ಮಡಿಕೇರಿ, ಆ. ೨೮: ಮುಂದಿನ ತಿಂಗಳು ನಡೆಯಲಿರುವ ಗಣೇಶ ಚತುರ್ಥಿ ಸಂದರ್ಭ ಪ್ರತಿಷ್ಠಾಪನೆ ಮತ್ತು ವಿಸರ್ಜನೆಯ ಸಂದರ್ಭದಲ್ಲಿ ಶಬ್ಧ ಮಾಲಿನ್ಯ ಕಾನೂನು ಪಾಲನೆ ಸಂಬAಧ ಹಾಗೂ ಫ್ಲೆಕ್ಸ್, ಬ್ಯಾನರ್‌ಗಳ ಬಳಕೆಯ ನಂತರ ಅವುಗಳ ಸೂಕ್ತ ವಿಲೇವಾರಿ ಸಂಬAಧ ಸಭೆ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ನೇತೃತ್ವದಲ್ಲಿ ಅವರ ಕಚೇರಿಯಲ್ಲಿ ಸಭೆ ನಡೆಯಿತು. ಅಧಿಕಾರಿಗಳು ಮತ್ತು ಮಾರಾಟಗಾರರೊಂದಿಗೆ ಈ ಸಂದರ್ಭ ಚರ್ಚಿಸಲಾಯಿತು.