ಸುಂಟಿಕೊಪ್ಪ, ಆ. ೧೧: ನಾಕೂರು ಶಿರಂಗಾಲ ಗ್ರಾಮದ ಸರ್ವೆ ನಂ. ೧೨೦/೧ರಲ್ಲಿ ೩.೭೫ ಸೆಂಟ್ ಜಾಗಕ್ಕೆ ಸಂಬAಧಿಸಿದAತೆ ತಹಶೀಲ್ದಾರ್ ಕಚೇರಿಯಿಂದ ನೀಡಲಾಗಿದೆ ಎಂದು ಹೇಳಲಾಗಿದ್ದ ಹಕ್ಕುಪತ್ರವೊಂದು ನಕಲಿ ದಾಖಲೆ ಎಂಬ ಗಂಭೀರ ಘಟನೆಯೊಂದು ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಅವರ ಮುಂದೆ ನಡೆದ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಸAಬAಧಿತ ಹಕ್ಕು ಪತ್ರವನ್ನು ನಿವೇಶನ/೪೫೬/ ೯೮-೯೯ ಎಂಬ ಸಂಖ್ಯೆಯೊAದಿಗೆ ಹಾಗೂ ೩೭೮/೯೮-೯೯ ಕಡತ ಸಂಖ್ಯೆಯೊAದಿಗೆ ತಹಶೀಲ್ದಾರ್ ಕಚೇರಿಯಿಂದ ನೀಡಲಾಗಿದೆ ಎಂದು ಪ್ರತಿಪಾದಿಸಲಾಗಿತ್ತು. ಆದರೆ ವಿಚಾರಣೆಯ ಸಂದರ್ಭ ಸಂಬAಧಿತ ದಾಖಲೆಗಳು ಹಾಗೂ ಹಕ್ಕುಪತ್ರದ ನೈಜತೆಯನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕ ಹಕ್ಕುಪತ್ರವು ನೈಜ ದಾಖಲೆಯಲ್ಲ ಎಂಬ ಗಂಭೀರ ಅಂಶವು ಬೆಳಕಿಗೆ ಬಂದಿದ್ದು, ಅದರಲ್ಲಿರುವ ಮುದ್ರೆ ಹಾಗೂ ಸಹಿಯು ಕೃತಕವಾಗಿ ಸೃಷ್ಟಿಸಲ್ಪಟ್ಟಿರುವುದು ವಿಚಾರಣೆಯ ಉಲ್ಲೇಖವಾಗಿದೆ.

ಈ ಕುರಿತು ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಅವರು ಆ.೩ ರಂದು ಆದೇಶವನ್ನು ಹೊರಡಿಸಿದ್ದಾರೆ. ಹಕ್ಕುಪತ್ರದ ನೈಜತೆಯ ಕುರಿತು ನಡೆದ ವಿಚಾರಣೆಯಲ್ಲಿ ನಕಲಿ ದಾಖಲೆ ಹಾಗೂ ಕೃತಕ ಮುದ್ರೆ ಹಾಗೂ ಸಹಿಯ ಅಂಶಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪ್ರಕರಣದ ಸಂಪೂರ್ಣ ಸತ್ಯವನ್ನು ಹೊರ ತರುವ ನಿಟ್ಟಿನಲ್ಲಿ ಮುಂದಿನ ಕ್ರಮಕ್ಕೆ ಆದೇಶಿಸಲಾಗಿದೆ. ಆಪಾದಿತ ಹಕ್ಕು ಪತ್ರದ ಆಧಾರದ ಮೇಲೆ ಯಾವುದೇ ವ್ಯವಹಾರಗಳು ಅಥವಾ ಕ್ರಮಗಳು ನಡೆದಿದ್ದರೆ ಅವುಗಳಿಗೆ ಸಂಬAಧಿಸಿದAತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪಂಚಾಯಿತಿ ಪಿಡಿಓ, ಉಪತಹಶೀಲ್ದಾರ್ ಹಾಗೂ ಕಂದಾಯ ಪರಿವೀಕ್ಷಕರಿಗೂ ನಿರ್ದೇಶನವನ್ನು ನೀಡಲಾಗಿದೆ. ಆಪಾದಿತ ಹಕ್ಕುಪತ್ರದ ಆಧಾರದ ಮೇಲೆ ಉದ್ಭವಿಸಿರುವ ಯಾವುದೇ ವ್ಯವಹಾರಗಳಿಗೆ ಮುಂದುವರಿಕೆ ನೀಡದಂತೆ ಹಾಗೂ ಅಂತಹ ವ್ಯವಹಾರಗಳ ಕುರಿತು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ನೀಡಿರುವ ನಿರ್ದೇಶನವು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಸ್ಪಷ್ಟಪಡಿಸಿದೆ.

