ಮಡಿಕೇರಿ, ಆ. ೨೮: ಕೊಡಗು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಿಸುವಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಉಪಾಧೀಕ್ಷಕರುಗಳು ಮತ್ತು ಪೊಲೀಸ್ ನಿರೀಕ್ಷಕರುಗಳಿಗೆ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿದರು. ಡಿ.ವೈಎಸ್.ಪಿ ಮೇದಪ್ಪ, ಸೂರಜ್, ಚಂದ್ರಶೇಖರ್, ಸಿ.ಐಗಳಾದ ಅನೂಪ್ ಮಾದಪ್ಪ, ಚಂದ್ರಶೇಖರ್, ಮಹಿಳಾ ಪೊಲೀಸ್ ಘಟಕದ ವೃತ್ತನಿರೀಕ್ಷಕ ಉಮೇಶ್, ಡಿ.ವೈ.ಎಸ್.ಪಿ ಮಹೇಶ್, ಟ್ರಾಫಿಕ್ ಎಸ್.ಐ ಶ್ರೀಧರ್, ಮಡಿಕೇರಿ ಟೌನ್ ಎಸ್.ಐ ಅನ್ನಪೂರ್ಣ, ಭಾಗಮಂಡಲ ಎ.ಎಸ್.ಐ ದಿನೇಶ್ ಅವರುಗಳಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.