ಸಾಮರಸ್ಯ, ಶ್ರದ್ಧೆ ಮತ್ತು ಧಾರ್ಮಿಕ ಪರಂಪರೆಯ ನೆಲೆವೀಡಾದ ವೀರಾಜಪೇಟೆ ಯಲ್ಲಿ ಗೌರಿ-ಗಣೇಶೋತ್ಸವದ ಸಂಭ್ರಮ ಕಳೆಗಟ್ಟಿದ್ದು, ಪಟ್ಟಣದ ಧಾರ್ಮಿಕ ಹಾಗೂ ಸಾಂಸ್ಕöÈತಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಗಣಪತಿ ಬೀದಿಯ ಶ್ರೀ ಮಹಾಗಣಪತಿ ಸೇವಾ ಸಮಿತಿ ಈ ಬಾರಿ ತನ್ನ ೩೬ನೇ ವರ್ಷದ ಅದ್ದೂರಿ ಗೌರಿ ಗಣೇಶೋತ್ಸವವನ್ನು ಆಚರಿಸಲು ಸಂಪೂರ್ಣವಾಗಿ ಸಜ್ಜಾಗಿದೆ.

ಆರಂಭದ ದಿನಗಳಲ್ಲಿ ಹಿರಿಯರಾದ ದಿ. ಪಿ. ಅಣ್ಣಿ ಅವರ ಮುತುವರ್ಜಿಯಿಂದ ಗಣೇಶ ಪ್ರತಿಷ್ಠಾಪನೆ ಪ್ರಾರಂಭಗೊAಡು, ಕೃಷ್ಣಸ್ವಾಮಿ ನಾಯ್ಡು ಅಧ್ಯಕ್ಷರಾಗಿ, ಕೆ. ಬಾಲನ್ ಹಾಗೂ ಬಿ.ಆರ್. ರಾಜನ್ ಕಾರ್ಯದರ್ಶಿಗಳಾಗಿ ಮತ್ತು ಖಜಾಂಚಿ ದಿ. ಕುಂಞಪ್ಪ ಎಂ.ಎ. ನೇತೃತ್ವದಲ್ಲಿ ಈ ಉತ್ಸವಕ್ಕೆ ಭದ್ರ ಬುನಾದಿ ನಿರ್ಮಾಣಗೊಂಡಿತು.

ನAತರದ ದಿನಗಳಲ್ಲಿ ಬಾಬು ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಅಜಿತ್, ಖಜಾಂಚಿಯಾಗಿ ರಮೇಶ ಹಾಗೂ ಕಾರ್ಯದರ್ಶಿ ಸುಮೇಶ್ ಅವರು ಉತ್ಸವದ ಪರಂಪರೆಯನ್ನು ಯಶಸ್ವಿಯಾಗಿ ಮುನ್ನಡೆಸಿದರು.

ಈ ಧಾರ್ಮಿಕ ಪಯಣದಲ್ಲಿ ಹಿರಿಯರಾದ ಈರಪ್ಪ, ಉಪೇಂದ್ರ, ರತ್ನಾಕರ, ರವಿ, ಚೇತನ್, ಮಂಜು, ಹ್ಯಾರಿಸ್, ಜೈಸನ್, ದಿ. ಪಾಪುಣ್ಣಿ, ಜೀವನ್, ವಿಶ್ವನಾಥ್, ನಿಕೇತನ್, ಭಾಸ್ಕರ್ ಶೆಟ್ಟರು, ನಾಯ್ಡು ಹಾಗೂ ದಿನೇಶ್ ಅವರ ಸಕ್ರಿಯ ಮಾರ್ಗದರ್ಶನ ಅಪಾರವಾದದ್ದು.

ಬಳಿಕ ಸಮಿತಿಯನ್ನು ಮುನ್ನಡೆಸು ವಲ್ಲಿ ಕೆ.ಬಿ. ಸುಮೇಶ್ ಅವರು ಕಳೆದ ೨೫ ವರ್ಷಗಳ ಕಾಲ ನಿರಂತರವಾಗಿ ಅಧ್ಯಕ್ಷರಾಗಿ ಹಾಗೂ ಬಿ. ಉಣ್ಣಿ ಅವರು ೧೨ ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಸಾರ್ಥಕ ಸೇವೆ ಸಲ್ಲಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇವರೊಂದಿಗೆ ಮಂಜು, ಚೇತನ್ ಸೇವೆ ಸಲ್ಲಿಸಿದ್ದಾರೆ.

ಈ ಬಾರಿಯ ೩೬ನೇ ವರ್ಷದ ಮಹೋತ್ಸವದ ನೇತೃತ್ವವನ್ನು ಅಧ್ಯಕ್ಷ ಹರೀಶ್ ಪೂಜಾರಿ, ಉಪಾಧ್ಯಕ್ಷ ವಿನೋದ್ ಕುಮಾರ್, ಗೌರವ ಅಧ್ಯಕ್ಷ ರತ್ನಾಕರ ವಹಿಸಿಕೊಂಡಿದ್ದಾರೆ. ಸಮಿತಿ ರಜತ ಮಹೋತ್ಸವದ ವಿಶೇಷ ಸಂದರ್ಭದಲ್ಲಿ ಬೆಳ್ಳಿ ರಥದಲ್ಲಿ ಶ್ರೀ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದು ಉತ್ಸವದ ಇತಿಹಾಸದಲ್ಲೇ ಅತ್ಯಂತ ಸ್ಮರಣೀಯ ಮೈಲಿಗಲ್ಲಾಗಿದೆ.

ಪ್ರತಿ ಬಾರಿಯೂ ವೀರಾಜಪೇಟೆ ಜನತೆಗೆ ಹೊಸತನವನ್ನು ನೀಡುವ ನಿಟ್ಟಿನಲ್ಲಿ ವಿಭಿನ್ನ, ನವೀನ ಮಾದರಿಯ ವಿದ್ಯುತ್ ಅಲಂಕಾರದ ಅತ್ಯಾಕರ್ಷಕ ಮಂಟಪವನ್ನು ಶೋಭಾಯಾತ್ರೆಯಲ್ಲಿ ಪ್ರದರ್ಶಿಸುವುದು ಸಮಿತಿಯ ಹಿರಿಮೆಯಾಗಿದೆ.

ಉತ್ಸವ ಮೂರ್ತಿಯ ಶೋಭಾಯಾತ್ರೆಯುದ್ದಕ್ಕೂ ಅಪಾರ ಸಂಖ್ಯೆಯ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸುವುದು ಇಲ್ಲಿನ ವಿಶೇಷ. ಸಮಿತಿಯು ಈ ಹಿಂದೆ ನಡೆದ ಗಣೇಶೋತ್ಸವ ಸ್ಪರ್ಧೆಗಳಲ್ಲಿ ೩ ಬಾರಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡು ತನ್ನ ಸಕ್ರಿಯ ಹಾಗೂ ಗುಣಮಟ್ಟದ ಆಚರಣೆಯನ್ನು ಸಾಬೀತುಪಡಿಸಿದೆ.

-ರಜಿತ ಕಾರ್ಯಪ್ಪ,