ಮಡಿಕೇರಿ, ಆ. ೧೧: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕೋಯಿಮ್ಸ್) ಮಾಜಿ ಡೀನ್, ಪ್ರಸ್ತುತ ಜೀವ ರಸಾಯನಶಾಸ್ತç ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಕೆ.ಬಿ ಕಾರ್ಯಪ್ಪ ಅವರು ಸೇವೆಯಿಂದ ನಿವೃತ್ತಿಯಾಗಿದ್ದು, ಅವರಿಗೆ ಬೀಳ್ಕೊಡಲಾಯಿತು.
ಕಾರ್ಯಪ್ಪ ಅವರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ಡೈರೆಕ್ಟರ್ ಆಗಿ ೨೦೧೮ರ ಮಾರ್ಚ್ನಲ್ಲಿ ನೇಮಕವಾಗಿ ಸೇವೆ ಸಲ್ಲಿಸಿದ್ದರು.
ಸಂಸ್ಥೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸಂಸ್ಥೆಯ ಪ್ರಸ್ತುತ ಡೀನ್ ಹಾಗೂ ಡೈರೆಕ್ಟರ್ ಡಾ. ಲೋಕೇಶ್, ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಶಾಲ್ ಕುಮಾರ್, ಮೆಡಿಕಲ್ ಸೂಪರಿಂಟೆAಡೆAಟ್ ಸೋಮಶೇಖರ್, ಜಿಲ್ಲಾ ಶಸ್ತçಚಿಕಿತ್ಸಕ ನಂಜುAಡೇಗೌಡ, ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.