ಕೂಡಿಗೆ, ಆ. ೨೮: ಕುಶಾಲನಗರ ಶ್ರೀ ಚೌಡೇಶ್ವರಿ ದೇವಸ್ಥಾನ ದೇವಾಂಗ ಸಂಘದ ವತಿಯಿಂದ ಋಗ್ ಉಪಾಕರ್ಮ(ಜನಿವಾರದ ಹಬ್ಬ)ವು ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಇದರ ಅಂಗವಾಗಿ ದೇವಿಗೆ ಅಭಿಷೇಕ, ಪೂಜೆ, ಹೋಮ ಹವನ ಹಾಗೂ ಸಾಮೂಹಿಕ ಪೂಜಾ ಕೈಂಕರ್ಯಗಳು ನೆರವೇರಿದವು.
ಕಾರ್ಯಕ್ರಮದಲ್ಲಿ ದೇವಾಂಗ ಸಂಘದ ಅಧ್ಯಕ್ಷ ಡಿ.ವಿ. ರಾಜೇಶ್, ಗೌರವ ಅಧ್ಯಕ್ಷ ಡಿ.ಟಿ. ವಿಜೇಂದ್ರ ಉಪಾಧ್ಯಕ್ಷ ಡಿ.ವಿ. ಚಂದ್ರು (ರಾಕಿ), ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್, ಖಜಾಂಚಿ ಡಿ.ಜಿ. ಪ್ರದೀಪ್ ಮತ್ತಿತರರು ಹಾಜರಿದ್ದರು. ಈ ಸಂದರ್ಭ ಎಲ್ಲಾ ಕುಲಬಾಂಧವರಿಗೂ ಜನಿವಾರವನ್ನು ವಿತರಿಸಲಾಯಿತು. ಪೂಜಾ ವಿಧಿವಿಧಾನವನ್ನು ದೇವಾಲಯದ ಪ್ರಧಾನ ಅರ್ಚಕ ಪ್ರಸನ್ನ ಭಟ್ ನೆರವೇರಿಸಿದರು.