿಗೆ ಹಾಗೂ ಹಿರಿಯರಿಗೆ ತಿಳಿದುಕೊಳ್ಳಲು ಅನುಕೂಲವಾಗುವಂತೆ ನೀಡುವ ಉದ್ದೇಶದಿಂದ ಕೊಡವ ಪುಸ್ತಕ ಪತ್ತಾಯವನ್ನು ಸ್ಥಾಪನೆ ಮಾಡುತ್ತಿದ್ದೇವೆ ಎಂದರು.
ಕೊಡವ ಪುಸ್ತಕ ಪತ್ತಾಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಹೆಗ್ಗಡೆ ಸಮಾಜದ ಅಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ ಮಾತನಾಡಿ, ಹಿಂದಿನ ಸಾಹಿತಿಗಳಾದ ನಡಿಕೇರಿಯಂಡ ಚಿಣ್ಣಪ್ಪ, ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ, ಐ.ಮಾ. ಮುತ್ತಣ್ಣರಂತವರು ನೀಡಿರುವ ಸಾಹಿತ್ಯದಿಂದ ಇಂದು ಕೊಡವ ಸಾಹಿತ್ಯವು ಅಗಾಧವಾಗಿ ಬೆಳೆಯಲು ಸಾಧ್ಯವಾಗಿದೆ. ಹೆಗ್ಗಡೆ ಸಮಾಜದ ಮಾಜಿ ಅಧ್ಯಕ್ಷ ಪಡಿಞÁರಂಡ ಜಿ. ಅಯ್ಯಪ್ಪ ಕೊಡವ ಪುಸ್ತಕ ಪತ್ತಾಯ ಅನಾವರಣಗೊಳಿಸಿದರು.
ಹಿರಿಯರಾದ ನಿವೃತ್ತ ಮುಖ್ಯಶಿಕ್ಷಕಿ ಪಡಿಞÁರಂಡ ದೇವಕಿ ಅಚ್ಚಪ್ಪ ಮಾತನಾಡಿದರು. ಈ ಸಂದರ್ಭ ಕುಂಬೆರ, ಪಂದಿಕAಡ ಕುಟುಂಬಸ್ಥರಿಗೆ ಹಾಗೂ ಪಾರಾಣೆಯ ಬಲ್ಯಾಂಡೆಮAದ್ ಸಮಿತಿಗೆ ದುಡಿಗಳನ್ನು ನೀಡಲಾಯಿತು. ಬಲ್ಯಾಂಡೆಮAದ್ ಸಮಿತಿಯವರು ಬಾಳೋಪಾಟ್ ಹಾಡಿದರು. ಹೆಗ್ಗಡೆ ಸಮಾಜ ಪೊಮ್ಮಕ್ಕಡ ಕೂಟದಿಂದ ಉಮ್ಮತಾಟ್ ಪ್ರದರ್ಶಿಸಿದರು.
ಅಕಾಡೆಮಿ ವತಿಯಿಂದ ನೋಂದಣಿ ಪತ್ರವನ್ನು ಸಮಾಜದ ಅಧ್ಯಕ್ಷರಿಗೆ ನೀಡಲಾಯಿತು. ಹೆಗ್ಗಡೆ ಸಮಾಜದ ವತಿಯಿಂದ ಅಕಾಡೆಮಿಗೆ ಹತ್ತು ಸಾವಿರ ರೂಪಾಯಿಯ ಚೆಕ್‌ಅನ್ನು ಪತ್ತಾಯದ ಪ್ರಯುಕ್ತ ನೀಡಲಾಯಿತು. ಅಕಾಡೆಮಿಯ ಸದಸ್ಯರುಗಳಾದ ಪಾನಿಕುಟ್ಟಿರ ರಾಧ ಕುಟ್ಟಪ್ಪ, ನಾಪಂಡ ಗಣೇಶ, ಚೆಪ್ಪುಡಿರ ಉತ್ತಪ್ಪ, ಕಂಬೆಯAಡ ಡೀನ ಬೋಜಣ್ಣ, ನಾಯಂದಿರ ಆರ್. ಶಿವಾಜಿ, ಪೊನ್ನಿರ ಗಗನ್, ಪಾಡಿ ಇಗ್ಗುತಪ್ಪ ದೇವಸ್ಥಾನ ಸಮಿತಿಯ ಸದಸ್ಯರಾದ ಪರದಂಡ ವಿಠಲ ಭೀಮಯ್ಯ, ಕುಂಬೆರ ಸಿ. ಪೆಮ್ಮಯ್ಯ, ಪಂದಿಕAಡ ದಿನೇಶ್, ಅಪ್ಪನೆರವಂಡ ಕಾರ್ಯಪ್ಪ, ಚೆರುಮಂದAಡ ಸುರೇಶ್, ಅಕಾಡೆಮಿ ಮಾಜಿ ಸದಸ್ಯ ಚರ್ಮಂಡ ಅಪ್ಪುಣು, ಡಿಸಿಸಿ ಬ್ಯಾಂಕ್ ಅಧಿಕಾರಿ ತೋರೆರ ಮುದ್ದಯ್ಯ, ಹೆಗ್ಗಡೆ ಸಮಾಜದ ನಿರ್ದೇಶಕರುಗಳು, ಸದಸ್ಯರುಗಳು ಪಾಲ್ಗೊಂಡಿದ್ದರು.
ಅಕಾಡೆಮಿ ಮಾಜಿ ಸದಸ್ಯ, ಹೆಗ್ಗಡೆ ಸಮಾಜ ನಿರ್ದೇಶಕ ಪಡಿಞÁರಂಡ ಪ್ರಭುಕುಮಾರ್ ಹಾಗೂ ಮಡಿಕೇರಿ ಆಕಾಶವಾಣಿ ಉದ್ಯೋಷಕಿ ಪೌಡಂಡ ಡೇಸಿ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿ ಸದಸ್ಯ ನಾಪಂಡ ಗಣೇಶ ಸ್ವಾಗತಿಸಿದರು.