ಮಡಿಕೇರಿ, ಆ. ೧೪: ರಾಜ್ಯ ಸರ್ಕಾರದ ಮಹತ್ತರ ಯೋಜನೆಯಾದ ಐದು ಉಚಿತ ಯೋಜನೆಗಳ ಸಂಬAಧ ಜಿಲ್ಲೆಯಲ್ಲಿ ಶೇ. ೯೭.೮೦ ಪ್ರಗತಿ ಸಾಧಿಸಲಾಗಿದೆ ಎಂದು ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಮೆಹರೋಜ್ ಖಾನ್ ಮಾಹಿತಿ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ೨೦೨೩ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭ ಜಾರಿಗೊಳಿಸಿದ್ದ ಗೃಹಲಕ್ಷಿö್ಮ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವ ನಿಧಿ ಎಂಬ ಪಂಚ ಯೋಜನೆಗಳು ಸಮರ್ಪಕವಾಗಿ, ಪ್ರಾಮಾಣಿಕವಾಗಿ ಅನುಷ್ಠಾನಗೊಂಡಿದ್ದು, ರಾಜ್ಯದ ಶೇ. ೯೮ ರಷ್ಟು ಜನರಿಗೆ ಇದರ ಪ್ರಯೋಜನ ದೊರೆತಿದೆ.
ಕೊಡಗಿನಲ್ಲಿ ಸರ್ಕಾರ ಗೃಹಲಕ್ಷಿö್ಮ ಯೋಜನೆಯಡಿ ರೂ. ೬೮೪ ಕೋಟಿಗೂ ಹೆಚ್ಚು ಹಣವನ್ನು ಸಂದಾಯ ಮಾಡಿದೆ. ಶಕ್ತಿ ಯೋಜನೆಯಡಿ ರೂ. ೮೦ ಕೋಟಿಗೂ ಅಧಿಕ ಉಚಿತ ಟಿಕೆಟ್‌ಗಳಿಗೆ ಹಣ ಪಾವತಿ ಮಾಡದೆ, ಗೃಹಜ್ಯೋತಿ ಯೋಜನೆಯಡಿ ೨೩೭ ಕೋಟಿ ರೂ ಹಣ ಪಾವತಿಸಿದೆ. ಅನ್ನಭಾಗ್ಯ ಯೋಜನೆಗಾಗಿ ೨೩೫ ಕೋಟಿ ರೂ. ನೀಡಿದೆ. ಯುವ ನಿಧಿ ಯೋಜನೆಯಡಿ ರೂ. ೫ ಕೋಟಿ ೮೪ ಲಕ್ಷ ಹಣವನ್ನು ಫಲಾನುಭವಿಗಳಿಗೆ ಪಾವತಿಸಿದೆ ಎಂದು ಮೆಹರೋಜ್ ಖಾನ್ ತಿಳಿಸಿದರು. ರಾಜ್ಯದಲ್ಲಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ನಡೆಯುತ್ತಿದ್ದು, ಸರ್ಕಾರ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತಿದೆ ಎಂದು ಅವರು ನುಡಿದರು.
ಈ ಸಂದರ್ಭ ಜಿ.ಪಂ. ಸಿಇಓ ಆನಂದ್ ಪ್ರಕಾಶ್ ಮೀನಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮತ್ತಿತರರು ಇದ್ದರು.