ಕುಶಾಲನಗರ, ಆ. ೧೪ : ಯುರೋಪಿಯನ್ ಒಕ್ಕೂಟದ “ಅರಣ್ಯ ನಾಶ ತಡೆ”- ಇUಆಖ ಅನುಸಾರ ಇಂಡಿಯಾ ಕಾಫಿ ಆ್ಯಪ್ ಮೂಲಕ ನೋಂದಣಿ ಮಾಡಲು ಕಾಫಿ ಮಂಡಳಿ ಮುಖ್ಯಸ್ಥರು ಕರೆ ನೀಡಿದ್ದಾರೆ.
ಯುರೋಪಿಯನ್ ಒಕ್ಕೂಟವು ಹಸಿರು ಕಾಫಿ, ರೋಸ್ಟ್ ಗ್ರೌಂಡ್ ಕಾಫಿ, ಗ್ರೌಂಡ್ ಕಾಫಿ ಮತ್ತು ತ್ವರಿತ ಕಾಫಿ ಸೇರಿದಂತೆ ಎಲ್ಲಾ ವಿಧದ ಕಾಫಿ ಉತ್ಪನ್ನಗಳ ಮೇಲೆ ವಿಶ್ವದ ಅತಿ ದೊಡ್ಡ ಆಮದುದಾರರು, ಮತ್ತು ಮರು ರಫ್ತುದಾರರಲ್ಲಿ ಒಂದಾಗಿದೆ ಎಂದು ಕಾಫಿ ಮಂಡಳಿಯ ಅಧ್ಯಕ್ಷ ದಿನೇಶ್ ಹೇಳಿದ್ದಾರೆ.
ಕುಶಾಲನಗರ ಸಮೀಪದ ಕೂಡುಮಂಗಳೂರಿನಲ್ಲಿ ಭಾರತೀಯ ಕಾಫಿ ಮಂಡಳಿ ಆಯೋಜಿಸಿದ್ದ ಟ್ರೇಡರ್ಸ್ ಮತ್ತು ಕಾಫಿ ಬೆಳೆಗಾರರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ೨೯ ಕಾಫಿ ಬೆಳೆಯುವ ಯುರೋಪಿಯನ್ ರಾಷ್ಟ್ರಗಳು ಒಂದಾಗಿ ಜಾಗತಿಕ ತಾಪಮಾನವನ್ನು ಆಧಾರವಾಗಿಟ್ಟುಕೊಂಡು ಪರಿಸರ ಸಂರಕ್ಷಣೆಯನ್ನು ಕಾಪಾಡುವ ಉದ್ದೇಶದಿಂದ “ಇUಆಖ” ನಿಯಮವನ್ನು ಜಾರಿಗೆ ತಂದಿವೆ. ಇದರಲ್ಲಿ ರಿಸ್ಕ್, ಲೋ-ರಿಸ್ಕ್, ಹೈ- ರಿಸ್ಕ್ ಎಂಬ ಅಂಶವಿದ್ದು ಭಾರತದ ಕಾಫಿ ಲೋ- ರಿಸ್ಕ್ನಲ್ಲಿದೆ. ಭಾರತದ ಕಾಫಿಯ ಗುಣಮಟ್ಟವನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚು ಪರಿಶೀಲನೆ ಮಾಡುವುದಿಲ್ಲ. ನಮ್ಮ ದೇಶದ ಕಾಫಿ ರಫ್ತು ಮಾಡುವ ಪ್ರಮಾಣದ ಶೇ. ಒಂದರಷ್ಟನ್ನು ಮಾತ್ರ ಚೆಕ್ ಮಾಡಲಾಗುತ್ತದೆ. ಕಾಫಿ ಮಂಡಳಿಯು ನಮ್ಮ ಕಾಫಿ ಬೆಳೆಗಾರರಿಗಾಗಿ ಹಾಗೂ ದೇಶ ಭದ್ರತೆಯ ಉದ್ದೇಶವನ್ನು ಮನಗಾಣುವ ಮೂಲಕ ``ಇಂಡಿಯ ಕಾಫಿ ಆ್ಯಪ್’’ ಸಿದ್ದಪಡಿಸಿದ್ದು, ಇದು ಇಸ್ರೋ ಜೊತೆಯಲ್ಲಿ ಒಪ್ಪಂದ ಮಾಡಿಕೊಂಡಿರುತ್ತದೆ. ಈ ವ್ಯವಸ್ಥೆಯ ಮೂಲಕ ಕಾಫಿ ಬೆಳೆಗಾರ ರೈತರು ತಮ್ಮ ಮಾಹಿತಿಗಳನ್ನು ನೀಡಿದರೆ ಅದನ್ನು ಕಾಫಿ ಮಂಡಳಿ ಮೂಲಕ ಅನುಮೋದನೆ ಮಾಡಲು ಸಾಧ್ಯ ಎಂದ ಅವರು ಅನುಮೋದನೆಯ ಅಂಶವನ್ನು ಯುರೋಪಿಯನ್ ದೇಶಗಳಿಗೆ ಕಳುಹಿಸುವ ಮತ್ತು ನಮ್ಮ ಕಾಫಿ ರಫ್ತನ್ನು ಸಂರಕ್ಷಣೆ ಮಾಡಿಕೊಳ್ಳುವ, ಆ ಕಾಫಿಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಅವಕಾಶಗಳು ದೊರೆಯಲಿವೆ ಎಂದರು, ದೇಶದ ಕಾಫಿ ರಫ್ತು ಪ್ರಮಾಣ ಶೇ೪೫% ಇರುವುದರಿಂದ ಪ್ರತಿ ಕಾಫಿ ಬೆಳಗಾರರು ಈ ಆ್ಯಪ್ ಮೂಲಕ ತಮ್ಮ ಬೆಳೆ, ಗುಣಮಟ್ಟ ಗಮನಿಸಿಕೊಳ್ಳಬಹುದು ಎಂದು ಬೆಳೆಗಾರರಿಗೆ ಸಲಹೆ ನೀಡಿದರು.
