ಚೆಯ್ಯಂಡಾಣೆ, ಆ. ೨೪: ಭತ್ತ ಕೃಷಿಗೆ ಕೂಲಿ ಕಾರ್ಮಿಕರ ಕೊರತೆ ಒಂದೆಡೆಯಾದರೆ, ಮತ್ತೊಂದೆಡೆ ಮಳೆಯ ಕೊರತೆಯೂ ರೈತರನ್ನು ಕಾಡುತ್ತಿದೆ. ಕಳೆದ ಕೆಲವು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಗದ್ದೆ ಕೆಲಸಗಳಿಗೆ ಕಾರ್ಮಿಕರ ಸಮಸ್ಯೆ ಹೆಚ್ಚಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಲು ರೈತರು ಯಂತ್ರೋಪಕರಣಗಳ ಮೊರೆ ಹೋಗುತ್ತಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಇಲ್ಲೊಬ್ಬ ಬಾಲಕ ತನ್ನ ತಂದೆಗೆ ಸಹಾಯಕನಾಗಿ ಡ್ರಮ್ ಸೀಡರ್ ಯಂತ್ರದ ಮೂಲಕ ಭತ್ತ ಬಿತ್ತನೆ ಮಾಡುವ ಮೂಲಕ ಗಮನ ಸೆಳೆದಿದ್ದಾನೆ. ನಡಿಕೇರಿ ಗ್ರಾಮದ ಕಿರುಂದAಡ ಉದಯ್ ಹಾಗೂ ಸರಿತಾ ದಂಪತಿಯ ಪುತ್ರ ೯ ವರ್ಷದ ಮನ್ವಿತ್ ಮುತ್ತಣ್ಣ, ತನ್ನ ತಂದೆಯೊAದಿಗೆ ಗದ್ದೆಯಲ್ಲಿ ಡ್ರಮ್ ಸೀಡರ್ ಯಂತ್ರದ ಮೂಲಕ ಭತ್ತ ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾನೆ. ಗೋಣಿಕೊಪ್ಪದ ಲಯನ್ಸ್ ನರ್ಸಿಂಗ್ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮನ್ವಿತ್, ಚಿಕ್ಕ ವಯಸ್ಸಿನಲ್ಲೇ ಕೃಷಿ ಕಾರ್ಯದಲ್ಲಿ ಆಸಕ್ತಿ ತೋರಿ ತಂದೆಗೆ ನೆರವಾಗುತ್ತಿರುವುದು ವಿಶೇಷವಾಗಿದೆ.