ಮಡಿಕೇರಿ, ಆ. ೨೧: ಮದೆ ಮಹೇಶ್ವರ ಪಿಯು ಕಾಲೇಜು ಆಶ್ರಯದಲ್ಲಿ ಮೂರ್ನಾಡುವಿನ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ೨೦೨೬-೨೭ನೇ ಸಾಲಿನ ಮಡಿಕೇರಿ ತಾಲೂಕು ಪದವಿ ಪೂರ್ವ ಕಾಲೇಜು ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಹೊದವಾಡದ ರಾಫೆಲ್ಸ್ ಇಂಟರ್ನ್ಯಾಷನಲ್ ಪಿಯು ಕಾಲೇಜು ಬಾಲಕರ ತಂಡ ಚಾಂಪಿಯನ್ ಪ್ರಶಸ್ತಿ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ಫೈನಲ್ ಪಂದ್ಯವು ರಾಫೆಲ್ಸ್ ಇಂಟರ್ನ್ಯಾಷನಲ್ ಕಾಲೇಜು ಹಾಗೂ ಮಡಿಕೇರಿ ಸಂತ ಮೈಕಲರ ತಂಡಗಳ ನಡುವೆ ನಡೆಯಿತು.
ಎರಡು ತಂಡಗಳು ನಿಗದಿತ ಸಮಯದಲ್ಲಿ ೧-೧ ಗೋಲುಗಳ ಸಮಬಲ ಸಾಧಿಸಿದವು.
ಪೆನಾಲ್ಟಿ ಶೂಟೌಟ್ನಲ್ಲಿ ರಾಫೆಲ್ಸ್ ಕಾಲೇಜು ತಂಡವು ೩-೧ ಗೋಲುಗಳ ಅಂತರದಿAದ ಗೆಲುವು ಸಾಧಿಸಿತು.
ಈ ಸಂದರ್ಭ ತರಬೇತುದಾರ ಇಸ್ಮಾಯಿಲ್ ಕಂಡಕರೆ, ಉಪನ್ಯಾಸಕಿ ಪೂಜಶ್ರೀ ಇದ್ದರು.