ಆ್ಯಪ್ ವ್ಯವಸ್ಥೆಯನ್ನು ಖಾಸಗಿ ಸಂಸ್ಥೆ ಮೂಲಕ ನೀಡಿದಲ್ಲಿ ಕಾಫಿ ಬೆಳೆಗಾರರಿಗೆ ಒಂದು ಟನ್ ಕಾಫಿ ರಫ್ತು ಮಾಡಲು ೩೫ ಡಾಲರ್ ಶುಲ್ಕ ಪಾವತಿಸಬೇಕು, ಜೊತೆಗೆ ಸ್ಯಾಟಲೈಟ್ ಆಧಾರಿತವಾದ ಈ ಸಂದರ್ಭವನ್ನು ನಮ್ಮ ದೇಶದ ರಹಸ್ಯ ಸೋರಿಕೆಯಾಗುವ ಆತಂಕ ಇರುವುದಾಗಿ ಅವರು ಮಾಹಿತಿ ಒದಗಿಸಿದರು. ``ಇಂಡಿಯ ಕಾಫಿ ಆ್ಯಪ್’’ ಕೇಂದ್ರ ಸರ್ಕಾರದ ವಿದೇಶಾಂಗ ಇಲಾಖೆಯ ಮೂಲಕ ಭಾರತೀಯ ಕಾಫಿ ಮಂಡಳಿ ಆ್ಯಪ್ ಅಭಿವೃದ್ಧಿಪಡಿಸಿದೆ. ಯುರೋಪಿಯನ್ ಒಕ್ಕೂಟದ ದೇಶಗಳ ಬೆಳೆಗಳಿಗಿಂತ ನಮ್ಮ ದೇಶದಲ್ಲಿ ನೆರಳಿನಲ್ಲಿ ಬೆಳೆಯುವ ಕಾಫಿಗೆ ಉತ್ತಮ ಗುಣಮಟ್ಟ ಇದೆ. ಭಾರತೀಯ ಕಾಫಿ ಮಂಡಳಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದಂತೆ ಸರ್ಕಾರ ಸ್ಪಂದಿಸಿ ಸುಮಾರು ೫೦ ಲಕ್ಷ ವೆಚ್ಚ ಮಾಡಿ ಕೆನಡಾ ಜರ್ಮನಿ, ಚೈನಾ, ಪೆರು, ಚಿಲಿ, ಬೆಹರೈನ್ ದೇಶಗಳಲ್ಲಿ ತಜ್ಞರ ಮೂಲಕ ಅಧ್ಯಯನ ಮಾಡಿಸಿದೆ. ಅದರಂತೆ ಕಾಫಿ ಬೆಳೆಗಾರರು, ಮಂಡಳಿಗೆ ಅಧಿಕಾರಿಗಳು ಮತ್ತು ಕಾಫಿ ಉದ್ದಿಮೆಗೆ ಸಂಬAಧಪಟ್ಟವರ ಜೊತೆ ಸಂಪರ್ಕ ಸಂವಹನ ನಡೆಸಿದ್ದಾರೆ.
ನಮ್ಮ “ಇಂಡಿ ಕಾಫಿ” ಭಾರತದ ಹೆಗ್ಗುರುತಾಗಿದ್ದು ಬ್ರಾಂಡ್ ಕೂಡ ಆಗಿದೆ ಎಂದರು.
ಕಾಫಿ ಮಂಡಳಿಯ ಕಾರ್ಯದರ್ಶಿಗಳು, ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂರ್ಮರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಯುರೋಪಿಯನ್ ಒಕ್ಕೂಟವು ಭಾರತದ ಒಟ್ಟು ಕಾಫಿ ರಫ್ತಿನ ಶೇ. ೪೫ ಪಾಲನ್ನು ಹೊಂದಿದೆ.
ಇಟಲಿ ದೇಶವು ಭಾರತೀಯ ಕಾಫಿಗೆ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಭಾರತದ ಒಟ್ಟು ಕಾಫಿ ರಫ್ತುಗಳಲ್ಲಿ ಸುಮಾರು ಶೇ. ೧೬ ಹೊಂದಿದೆ.
