ಮಡಿಕೇರಿ, ಆ. ೨೪: ಹೈದರಾಬಾದ್‌ನ ಕೊಟಕ್ ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತಾ.೧೮ ರಿಂದ ತಾ.೨೩ರವರೆಗೆ ನಡೆಸಲಾದ ಕೊಟಕ್ ಇಂಡಿಯ ಜೂನಿಯರ್ ಇಂಟರ್ನ್ಯಾಷನಲ್-೨೦೨೬ ಬ್ಯಾಡ್ಮಿಂಟನ್‌ನಲ್ಲಿ ಟೂರ್ನಿಯ ದ್ವಿತೀಯ ಶ್ರೇಯಾಂಕಿತ ಕೊಡಗಿನ ದಿಯಾ ಭೀಮಯ್ಯ ಬಾಲಕಿಯರ ಡಬಲ್ಸ್ ನಲ್ಲಿ ಹರಿಯಾಣದ ಬಾರುನಿ ಪರುಸ್ವಾಲ್ ಜೊತೆಗೂಡಿ ಚಿನ್ನದ ಪದಕ ಗಳಿಸಿದ್ದಾರೆೆ.

ಫೈನಲ್ ಪಂದ್ಯದಲ್ಲಿ ಅವರು ಟೂರ್ನಿಯ ತೃತೀಯ ಶ್ರೇಯಾಂಕಿತ ಆಟಗಾರ್ತಿಯರಾದ ಲಕ್ಷಿö್ಮ ರಿಧಿಮ ದೇವಿನೇನಿ ಮತ್ತು ಅಂಜನಾ ಮನಿಕಂದನ್ ಜೋಡಿ ಎದುರು ೨೧-೧೮, ೧೪-೨೧, ೨೨-೨೦ ಅಂಕಗಳಿAದ ಗೆಲುವು ಸಾಧಿಸಿದರು. ಟೂರ್ನಿಯಲ್ಲಿ ಭಾರತ ಸೇರಿದಂತೆ ಇಂಡೊನೇಷಿಯ, ತಾಯ್ಲಂಡ್, ಯು.ಎಸ್.ಎ, ಯು.ಎ.ಇ ದೇಶದ ಆಟಗಾರರು ಭಾಗವಹಿಸಿದ್ದರು. ೧೯ ವರ್ಷ ವಯೋಮಿತಿಯ ಜೂನಿಯರ್ ವಿಭಾಗದಲ್ಲಿ ದಿಯಾ ಅವರು ಗಳಿಸಿದ ಮೂರನೆಯ ಅಂತರರಾಷ್ಟಿçÃಯ ಪದಕ ಇದಾಗಿದೆ.

ಈ ಮೊದಲು ನೇಪಾಳದಲ್ಲಿ ನಡೆದ ನೇಪಾಳ ಇಂಟರ್ನ್ಯಾಷನಲ್ ಸೀರಿಸ್ ೨೦೨೪ ರಲ್ಲಿ ಬಾಲಕಿಯರ ವಿಭಾಗದ ಡಬಲ್ಸ್ನಲ್ಲಿ ಬೆಳ್ಳಿಯ ಪದಕ ಮತ್ತು ಸಿಂಗಲ್ಸ್ನಲ್ಲಿ ಕಂಚಿನ ಪದಕ ಗಳಿಸಿದ್ದರು. ಇವರು ಮಡಿಕೇರಿ ದೇಚೂರುವಿನ ಬೊಪ್ಪಂಡ ಕುಸುಮ ಹಾಗೂ ಭೀಮಯ್ಯ ದಂಪತಿಯ ಪುತ್ರಿ.