ಈ ಪ್ರಕರಣವನ್ನು ಕೇವಲ ದಾಖಲೆಗಳ ಪರಿಶೀಲನೆಗೆ ಸೀಮಿತಗೊಳಿಸದೆ ನಕಲಿ ಹಕ್ಕುಪತ್ರವನ್ನು ಯಾರು ಸೃಷ್ಟಿಸಿದರು? ಕೃತಕ ಮುದ್ರೆ ಹಾಗೂ ಸಹಿಯನ್ನು ಯಾರು ಬಳಸಿದರು? ದಾಖಲೆ ಹೇಗೆ ಸಿದ್ಧವಾಯಿತು? ಅದನ್ನು ಯಾರು ಬಳಸಿದರು? ಹಾಗೂ ಇದರ ಹಿಂದೆ ಇನ್ನೂ ಯಾವುದಾದರೂ ವ್ಯಕ್ತಿಗಳ ಕೈವಾಡ ಇದೆಯೇ ಎಂಬುದನ್ನು ಪತ್ತೆ ಹಚ್ಚುವ ಉದ್ದೇಶದಿಂದ ಆ.೭ ರಂದು ಸುಂಟಿಕೊಪ್ಪ ಪೊಲೀಸ್ ಠಾಣೆಯ ಉಪನಿರೀಕ್ಷಕರಿಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಂಡು ವರದಿ ನೀಡುವಂತೆ ತಹಶೀಲ್ದಾರ್ ಅವರು ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.

ಈ ಪ್ರಕರಣದಲ್ಲಿ ನಕಲಿ ಹಕ್ಕುಪತ್ರದ ಹಿಂದೆ ಯಾರಿದ್ದಾರೆ ಎಂಬುದು ಹಕ್ಕುಪತ್ರವನ್ನು ಅಧಿಕೃತ ದಾಖಲೆಯಂತೆ ತೋರಿಸುವ ರೀತಿಯಲ್ಲಿ ಸಿದ್ಧಪಡಿಸಿ ಅದರಲ್ಲಿ ಕೃತಕ ಮುದ್ರೆ ಹಾಗೂ ಸಹಿಯನ್ನು ಬಳಸಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಅದರ ಸೃಷ್ಟಿಯಿಂದ ಬಳಕೆಯವರೆಗೆ ನಡೆದ ಸಂಪೂರ್ಣ ಪ್ರಕ್ರಿಯೆಯನ್ನು ತನಿಖೆಯ ಮೂಲಕ ಪತ್ತೆ ಹಚ್ಚಬೇಕಾಗಿದೆ. ನಕಲಿ ದಾಖಲೆಯನ್ನು ಸೃಷ್ಟಿಸಿದವರು ಯಾರು, ಅದನ್ನು ಬಳಸಿದವರು ಯಾರು ಹಾಗೂ ಈ ಕೃತ್ಯಕ್ಕೆ ಯಾರಾದರೂ ಸಹಕರಿಸಿದ್ದಾರೆಯೇ ಎಂಬುದನ್ನು ತನಿಖೆಯಿಂದ ಮಾತ್ರ ಉತ್ತರ ದೊರಕಬೇಕಾಗಿದೆ.