ಕಾಫಿಯನ್ನು ಯುರೋಪಿಯನ್ ಒಕ್ಕೂಟದ ಅರಣ್ಯ ನಾಶ ತಡೆ ನಿಯಂತ್ರಣ ವ್ಯಾಪ್ತಿಗೆ ತರಲಾಗಿದೆ.
೨೦೨೩ ರ ಜೂನ್ ೨೯ರಂದು ಜಾರಿಗೆ ಬಂದಿರುವ ಇUಆಖ ನಿಯಮದ ಪ್ರಕಾರ ಯುರೋಪಿಯನ್ ಒಕ್ಕೂಟಕ್ಕೆ ಕಾಫಿ ಆಮದು ಮಾಡುವ ಕಂಪನಿಗಳು ೪ಏಳನೇ ಪುಟಕ್ಕೆ
್ಕ
(ಮೊದಲ ಪುಟದಿಂದ) ಆ ಕಾಫಿ, ೨೦೨೦ ರ ಡಿಸೆಂಬರ್ ೩೧ರ ನಂತರದ ದಿನಗಳಲ್ಲಿ ಅರಣ್ಯ ನಾಶಗೊಂಡ ಭೂಮಿಯಲ್ಲಿ ಬೆಳೆದದ್ದಲ್ಲ ಎಂಬುದನ್ನು ಸಾಬೀತುಪಡಿಸಲು ದಾಖಲೆಗಳನ್ನು ಒದಗಿಸಬೇಕಾಗಿದೆ.
ಇUಆಖ ನಿಯಮಗಳು ದೊಡ್ಡ ವ್ಯಾಪಾರಿಗಳು ಮತ್ತು ನಿರ್ವಹಣಾ ಸಂಸ್ಥೆಗಳಿಗೆ ೨೦೨೬ರ ಡಿಸೆಂಬರ್ ೩೦ ರಿಂದ ಹಾಗೂ ಸಣ್ಣ ವ್ಯಾಪಾರಿಗಳು ಮತ್ತು ಕಾಫಿ ನಿರ್ವಹಣಾ ಸಂಸ್ಥೆಗಳಿಗೆ ೨೦೨೭ರ ಜೂನ್ ೩೦ ರಿಂದ ಅನ್ವಯವಾಗಲಿದೆ ಎಂದರು.
ಭಾರತೀಯ ಕಾಫಿ ಬೆಳೆಗಾರರಿಗೆ ನೆರವಾಗಲು ಹಾಗೂ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟçಗಳಿಗೆ ಭಾರತೀಯ ಕಾಫಿ ರಫ್ತು ನಿರಂತರವಾಗಿ ನಡೆಯುವಂತೆ ಮಾಡಲು ಕಾಫಿ ಮಂಡಳಿಯು ``ಇಂಡಿಯ ಕಾಫಿ ಆ್ಯಪ್’’ನಲ್ಲಿ ಕಾಫಿ ಬೆಳೆಗಾರರ ನೋಂದಣಿ ಘಟಕ ಮತ್ತು ಜಿಯೋ ಲೊಕೇಶನ್ (ಪಾಲಿಗಾನ್) ಸೃಷ್ಟಿ ಘಟಕ ಗಳನ್ನು ಅಳವಡಿಸಿದೆ ಎಂದರು.
ಭಾರತೀಯ ಕಾಫಿ ಮಂಡಳಿಯ ಸಂಶೋಧನಾ ವಿಭಾಗದ ಉಪ ನಿರ್ದೇಶಕ ಡಾ.ಪ್ರದೀಪ್ ಬಾಬು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಟ್ರೇಡರ್ಸ್, ಕಾಫಿ ಬೆಳೆಗಾರರಿಗೆ ಉಪನ್ಯಾಸ ನೀಡಿ ನಂತರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉದ್ಯಮಿಗಳು ಮತ್ತು ಬೆಳೆಗಾರರ ಸಲಹೆ ಸ್ವೀಕರಿಸಿದರು.
ವೇದಿಕೆಯ ಕಾರ್ಯಕ್ರಮದಲ್ಲಿ ಕಾಫಿ ಮಂಡಳಿಯ ಹಣಕಾಸು ವಿಭಾಗದ ಅಧಿಕಾರಿ ಅಮೂಲ್ಯ, ಕಾಫಿ ಮಂಡಳಿಯ ಸಂಶೋಧನಾ ವಿಭಾಗದ ನಿರ್ದೇಶಕ ಸೆಂಥಿಲ್ ಕುಮಾರ್, ಕೊಡಗು ಜಿಲ್ಲಾ ಪರಿಷತ್ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಕೊಡಗು ಜಿಲ್ಲಾ ಕಾಫಿ ಮಂಡಳಿ ಉಪ ನಿರ್ದೇಶಕ ವೆಂಕಟರೆಡ್ಡಿ ಹಾಗೂ ಕಾರ್ಯಕ್ರಮದಲ್ಲಿ ಸ್ಥಳೀಯ ಕಾಫಿ ಸಂಸ್ಕರಣಾ ಘಟಕಗಳ ಕೈಗಾರಿಕೋದ್ಯಮಿಗಳು, ಕಾಫಿ ಬೆಳೆಗಾರರು ಇದ್ದರು.