ಮಡಿಕೇರಿ, ಆ. ೨೩: ಕೃಷಿಗೂ, ಕೊಡಗಿಗೂ, ಹಬ್ಬಹರಿದಿನಗಳಿಗೂ ಅವಿನಾಭಾವ ಸಂಬAಧವಿರುವ ಭತ್ತದ ಕೃಷಿ ಮರೆಯಾಗಬಾರದು ಎಂಬ ಹಿತಚಿಂತನೆಯೊAದಿಗೆ ಕನೆಕ್ಟಿಂಗ್ ಕೊಡವಾಸ್ ಸಂಘಟನೆ ಪ್ರಯತ್ನ ಮುಂದುವರೆದಿದೆ. ಪಾಳುಬಿದ್ದ ಗದ್ದೆಗಳನ್ನು ಮತ್ತೆ ರೂಪಿತಗೊಳಿಸಿ ಭತ್ತದ ಕೃಷಿಯನ್ನು ಈ ಸಂಘಟನೆ ಕಳೆದ ಕೆಲವು ವರ್ಷದಿಂದ ಉತ್ತೇಜಿಸಿಕೊಂಡು ಬರುತ್ತಿದೆ. ವಿವಿಧ ಸಂಘ-ಸAಸ್ಥೆಗಳು, ಹೊರಜಿಲ್ಲೆ ಸೇರಿದಂತೆ ಜಿಲ್ಲೆಯಲ್ಲಿನ ಯುವಕ, ಯುವತಿಯನ್ನು ಸಂಘಟಿಸಿ ಪ್ರತಿವರ್ಷ ಗದ್ದೆಕೆಲಸ ನಿರ್ವಹಿಸಲಾಗುತ್ತಿದೆ. ನಾಟಿಪಣಿ ಹೆಸರಿನ ಈ ಚಿಂತನೆಯ ಭಾಗವಾಗಿ ೮ನೇ ವರ್ಷದ ಕೆಲಸ ಶನಿವಾರದಂದು ಮುತ್ತಾರ್ಮುಡಿ ಗ್ರಾಮದ ಕೆಂಬಡ್‌ತAಡ ಕುಟುಂಬದ ಗದ್ದೆಯಲ್ಲಿ ಸಂಭ್ರಮ-ಸಡಗರದಿAದ ನೆರವೇರಿತು.
ಈ ಕುಟುಂಬಕ್ಕೆ ಸೇರಿದ ೧೦ ಏಕರೆ ಗದ್ದೆಯನ್ನು ಕಳೆದ ವರ್ಷ ಕನೆಕ್ಟಿಂಗ್ ಕೊಡವಾಸ್ ಸಂಘಟನೆ ರೂಪಿತಗೊಳಿಸಿದ್ದು, ಈ ಬಾರಿಯೂ ಇದೇ ಜಾಗದಲ್ಲಿ ನಾಟಿಪಣಿ ಪೂರ್ಣಗೊಳಿಸಲಾಯಿತು.
ಕೊಡಗಿನ ಶ್ರೀಮಂತ ಕೃಷಿ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಸಾಂಪ್ರದಾಯಿಕ ಭತ್ತದ ಕೃಷಿಯ ಸಾಂಸ್ಕೃತಿಕ ಹಾಗೂ ಪರಿಸರ ಮಹತ್ವವನ್ನು ಪುನಃಸ್ಥಾಪಿಸುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು ೧೬೦ ಮಂದಿ, ಮುಖ್ಯವಾಗಿ ಯುವಜನರು, ಉತ್ಸಾಹದಿಂದ ಪಾಲ್ಗೊಂಡರು. ಪುರಾತನ ಕೃಷಿ ಪದ್ಧತಿಯನ್ನು ಕಲಿಯಲು ಮತ್ತು ಸ್ವತಃ ಅನುಭವಿಸಲು ಇದು ವೇದಿಕೆಯಾಯಿತು
ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಸುಮಾರು ೫೦ ಮಕ್ಕಳು, ಮೈಸೂರಿನ ಕೊಡವ ಸಮಾಜ ಯುವ ಘಟಕ, ಕೊಡವ ಸ್ಟೂಡೆಂಟ್ಸ್ ಅಸೋಸಿಯೇಷನ್ ಹಾಗೂ ಮೂರ್ನಾಡಿನ ಪೊಮ್ಮಕ್ಕಡ ಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು.
