ಮಡಿಕೇರಿ, ಆ ೧೨: ಭಾರತದ ಮೇರು ಕಲಾವಿದೆ ಎಸ್. ಜಾನಕಿ ಸಾರ್ವಕಾಲಿಕವಾಗಿ ಸಲ್ಲುವ ನಾಡಿನ ಹೆಮ್ಮೆಯ ಗಾಯಕಿಯಾಗಿದ್ದರು. ಎಸ್. ಜಾನಕಿ ದೈಹಿಕವಾಗಿ ಕಣ್ಮರೆಯಾಗಿದ್ದರೂ ಹಾಡುಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ. ಹೇಳಿದ್ದಾರೆ.
ನಗರದ ಲಯನ್ಸ್ ಸಬಾಂಗಣದಲ್ಲಿ ಸಮರ್ಥ ಕನ್ನಡಿಗರು ಸಂಸ್ಥೆಯ ವತಿಯಿಂದ ಮಡಿಕೇರಿ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿತ ಎಸ್ ಜಾನಕಿ ಗಾನನಮನ ಹಾಗೂ ಹಿಮವನ ಪ್ರತಿಭಾ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
೬೬ ವರ್ಷಗಳ ಸುದೀರ್ಘ ಕಾಲ ತನ್ನ ಹಾಡುಗಳ ಮಾಧುರ್ಯದ ಮೂಲಕ ಕಲಾಸೇವೆಯಲ್ಲಿ ತೊಡಗಿದ್ದು ಸಾಮಾನ್ಯ ಸಾಧನೆಯಲ್ಲ. ಸಂಗೀತ ಎಂಬುದು ಎಸ್. ಜಾನಕಿ ಅವರಿಗೆ ದೇವರು ಕೊಟ್ಟ ವರವಾಗಿತ್ತು. ಹಾಡುಗಾರರಿಗೆ ಸರ್ಕಾರ ತಾರತಮ್ಯ ಧೋರಣೆ ಮಾಡಿದ್ದನ್ನು ವಿರೋಧಿಸಿದ್ದ ಜಾನಕಿ ೩ ವರ್ಷ ಕನ್ನಡದಲ್ಲಿ ಹಾಡಲೇ ಇಲ್ಲ. ಇವರ ಮೌನ ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರ ಕೊನೆಗೂ ಹಿನ್ನಲೆ ಗಾಯಕರಿಗೆ ರಾಜ್ಯ ಪ್ರಶಸ್ತಿ ನೀಡುವಂತಾಯಿತು. ಆಕಾಶ ದೀಪವು ನೀನು ಎಂದು ಹಾಡಿದ್ದ ಜಾನಕಿ, ನಿಜವಾದ ಅರ್ಥದಲ್ಲಿಯೂ ಸಿನಿಮಾ ಕಲಾವಿದರ ಪಾಲಿಗೆ ಸಾಧನೆಗೆ ಕಾರಣವಾಗುವ ಪ್ರಜ್ವಲ ದೀಪವಾಗಿದ್ದರು ಎಂದು ಅನಿಲ್ ಬಣ್ಣಿಸಿದರು.
ಯುವಕ-ಯುವತಿಯರು ತಮ್ಮಲ್ಲಿರುವ ಪ್ರತಿಭೆಯನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ೮ ವರ್ಷಗಳಿಂದ ಸಮರ್ಥ ಕನ್ನಡಿಗರು ಸಂಸ್ಥೆ ಶ್ಲಾಘನೀಯ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಇಂತÀಹ ಸಂಸ್ಥೆಗಳಿರುವುದರಿAದಲೇ ಕೊಡಗಿನಲ್ಲಿ ಸಾಂಸ್ಕೃತಿಕ ಲೋಕ ಶ್ರೀಮಂತವಾಗಿದೆ. ರೀಲ್ಸ್, ಮೊಬೈಲ್‌ನಲ್ಲಿ ಮುಳುಗಿರುವ ಯುವಪೀಳಿಗೆಯು ದೇಶಪ್ರೇಮ ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳು ಸಹಕಾರಿ ಎಂದರು.
ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಅಣ್ವಸ್ತçಗಳಿಗಿಂತ ನಮ್ಮಲ್ಲಿರುವ ಧ್ವನಿ, ಮಾತುಗಳೇ ಪ್ರಬಲವಾದ ಅಸ್ತçವಾಗಿದೆ. ಇದನ್ನು ಅಗತ್ಯವಿದ್ದಲ್ಲಿ ಸೂಕ್ತರೀತಿಯಲ್ಲಿ ಬಳಸಿಕೊಂಡಾಗ ಯಾವುದೇ ಗುರಿ ಸಾಧಿಸಬಹುದಾಗಿದೆ. ಶಸ್ತಾçಸ್ತçಗಳು ಕೊಲ್ಲಲು ಬಳಸಲ್ಪಟ್ಟರೆ, ಭರವಸೆಯ ಮಾತುಗಳು ಬದುಕಿಸುವ ಶಕ್ತಿ ಹೊಂದಿದೆ. ಹಾಡುಗಳು ನಮ್ಮನ್ನು ಭಾವಪರವಶವಾಗಿಸುವ ಶಕ್ತಿಯನ್ನು ಹೊಂದಿದ್ದು, ಗಾಯನ ಕಲೆಯನ್ನು ಮಕ್ಕಳು ಅಭ್ಯಾಸದ ಮೂಲಕ ಸಿದ್ದಿಸಿಕೊಳ್ಳಬೇಕೆಂದು ಅನಂತಶಯನ ಕರೆ ನೀಡಿದರು.
ಮಡಿಕೇರಿ ಲಯನ್ಸ್ ಟ್ರಸ್ಟ್ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಮಾತನಾಡಿ, À ಪ್ರತಿಭಾವಂತರನ್ನು ಬೆಳಕಿಗೆ ತರುವ ಉದ್ದೇಶದಿಂದ ಸಮರ್ಥ ಕನ್ನಡಿಗರು ಸಂಸ್ಥೆ ಗಮನಾರ್ಹ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಮಾದರಿಯಾಗಿದೆ ಎಂದರು.
ಮಡಿಕೇರಿ ಏಲಕ್ಕಿ ಮಾರಾಟಗಾರರ ಸಂಘದ ನಿರ್ದೇಶಕಿ ಮೂಟೇರ ಪುಪ್ಪಾವತಿ ರಮೇಶ್ ಮಾತನಾಡಿ, ಕನ್ನಡ ನಾಡು ನುಡಿಯ ಮಹತ್ವ ತಿಳಿಸಲು ಇಂಥ ಪ್ರತಿಭಾ ಸಂಗಮ ಅತ್ಯಗತ್ಯವಾಗಿದೆ. ನೂರಾರು ಪ್ರತಿಭೆಗಳು ಬೆಳಕಿಗೆ ಬರಲಿ ಎಂದು ಹಾರೈಸಿದರು.
ಸಮರ್ಥ ಕನ್ನಡಿಗರು ಸಂಸ್ಥೆಯ ಸಂಚಾಲಕಿ ಕೆ. ಜಯಲಕ್ಷಿö್ಮ ಮಾತನಾಡಿ, ಪೋಷಕರನ್ನು ಪ್ರೋತ್ಸಾಹಿಸಿ ಮಕ್ಕಳಲ್ಲಿ ದೇಶಪ್ರೇಮದ ಭಾವನೆ ಹೆಚ್ಚಿಸಲು ಸಂಸ್ಥೆಯಿAದ ನಮ್ಮ ದೇಶ - ನಮ್ಮ ಹೆಮ್ಮೆ ಎಂಬ ಭಾಷಣ ಸಮೂಹಗಾಯನ, ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಹಿಳೆಯರೇ ಸಂಸ್ಥೆಯನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಬರುತ್ತಿದ್ದು, ಪೋಷಕರ ಬೆಂಬಲ ಅತ್ಯಗತ್ಯ ಎಂದು ಕೋರಿದರು.
ಮಡಿಕೇರಿಯ ಪ್ರಜ್ಞಾ ಕಲಾ ತಂಡ ಪ್ರಾರ್ಥಿಸಿ, ಸೌಮ್ಯ ಸಂತೋಷ್ ಭಟ್ ನಿರೂಪಿಸಿ, ಪವಿತ್ರಾ ಸಂತೋಷ್ ವಂದಿಸಿದರು. ಅನಿತಾ ಧನಂಜಯ್, ಅಂಬಿಕಾ ವಿ. ನಿರ್ವಹಿಸಿದರು. ಎಸ್. ಜಾನಕಿಯವರ ಭಾವಚಿತ್ರಕ್ಕೆ ಗಣ್ಯರು ಪುಪ್ಪ ನಮನ ಸಲ್ಲಿಸಿದರು. ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಮೋಹನ್ ಕುಮಾರ್ ಇದ್ದರು.