ಮಡಿಕೇರಿ, ಆ. ೧೧: ನಗರದ ಹಳೆ ಖಾಸಗಿ ಬಸ್ ನಿಲ್ದಾಣದ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಮಿತಿ ಅಧ್ಯಕ್ಷರಾಗಿ ಸಂತು ಕಾರ್ಯಪ್ಪ ತೆಕ್ಕಡ, ಉಪಾಧ್ಯಕ್ಷರಾಗಿ ಜೈ ಜಗದೀಶ್ ಬದ್ದಂಜೆಟ್ಟಿರ, ಕಾರ್ಯದರ್ಶಿಯಾಗಿ ಅರಸು ಮುಕ್ಕಾಟಿ, ಸಹ ಕಾರ್ಯದರ್ಶಿಯಾಗಿ ಚರಣ್ ಕುಮಾರ್, ಖಜಾಂಚಿ ಕುಟ್ಟಪ್ಪ ನಾಯಕಂಡ ಹಾಗೂ ಸಹ ಖಜಾಂಚಿಯಾಗಿ ಸ್ವಾಮಿ ಆರ್ ಆಯ್ಕೆಯಾಗಿದ್ದಾರೆ. ಸಂಘಟನಾ ಕಾರ್ಯದರ್ಶಿಗಳಾಗಿ ಉಮೇಶ್, ಸಮ್ಮದ್, ಸ್ಥಾಪಕ ಅಧ್ಯಕ್ಷರಾಗಿ ಸೀತಾರಾಮ್ ರೈ, ಹಿರಿಯ ಸಲಹೆಗಾರರಾಗಿ ಮಹೇಶ್, ಗೌರವ ಅಧ್ಯಕ್ಷರಾಗಿ ಮಂಜುನಾಥ್ ಟಿ.ಎನ್., ಭರತ್ ಮತ್ತು ನಾಗೇಂದ್ರ ಭಟ್ ಅವರನ್ನು ನೇಮಿಸಲಾಗಿದೆ..
ಪದಾಧಿಕಾರಿಗಳಾಗಿ ಮಧು ತೆಕ್ಕಡ, ಸತೀಶ್ ಬಿ.ಡಿ., ವೀರೇಂದ್ರ ಗೌಡ, ಹರೀಶ್ ಆರ್., ರಾಜೇಶ್ ಮಲ್ಲನ, ವಿಶು ಪೈಕೆರ, ನಿಯಾಜ್ ಎ.ಆರ್., ಲಿಂಗಪ್ಪ, ಪುರುಷ, ಸತೀಶ್ ಬಿ.ವಿ., ರಾಜೇಶ್ ಕುಯ್ಯಮುಡಿ, ರವಿ ಎಂ.ಜೆ., ರವಿ, ಗಿರಿ, ನವೀನ್, ಲೋಕೇಶ್, ವಿಜಯ್ ಹಾಗೂ ದಿನೇಶ್ ಬಿ.ಬಿ. ಆಯ್ಕೆಯಾಗಿದ್ದಾರೆ.