ವೀರಾಜಪೇಟೆ, ಆ. ೨೪: ವೀರಾಜಪೇಟೆ-ಪೊನ್ನಂಪೇಟೆ ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ೨೦೨೫-೨೬ನೇ ಸಾಲಿನಲ್ಲಿ ರೂ. ೨೫.೯೫ ಲಕ್ಷ ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ವಾಟೇರಿರ ಎ. ಅಪ್ಪಚ್ಚು ಹೇಳಿದರು.

ವೀರಾಜಪೇಟೆಯ ಮಹಿಳಾ ಸಮಾಜದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ಯಾಂಕಿನಲ್ಲಿ ಒಟ್ಟು ೨೭೪೫ ಸದಸ್ಯರಿದ್ದು ೧೬೨.೮೦ ಲಕ್ಷ ಷೇರು ಬಂಡವಾಳ ಹೊಂದಿದೆ. ಸಂಘದಲ್ಲಿ ಒಟ್ಟು ದುಡಿಯುವ ಬಂಡವಾಳ ೩೦೬೭.೮೩ ಲಕ್ಷ ಷೇರು ಹಣವಿದೆ. ಬ್ಯಾಂಕಿನಿAದ ೪೬೫ ಜನ ರೈತರಿಗೆ ಕೃಷಿ ಉದ್ದೇಶಕ್ಕಾಗಿ ದೀರ್ಘಾವಧಿ ಸಾಲ ಶೇ. ೩ ರ ಬಡ್ಡಿ ದರದಲ್ಲಿ ನೀಡುತ್ತಿದ್ದು, ಒಟ್ಟು ಹೊರಬಾಕಿ ೨೨೩೯.೧೨ ಲಕ್ಷಗಳಿದ್ದು ಬ್ಯಾಂಕಿನ ಸದಸ್ಯರುಗಳಿಗೆ ಶೇ. ೫ ರಷ್ಟು ಡಿವಿಡೆಂಡ್ ನೀಡುವಂತೆ ಮಾಸಿಕ ಸಭೆಯಲ್ಲಿ ನಿರ್ಣಯಿಸಲಾಗಿದೆ. ಬ್ಯಾಂಕಿನ ಎಲ್ಲಾ ಗ್ರಾಹಕರಿಗೆ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಬಾಂಕಿನ ಶ್ರೇಯೋಭಿವೃದ್ಧಿಗಾಗಿ ಎಲ್ಲಾ ಸದಸ್ಯರುಗಳು ಒಗ್ಗೂಡಿ ಸಹಕರಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷ ಬೊಳ್ಳೆಪಂಡ ಜೆ. ಬೋಪಣ್ಣ, ನಿರ್ದೇಶಕರುಗಳಾದ ಬಿ.ಬಿ. ಮುತ್ತಪ್ಪ, ಬಿ.ಕೆ. ಅಶೋಕ್ ಕುಮಾರ್, ಕೆ.ಪಿ ನಾಗರಾಜ್, ಕೆ.ಬಿ ಪ್ರತಾಪ್, ಕೆ.ಎನ್ ವಿಶ್ವನಾಥ್, ಬಿ.ಪಿ ಗಣೇಶ್, ಪಿ.ಬಿ ದಯಾನಂದ್, ಪಿ.ಬಿ ಸವಿತಾ, ಸಿ.ಎಂ ಕಾವೇರಮ್ಮ, ಪಿ.ಎಂ ಕರುಂಬಯ್ಯ, ಎಂ.ಕೆ ಮಂದಣ್ಣ, ಬಿ.ಎಸ್ ಗೋಪಾಲರಾಜ್, ವ್ಯವಸ್ಥಾಪಕ ಜೆ.ಸಿ ಬಸವರಾಜ್, ಕೆ.ಕೆ ಗೌರಮ್ಮ ಉಪಸ್ಥಿತರಿದ್ದರು.