ಶನಿವಾರಸAತೆ, ಆ. ೨೪: ಜಿಲ್ಲಾ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್ ಕ್ಲಬ್ ಆಫ್ ಹುಣಸೂರು-ಕಾವೇರಿ ಸಂಭ್ರಮ ವತಿಯಿಂದ ಶನಿವಾರಸಂತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ನಿರ್ಮಿಸಿದ ಪೊಲೀಸ್ ಚೌಕ್ ಅನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಯಿತು.
ನAತರ ಭಾರತಿ ವಿದ್ಯಾಸಂಸ್ಥೆಯಲ್ಲಿ ೨೦೨೬-೨೭ನೇ ಸಾಲಿನ ಪದಗ್ರಹಣ ಕಾರ್ಯಕ್ರಮ ನಡೆದಿದ್ದು, ಲಯನ್ಸ್ ಸಂಸ್ಥೆಯ ಡಾ.ಎನ್ ಕೃಷ್ಣೇಗೌಡ ಉದ್ಘಾಟಿಸಿದರು. ಉಪ ಜಿಲ್ಲಾ ಗವರ್ನರ್ ಎಂ.ಸಿದ್ದೇಗೌಡ ಪದಗ್ರಹಣ ನೆರವೇರಿಸಿದರು. ೨೦೨೬-೨೭ ನೇ ಸಾಲಿನ ನೂತನ ಅಧ್ಯಕ್ಷರಾಗಿ ಆರ್.ಈ.ಧರ್ಮಪ್ಪ ಮತ್ತು ತಂಡದವರು ಪದಗ್ರಹಣ ಮಾಡಿದರು. ಡಿಸಿ ಲಯನ್ ಜಯಕುಮಾರ್ ನೂತನ ಸದಸ್ಯರನ್ನು ಪರಿಚಯಿಸಿದರು.
ಮುಖ್ಯ ಅತಿಥಿಗಳಾಗಿ ರೀಜನ್ ಚೇರ್ ಪರ್ಸನ್ ಆರ್.ಸಿದ್ದಾರ್ಥ್, ಪೊಲೀಸ್ ವೃತ್ತನಿರೀಕ್ಷಕ ಜಿ.ಕೃಷ್ಣರಾಜ್ ಹಾಗೂ ಝೋನ್ ಚೇರ್ ಪರ್ಸನ್ ಲಯನ್ ಎಸ್.ಸಂದಾನ ಕೃಷ್ಣನ್ ಪಾಲ್ಗೊಂಡಿದ್ದರು.
೨೦೨೫-೨೬ ನೇ ಸಾಲಿನ ಅಧ್ಯಕ್ಷ ಟಿ.ಆರ್.ಕೇಶವಮೂರ್ತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ೨೦೨೬-೨೭ನೇ ಸಾಲಿನ ಕ್ಲಬ್ ಸಲಹೆಗಾರ ಜಿ.ನಾರಾಯಣಸ್ವಾಮಿ, ಕಾರ್ಯದರ್ಶಿ ಟಿ.ಆರ್ ಕೇಶವಮೂರ್ತಿ ಹಾಗೂ ಖಜಾಂಚಿ ಬಿ.ಕೆ.ಚಿನ್ನಪ್ಪ ಹಾಜರಿದ್ದರು.