ಪುತ್ತರಿರ ಕರುಣ್ ಕಾಳಯ್ಯ
ಚೆಟ್ಟಳ್ಳಿ, ಆ. ೯ : ಕಾಫಿ ಬೆಳೆಗಾರರ ಪಾಲಿಗೆ ಈ ಬಾರಿಯೂ ಮುಂಗಾರು ಆತಂಕದ ಋತುವಾಗಿ ಪರಿಣಮಿಸಿದೆ. ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ಬೆಳೆಗಾರರ ಕನಸುಗಳನ್ನು ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆ ಮಂಕಾಗಿಸಿದೆ. ರಾಜ್ಯದಲ್ಲೇ ಅತೀ ಹೆಚ್ಚು ಮಳೆ ದಾಖಲಾಗುವ ಪ್ರದೇಶಗಳಲ್ಲಿ ಮೂರನೇ ಸ್ಥಾನದಲ್ಲಿರುವ ಸೂರ್ಲಬ್ಬಿ ನಾಡಿನಲ್ಲಿ ಈ ಬಾರಿ ಅತಿವೃಷ್ಟಿಯ ಪರಿಣಾಮ ಕಾಫಿ ಬೆಳೆ ಕೊಳೆರೋಗಕ್ಕೆ ತುತ್ತಾಗಿದ್ದು, ಅರೇಬಿಕಾ ಹಾಗೂ ರೋಬಸ್ಟಾ ಕಾಫಿ ಫಸಲು ಹೆಚ್ಚಿನ ಪ್ರಮಾಣದಲ್ಲಿ ಉದುರುತ್ತಿದೆ. ಗಿಡಗಳ ಎಲೆಗಳೂ ಉದುರ ತೊಡಗಿರುವುದರಿಂದ ಈ ವರ್ಷದ ಇಳುವರಿ ಮಾತ್ರವಲ್ಲ, ಮುಂದಿನ ಹಂಗಾಮಿನ ಉತ್ಪಾದನೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಸೂರ್ಲಬ್ಬಿಗೆ ೧೩೫ ಇಂಚು ಮಳೆ
ಸೂರ್ಲಬ್ಬಿಯಲ್ಲಿ ಕಳೆದ ತಿಂಗಳಿAದ ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಿ ಒಂದೇ ದಿನ ೮ ರಿಂದ ೯ ಇಂಚು ಮಳೆ ದಾಖಲಾಗಿದ್ದು, ಈ ಹಂಗಾಮಿನಲ್ಲಿ ಒಟ್ಟು ೧೩೫ ಇಂಚುಗಳಷ್ಟು ಮಳೆ ಸುರಿದಿದೆ. ಮಳೆಯ ಅಬ್ಬರದಿಂದ ತೋಟಗಳಲ್ಲಿ ನೀರು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸೂರ್ಯನ ಬೆಳಕು ಕಡಿಮೆಯಾಗಿರುವುದರಿಂದ ಗಿಡಗಳಲ್ಲಿ ತೇವಾಂಶ ದೀರ್ಘಕಾಲ ಉಳಿದಿದೆ. ಇದರ ಪರಿಣಾಮ ಕೊಳೆರೋಗ ತೀವ್ರಗೊಂಡು ಕಾಫಿ ಕಾಯಿಗಳು ಪಕ್ವವಾಗುವ ಮುನ್ನವೇ ನೆಲಕ್ಕುದುರುತ್ತಿವೆ. ಗಿಡಗಳ ಎಲೆಗಳೂ ಉದುರ ತೊಡಗಿರುವುದರಿಂದ ಈ ವರ್ಷದ ಇಳುವರಿ ಮಾತ್ರವಲ್ಲ, ಮುಂದಿನ ಹಂಗಾಮಿನ ಉತ್ಪಾದನೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಹಲವು ಗ್ರಾಮಗಳಿಗೆ ವ್ಯಾಪಿಸಿದ ಹಾನಿ
ಸೋಮವಾರಪೇಟೆ ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರ್ಲಬ್ಬಿ, ಕುಂಬಾರಗಡಿಗೆ, ಕಿಕ್ಕರಳ್ಳಿ, ಮಂಕ್ಯ ಹಾಗೂ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಮ್ಮಿಯಾಲ ಮತ್ತು ಮುಟ್ಲು ಭಾಗಗಳ ಬಹುತೇಕ ಕಾಫಿ ತೋಟಗಳಲ್ಲಿ ಇದೇ ಪರಿಸ್ಥಿತಿ ಕಂಡುಬAದಿದೆ. ಹಲವು ತೋಟಗಳಲ್ಲಿ ಗಿಡಗಳ ಕೆಳಗೆ ಉದುರಿಬಿದ್ದಿರುವ ಕಾಫಿ ಕಾಯಿಗಳು ಕಾಣಸಿಗುತ್ತಿದ್ದು, ಹಲವು ತಿಂಗಳ ಪರಿಶ್ರಮ ಕಣ್ಣೆದುರೇ ಮಣ್ಣಾಗುತ್ತಿರುವ ದೃಶ್ಯ ಬೆಳೆಗಾರರನ್ನು ಕಂಗೆಡಿಸಿದೆ. ಉತ್ತಮ ಬೆಲೆ ಹಾಗೂ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಈಗ ಬೆಳೆ ಉಳಿಸಿ ಕೊಳ್ಳುವುದೇ ದೊಡ್ಡ ಸವಾಲಾಗಿದೆ.
