ಚೆಯ್ಯAಡಾಣೆ, ಆ. ೧೨ : ಜಲಂಧರ್‌ನ ಇಎಂಇ ಹಾಕಿ ತಂಡದ ನಿವೃತ್ತ ಹಾಕಿ ಪಟುಗಳ ಸಂತೋಷ ಕೂಟ ಇತ್ತೀಚೆಗೆ ಮಡಿಕೇರಿಯ ಗೌಡ ಸಮಾಜದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ ತಂಡವನ್ನು ಪ್ರತಿನಿಧಿಸಿದ ನಿವೃತ್ತ ಆಟಗಾರ ಕೊಡಂದೆರ ಕುಶ ನಂಜಪ್ಪ ಅವರು ವಹಿಸಿದ್ದರು. ನೆಲ್ಲಮಕ್ಕಡ ಕಾರ್ಯಪ್ಪ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಸಂತೋಷ ಕೂಟದಲ್ಲಿ ನಿವೃತ್ತ ಹಾಕಿ ಪಟುಗಳು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಇದೇ ಸಂದರ್ಭ ವಿವಿಧ ಕ್ರೀಡಾ ಚಟುವಟಿಕೆಗಳು ನಡೆದು ವಿಜೇತರಿಗೆ ಬಹುಮಾನ ವಿತರಿಸಿದರು.

ಈ ಸಂದರ್ಭ ನಿವೃತ್ತ ಹಾಕಿ ಪಟುಗಳಾದ ಐತಿಚಂಡ ಕಾಶಿ ನಂಜಪ್ಪ, ಚೋಳಂಡ ಡಾಲು ಮುದ್ದಯ್ಯ, ನೆಲ್ಲಮಕ್ಕಡ ಕಾರ್ಯಪ್ಪ, ಪುಗ್ಗೆರ ಕಿಟ್ಟು ತಿಮ್ಮಯ್ಯ, ಕೆಲೇಟಿರ ಅಶೋಕ್ ಸೋಮಯ್ಯ, ಮಾದಂಡ ರವಿ ಪೆಮ್ಮಯ್ಯ, ಚೆಯ್ಯಂಡ ಲವ ಅಪ್ಪಚ್ಚು, ಬೊಳ್ತಜಿರ ಅಶೋಕ್, ಅರೆಯಡ ಚಿಣ್ಣಪ್ಪ, ಮಾರ್ಚಂಡ ಪ್ರಭು, ಚಂದಪAಡ ಆಕಾಶ್ ಚಂಗಪ್ಪ, ಅಲ್ಲಂಡ ವಾಸು, ಮಾಚಯ್ಯ, ಮೂಕಳೆರ ಶಾಂತಿ ಮತ್ತಿತರರು ಉಪಸ್ಥಿತರಿದ್ದರು. ಕಾಶಿ ನಂಜಪ್ಪ ಸ್ವಾಗತಿಸಿ, ವಂದಿಸಿದರು.