ಕಾರ್ಯಕ್ರಮವು ಪೂಜೆ ಹಾಗೂ ಪ್ರಾರ್ಥನೆಯೊಂದಿಗೆ ಆರಂಭಗೊAಡಿತು. ಕೃಷಿ ಋತು ಯಶಸ್ವಿಯಾಗಲೆಂದು ಪೂರ್ವಜರು ಹಾಗೂ ದೈವಗಳಿಗೆ ಸಾಂಪ್ರದಾಯಿಕ ಪ್ರಾರ್ಥನೆ ಮತ್ತು ಅರ್ಪಣೆಗಳನ್ನು ಸಲ್ಲಿಸಲಾಯಿತು. ಈ ಸಾಂಪ್ರದಾಯಿಕ ಆಚರಣೆಯು ಕೊಡವ ಸಮುದಾಯವು ತನ್ನ ನೆಲ, ಕೃಷಿ ಮತ್ತು ಪರಂಪರೆಯೊAದಿಗೆ ಹೊಂದಿರುವ ಆಳವಾದ ಅಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯವನ್ನು ಪ್ರತಿಬಿಂಬಿಸಿತು.
ನಾಟಿ ಪ್ರಾರಂಭಿಸುವ ಮುನ್ನ ಚೋಕಂಡ ಸೂರಜ್ ಸೋಮಯ್ಯ ಅವರು ವಿದ್ಯಾರ್ಥಿಗಳಿಗೆ ಭತ್ತದ ಕೃಷಿಯ ಕುರಿತು ಮಾಹಿತಿ ನೀಡಿದರು. ಮಕ್ಕಳು ಬಳಿಕ ಕೆಸರು ಗದ್ದೆಗಿಳಿದು ಸ್ವತಃ ಸಾಂಪ್ರದಾಯಿಕ ನಾಟಿ ಪಣಿಯ ಅನುಭವ ಪಡೆದರು. ಶಾಂತೆಯAಡ ನಿರನ್ ನಾಚಪ್ಪ ಹಾಗೂ ಕನೆಕ್ಟಿಂಗ್ ಕೊಡವಾಸ್‌ನ ಇತರ ಉತ್ಸಾಹಿ ಸದಸ್ಯರು ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಲು ವಿಶೇಷ ಕಾಳಜಿ ವಹಿಸಿದ್ದರು.
ಕಾರ್ಯಕ್ರಮವು ಸಾಂಪ್ರದಾಯಿಕ ಭೋಜನದೊಂದಿಗೆ ಸಮಾಪ್ತಿಗೊಂಡಿತು. ಹಲವು ಸಾಂಪ್ರದಾಯಿಕ ಕೊಡವ ಖಾದ್ಯಗಳನ್ನು ಸವಿದರು. ಕೊಡವ ಸಮುದಾಯದ ಅಸ್ಮಿತೆ, ಸಂಪ್ರದಾಯ ಮತ್ತು ಜೀವನಶೈಲಿಯ ಬೇರುಗಳು ಭೂಮಿ ಮತ್ತು ಅದರ ಕೃಷಿಯೊಂದಿಗೆ ಎಷ್ಟು ಆಳವಾಗಿ ಬೆಸೆದುಕೊಂಡಿವೆ ಎಂಬುದನ್ನು ನೆನಪಿಸುವ ಒಂದು ಮಹತ್ವದ ಸಾಂಸ್ಕೃತಿಕ ಪ್ರಯತ್ನವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. - ಶಶಿ