ಮಡಿಕೇರಿ, ಆ. ೨೩: ಪಾಲಿಬೆಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರೂ. ೮೬.೪೯ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲಿ ಸಂಘದ ಅಧ್ಯಕ್ಷ ಕುಟ್ಟಂಡ ಅಜಿತ್ ಕರುಂಬಯ್ಯ ತಿಳಿಸಿದರು.

ಸಂಘದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆ ತಾ. ೨೪ ರಂದು ಸಂಘದ ಸಭಾಂಗಣದಲ್ಲಿ ನಡೆಯಲಿದೆ. ಸಂಘದ ೨೦೨೫-೨೬ ಸಾಲಿನಲ್ಲಿ ರೂ ೮೬.೪೯ ಲಕ್ಷ ನಿವ್ವಳ ಲಾಭಗಳಿಸಿದ್ದು ಸಂಘದ ವಾರ್ಷಿಕ ವ್ಯವಹಾರ ಒಟ್ಟು ೧೮೩.೨೩ ಕೋಟಿಗಳಾಗಿದ್ದು ಸಂಘದ ಒಟ್ಟು ದುಡಿಯುವ ಬಂಡವಾಳ ೪೩.೮೩ ಕೋಟಿಗಳಾಗಿರುತ್ತದೆ. ಸಂಘÀ ೧೦೫೬ ಎ ತರಗತಿ ಸದಸ್ಯರನ್ನು ಹೊಂದಿದ್ದು ರೂ ೧.೭೫ ಕೋಟಿ ಪಾಲು ಬಂಡವಾಳ, ಕ್ಷೇಮ ನಿಧಿ ೩.೧೭ ಕೋಟಿಯನ್ನು ಹೊಂದಿದೆ. ಸಂಘದಲ್ಲಿ ಒಟ್ಟು ೩೬.೧೨ ಕೋಟಿ ಠೇವಣಿ ಇದ್ದು ಕೆಡಿಸಿಸಿ ಬ್ಯಾಂಕ್‌ನಲ್ಲಿ ಪಾಲು ಹಣ ೩೧.೦೦ ಲಕ್ಷ, ಕ್ಷೇಮ ನಿಧಿ ೩.೮೯ ಕೋಟಿ, ಇತರೆ ಸಂಘ ಸಂಸ್ಥೆಗಳಲ್ಲಿ ೪.೨೮ ಕೋಟಿ ತೊಡಗಿಸಿದ್ದೇವೆ. ಸಂಘದಿAದ ಕೃಷಿ ಮತ್ತು ಕೃಷಿಯೇತರ ಸಾಲವಾಗಿ ರೂ ೩೩.೨೫ ಕೋಟಿ ನೀಡಲಾಗಿದೆ. ಸಂಘದಲ್ಲಿ ಎರಡು ಮಾರಾಟ ಶಾಖೆಗಳಿಂದ ಗೊಬ್ಬರ, ಕ್ರಿಮಿನಾಶಕ, ಪೆಯಿಂಟ್, ಹತ್ಯಾರು, ಸಿಮೆಂಟು, ಹಂಚು, ಕಬ್ಬಿಣ ಮತ್ತು ಪಡಿತರ ವಸ್ತುಗಳ ಮಾರಾಟದಿಂದ ಒಟ್ಟು ೪.೨೬ಕೋಟಿಗಳ ವ್ಯವಹಾರ ನಡೆದಿದೆ. ಚೆನ್ನಯ್ಯನಕೋಟೆಯಲ್ಲಿ ಸಂಘದ ಒಂದು ಶಾಖೆ ಇದ್ದು ಬ್ಯಾಂಕಿAಗ್ ಹಾಗೂ ಮಾರಾಟ ಶಾಖೆ ಹೊಂದಿದೆ. ಸಂಘದ ಸದಸ್ಯರಿಗೆ ಶೇ ೨೫ರಷ್ಟು ಡಿವಿಡೆಂಟ್ ನೀಡಲಾಗುತ್ತದೆ ಎಂದು ಅಜಿತ್ ಕರುಂಬಯ್ಯ ಮಾಹಿತಿ ನೀಡಿದರು.

ಗೋಷ್ಠೀಯಲ್ಲಿ ಸಂಘದ ಉಪಾಧ್ಯಕ್ಷÀ ವಿ.ವಿ. ಡಾಲು, ನಿರ್ದೇಶಕರಾದ ಎ.ಎಸ್ ಶ್ಯಾಂಚAದ್ರ, ಕೊಲ್ಲೀರ ಧರ್ಮಜ, ಅನಿತ ಸುರೇಶ್, ಶೋಭಾ ಕುಟ್ಟಪ್ಪ, ಗ್ರೇಸಿ ತಮ್ಮಯ್ಯ, ಎಂ.ಬಿ. ಪವಿತ್ರ, ಸಿ.ಎಲ್. ಸೋಮೇಶ್, ಹೆಚ್.ಕೆ. ದಿನೇಶ್ ಮನೋಜ್ ಪೊನ್ನಣ್ಣ, ಟಿ.ಜಿ. ವಿಜೇಶ್, ಎಸ್.ಸಿ. ಸೋಮಣ್ಣ ಹಾಗೂ ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಕುಮಾರ್ ಪೈ ಹಾಜರಿದ್ದರು.