ಪಾಲಿಬೆಟ್ಟ, ಆ. ೨೪ : ೮೦ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪಾಲಿಬೆಟ್ಟ ಕ್ಯಾಪ್ಟನ್ಸ್ ಇಲವೆನ್ ಸಂಘದಿAದ ೧೪ನೇ ವರ್ಷದ ಕಾಲ್ಚೆಂಡು ಪಂದ್ಯಾಟವನ್ನು ನಡೆಸಲಾಯಿತು.
ಈ ಪಂದ್ಯಾಟದಲ್ಲಿ ಸುಮಾರು ೨೦ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು, ಯಂಗ್ ಇಂಡಿಯಾ ‘ಸಿ’ ತಂಡವು ಪ್ರಥಮ ಸ್ಥಾನವನ್ನು ವಿ ಟಿ ಗ್ರೂಪ್ ದ್ವಿತೀಯ ಸ್ಥಾನವನ್ನು ಪಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಪುಲಿಯಂಡ ಬೋಪಣ್ಣ ಅವರು ಕ್ರೀಡೆಯಲ್ಲಿ ಸಾಧನೆ ಮಾಡಿದ ಸನತ್ ಪೂಜಾರಿ ಹಾಗೂ ಯೋಗದಲ್ಲಿ ಸಾಧನೆ ಮಾಡಿದ ಚೆಶೈರ್ ಹೋಂನ ವಿದ್ಯಾರ್ಥಿ ಸುಮೇಶ್ ಅವರುಗಳಿಗೆ ಸನ್ಮಾನಿಸಿ ಗೌರವಿಸಿದರು. ಸಭೆಯಲ್ಲಿ ಬಿಜೆಪಿ ಮುಖಂಡ ಕಿಲನ್ ಗಣಪತಿ, ಗಣಪತಿ ಸೇವಾ ಮಿತ್ರ ಮಂಡಳಿಯ ಅಧ್ಯಕ್ಷ ಅಜಿತ್ ಕರುಂಬಯ್ಯ, ಪಾಲಿಬೆಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸಾಬು ಕಾಳಪ್ಪ, ಯಂಗ್ ಇಂಡಿಯಾ ಸಂಘದ ಕಾರ್ಯದರ್ಶಿ ಶಾಮೀಮ್, ವರ್ತಕರ ಸಂಘದ ಅಧ್ಯಕ್ಷ ಮುನೀರ್, ಕ್ಯಾಪ್ಟನ್ಸ್ ಇಲವೆನ್ ಗೌರವಾಧ್ಯಕ್ಷರಾದ ಟಿ. ಜಿ. ವಿಜೇಶ್ ಇದ್ದರು. ಎರಡು ದಿನಗಳ ಕಾಲ್ಚೆಂಡು ಪಂದ್ಯಾಟದ ಕಾರ್ಯಕ್ರಮದಲ್ಲಿ ಕ್ಯಾಪ್ಟನ್ಸ್ ಇಲೆವೆನ್ ಅಧ್ಯಕ್ಷರಾದ ರವಿಕುಮಾರ್ ಅವರು ಅಧ್ಯಕ್ಷತೆ ವಹಿಸಿದ್ದರು.