ವೀರಾಜಪೇಟೆ, ಆ. ೨೧: ನಾಡ್ ಕೋಳಿ ಕರಿ, ಞಂಡ್ ಕರಿ, ಮದ್ದ್ ಪಾಯಸ, ಮದ್ದ್ ಪುಟ್ಟ್, ಚಕ್ಕೆಕುರುರ ಖಾರ, ಚುಟ್ಟ ಕೈಪುಳಿ ಪಜ್ಜಿ, ತಾಳ್ ಕೇಂಬುಕರಿ..., ಹೀಗೆ ಬಗೆಬಗೆಯ ಖಾದ್ಯಗಳು ನೆರೆದಿದ್ದವರ ಬಾಯಲ್ಲಿ ನೀರೂರಿಸಿದವು.

ಅಮ್ಮತ್ತಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ವತಿಯಿಂದ ಆಯೋಜಿಸಲಾಗಿದ್ದ ಕಕ್ಕಡ ತೀನಿ ನಮ್ಮೆಯಲ್ಲಿ ಇದು ಕಂಡು ಬಂದ ದೃಶ್ಯ. ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಚಂಬAಡ ರೇಷ್ಮಾ ಭೀಮಯ್ಯ ಮತ್ತು ಅತಿಥಿ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಕ್ಕಡ ತೀನಿ ನಮ್ಮೆ ಅಂಗವಾಗಿ ಪೊಮ್ಮಕ್ಕಡ ಕೂಟದ ಸದಸ್ಯರಿಗೆ ಆಯೋಜಿಸಲಾಗಿದ್ದ ವಿವಿಧ ಖಾದ್ಯಗಳ ಸ್ಪರ್ಧೆಯನ್ನು ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷರಾದ ಐನಂಡ ಪ್ರಕಾಶ್ ಗಣಪತಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಾಹಿತಿ ಹಾಗೂ ಜ್ಯೋತಿಷ್ಯಿ ಕರೋಟಿರ ಶಶಿ ಸುಬ್ರಮಣಿ ಅವರು ಬಾಳೋಪಾಟ್‌ನ ರೂಪದಲ್ಲಿ ಪೊಮ್ಮಕ್ಕಡ ಕೂಟದ ಸದಸ್ಯರನ್ನು ಅಭಿನಂದಿಸುತ್ತಾ ಮಾತನಾಡಿ, ಉತ್ತರ ಗೋಳಾರ್ಧದಲ್ಲಿರುವ ಕೊಡಗು ಮತ್ತು ಕೆಲವು ಪ್ರದೇಶಗಳಲ್ಲಿ ಮಳೆಗಾಲದ ಸಂದರ್ಭ ಕಕ್ಕಡ ಮಾಸದಲ್ಲಿ ವಿಶಿಷ್ಟ ಖಾದ್ಯಗಳನ್ನು ಸೇವಿಸಲಾಗುತ್ತದೆ. ಮಳೆಯು ಕೃಷಿ ಮತ್ತು ಮನುಷ್ಯರಿಗೆ ಮಾತ್ರ ಸಂಬAಧಿಸಿದ್ದಲ್ಲ ಇದು ಪ್ರತಿ ಜೀವಿಗಳಿಗೂ ಸಂಬAಧಿಸಿದ್ದು, ನಮ್ಮ ಹಿರಿಯರು ಪ್ರಕೃತಿಗೆ ಗೌರವ ಸಲ್ಲಿಸುವ ಜನರಾಗಿದ್ದಾರೆ. ಕಕ್ಕಡ ನಮ್ಮೆ ಎಂಬುದು ಪ್ರಕೃತಿಗೆ ಗೌರವ ಕೊಡುವಂತ ಹಬ್ಬವಾಗಿದೆ ಎಂದು ಕಕ್ಕಡ ತಿಂಗಳ ವಿಶೇಷತೆ ಹಾಗೂ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು.

ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷರಾದ ಐನಂಡ ಪ್ರಕಾಶ್ ಗಣಪತಿ ಮಾತನಾಡಿ, ಪೊಮ್ಮಕ್ಕಡ ಕೂಟದ ವತಿಯಿಂದ ಹಲವು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು ಪೊಮ್ಮಕ್ಕಡ ಕೂಟದ ಅಧ್ಯಕ್ಷರಾದ ಚಂಬAಡ ರೇಷ್ಮಾ ಭೀಮಯ್ಯ ಮಾತನಾಡಿ, ಮುಂದಿನ ತಲೆಮಾರು ಹಾಗೂ ಯುವ ಸಮುದಾಯ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನಮ್ಮ ಆಚಾರ, ವಿಚಾರ, ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ತಲುಪಿಸಬೇಕೆಂದು ಕರೆ ನೀಡಿದರಲ್ಲದೇ, ಇಂತಹ ಉದ್ದೇಶದಿಂದ ಪೊಮ್ಮಕ್ಕಡ ಕೂಟದ ವತಿಯಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿರುವುದು ಶ್ಲಾಘನೀಯ ಎಂದರು. ಪೊಮ್ಮಕ್ಕಡ ಕೂಟದ ಉಪಾಧ್ಯಕ್ಷರಾದ ಮೊಳ್ಳೆರ ಜಾನಕಿ ಅಪ್ಪಚ್ಚು ಮಾತನಾಡಿ, ಪೊಮ್ಮಕ್ಕಡ ಕೂಟದಲ್ಲಿ ೩೫೦ ಮಂದಿ ಸದಸ್ಯರಿದ್ದು, ಮೊದಲ ಬಾರಿಗೆ ಕಕ್ಕಡ ನಮ್ಮೆ ತೀನಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಕ್ಕಡ ಮಾಸದಲ್ಲಿ ಇಂತಹ ಖಾದ್ಯಗಳು ದೇಹವನ್ನು ಬೆಚ್ಚಗಿಡುತ್ತವೆ ಎಂದರು.

ಕಾರ್ಯಕ್ರಮದ ಅಂಗವಾಗಿ ಪೊಮ್ಮಕ್ಕಡ ಕೂಟದ ಸದಸ್ಯರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು. ವಿವಿಧ ಖಾದ್ಯಗಳ ಸ್ಪರ್ಧೆಯಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಪೊಮ್ಮಕ್ಕಡ ಕೂಟದ ಸದಸ್ಯರು ಭಾಗವಹಿಸಿದ್ದರು. ಮಂಡೇಪAಡ ಪೂನಂ ಗಿರೀಶ್ ಮತ್ತು ಮುಕ್ಕಾಟಿರ ಜುತಿಕ ಬೋಪಣ್ಣ ಸ್ಪರ್ಧೆಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ಕುಟ್ಟಂಡ ರೇಖಾ ಜಗನ್ ಸೇರಿದಂತೆ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು.