ಪೊನ್ನಂಪೇಟೆ, ಆ. ೨೧ : ಬಿಟ್ಟಂಗಾಲ ಕೊಡಗು ಹೆಗ್ಗಡೆ ಸಮಾಜದ ಆಡಳಿತ ಮಂಡಳಿ ವತಿಯಿಂದ ಕಕ್ಕಡ ತೀನಿ ನಮ್ಮೆ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜದ ಅಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ ಮೈಕೊರೆಯುವ ಚಳಿ ಮತ್ತು ಮಳೆಯ ನಡುವೆ ಕೃಷಿಯಲ್ಲಿ ನಿರತರಾಗಿದ್ದ ನಮ್ಮ ಹಿರಿಯರು ಅನುಭವದ ಆಧಾರದ ಮೇಲೆ ರೂಪಿಸಿಕೊಂಡ ಆಹಾರ ಪದ್ಧತಿಯ ವೈಜ್ಞಾನಿಕತೆ ಬಗ್ಗೆ ವಿವರಿಸಿದರು. ನಮ್ಮ ಯುವಜನತೆ ಆಚಾರ ವಿಚಾರಗಳ ಪಾಲನೆಗೆ ಆದ್ಯತೆ ನೀಡಿ, ಹಿರಿಯ ತಲೆಮಾರಿನ ಭತ್ತದ ಕಣಜವಾಗಿದ್ದ ಗದ್ದೆಗಳನ್ನು ಪಾಳುಬಿಡಬಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾಡ್ ಕೋಳಿ ಕರಿ, ಮದ್ದ್ ಪಾಯಸ, ಮದ್ದ್ ಪುಟ್ಟ್, ಚಕ್ಕೆ ಕುರು ಕಾರ ಪಜ್ಜಿ, ನಂಡ್ ಕರಿ, ತಾಳ್ ಕೇಂಬು ಕರಿ, ಚುಟ್ಟ ಕೈಪುಳಿ ಪಜ್ಜಿ ಸೇರಿದಂತೆ ವಿವಿಧ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸಿ ಪ್ರದರ್ಶನಕ್ಕೆ ಇಡಲಾಗಿತ್ತು.
ಈ ಸಂದರ್ಭ ಸಮಾಜದ ಮಾಜಿ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ, ಖಜಾಂಚಿ ಕೋರಂಡ ಪ್ರಕಾಶ್ ನಾಣಯ್ಯ, ನಿರ್ದೇಶಕರಾದ ಮೂರೀರ ಕುಶಾಲಪ್ಪ, ಕೊಂಗೆಪAಡ ರವಿ, ತಂಬAಡ ಮಂಜುನಾಥ್, ತೊರೇರ ರಾಜ ಪೂವಯ್ಯ, ಮಲ್ಲಡ ಸುತಾ, ಮೂರೀರ ಶಾಂತಿ, ಪೊಟ್ಟಂಡ ವಸಂತಿ, ಕ್ರೀಡಾ ಸಮಿತಿ ಸಂಚಾಲಕ ಪಂದಿಕAಡ ಈಶ್ವರ ನಾಗೇಶ್, ಸದಸ್ಯರಾದ ಕಾಕೇರ ರವಿ, ಪಡಿಞರಂಡ ಗಿರೀಶ್, ಬೈರಿಕುಂದಿರ ಮನು, ಕೊರಕುಟ್ಟಿರ ಮೀನಾ, ಕವಿತಾ ಮತ್ತಿತರರು ಹಾಜರಿದ್ದರು. ಕಾರ್ಯದರ್ಶಿ ಪಡಿಞರಂಡ ಪ್ರಭು ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಚರ್ಮಂಡ ಅಪ್ಪುಣು ಪೂವಯ್ಯ ವಂದಿಸಿದರು.