ಬೆಳೆಗಾರರಿಗೆ ಕಾಫಿಗೆ ಕೊಳೆರೋಗದ್ದೇ ಭೀತಿ
ಜಿಲ್ಲೆಯ ಕೆಲವೆಡೆ ಕಾಫಿ ಫಸಲು ಉದುರಲು ಪ್ರಾರಂಭಗೊAಡಿದ್ದು, ಕೊಳೆರೋಗ ಪ್ರಾರಂಭಗೊAಡಿದೆ. ಕೊಳೆರೋಗ ಬೆಳೆಗಾರರಿಗೆ ಶಾಪವಾಗಿ ಪರಿಣಮಿಸುತ್ತಿದ್ದು ಅರೇಬಿಕಾ ಬೆಳೆಗೆ ಮೊದಲು ರೋಗ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಬಾಧಿಸುತಿದ್ದು ರೋಬಸ್ಟಾ ಬೆಳೆಯಲ್ಲೂ ಕೊಳೆರೋಗ ಕಂಡುಬರುತ್ತಿದೆ. ಹಲವು ನಿಯಂತ್ರಣ ಕ್ರಮಗಳನ್ನು ಕಾಫಿ ಮಂಡಳಿ ತಿಳಿಸಿದರೂ ನಿರಂತರ ಮಳೆಯಿಂದಾಗಿ ಕೊಳೆರೋಗ ನಿಯಂತ್ರಣವಾಗದೆAದು ಬೆಳೆಗಾರರು ಹೇಳುತ್ತಾರೆ.
ಸಣ್ಣ ಮತ್ತು ಮಧ್ಯಮ ವರ್ಗದ ಬೆಳೆಗಾರರಿಗೆ ಸಂಕಷ್ಟ
ಕಾಫಿ ಬೆಳೆಯನ್ನೇ ಜೀವನಾಧಾರವಾಗಿಸಿಕೊಂಡಿರುವ ಸಣ್ಣ ಹಾಗೂ ಮಧ್ಯಮ ವರ್ಗದ ಬೆಳೆಗಾರರ ಕುಟುಂಬಗಳಿಗೆ ಈ ಬೆಳವಣಿಗೆ ತೀವ್ರ ಆರ್ಥಿಕ ಸಂಕಷ್ಟದ ಮುನ್ಸೂಚನೆಯಾಗಿದೆ. ಈಗಾಗಲೇ ಗೊಬ್ಬರ, ಕೂಲಿ, ಔಷಧಿ, ತೋಟ ನಿರ್ವಹಣೆ ಹಾಗೂ ಕಾರ್ಮಿಕ ವೆಚ್ಚಗಳು ಏರಿಕೆಯಾಗಿರುವ ಸಂದರ್ಭದಲ್ಲಿ ಫಸಲು ಉದುರುವಿಕೆಯು ಆದಾಯವನ್ನು ಮತ್ತಷ್ಟು ಕುಗ್ಗಿಸುವ ಸಾಧ್ಯತೆ ಇದೆ. ಬ್ಯಾಂಕ್ ಹಾಗೂ ಸಹಕಾರ ಸಂಘಗಳ ಸಾಲದ ಹೊರೆಯಲ್ಲಿರುವ ಅನೇಕ ಬೆಳೆಗಾರರು ಈ ವರ್ಷದ ಇಳುವರಿ ಕುಸಿತದಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಿಸುತ್ತಿದ್ದಾರೆ.
ಜಂಟಿ ಆರ್‌ಟಿಸಿ ರೈತರ ಗೋಳು
ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಅನುಭವಿಸುತ್ತಿದ್ದರೂ ಜಂಟಿ ಆರ್‌ಟಿಸಿ ಹೊಂದಿರುವ ಅನೇಕ ಕಾಫಿ ಬೆಳೆಗಾರರಿಗೆ ಸರ್ಕಾರ ಹಾಗೂ ಕಾಫಿ ಮಂಡಳಿಯಿAದ ಬೆಳೆ ನಷ್ಟ ಪರಿಹಾರ, ಸಬ್ಸಿಡಿ ಸೇರಿದಂತೆ ಯಾವುದೇ ನೆರವು ದೊರೆಯುತ್ತಿಲ್ಲ ಎಂಬ ಅಳಲು ಕೇಳಿಬಂದಿದೆ. ಒಂದೇ ಕುಟುಂಬದ ಹಲವು ಸದಸ್ಯರ ಹೆಸರಿನಲ್ಲಿ ಜಮೀನಿನ ದಾಖಲೆ ಇರುವ ಕಾರಣ ಅನೇಕ ರೈತರು ಪರಿಹಾರ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಜಂಟಿ ಆರ್‌ಟಿಸಿ ಹೊಂದಿರುವ ರೈತರಿಗೂ ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ ಹಾಗೂ ಸರ್ಕಾರದ ಎಲ್ಲಾ ಸೌಲಭ್ಯಗಳು ದೊರೆಯುವಂತೆ ನಿಯಮಗಳಲ್ಲಿ ಅಗತ್ಯ ತಿದ್ದುಪಡಿ ತರಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಕೊಡಗಿನಂತಹ ಅತಿವೃಷ್ಟಿ ಪ್ರದೇಶಗಳಿಗೆ ಪ್ರತ್ಯೇಕ ಕಾಫಿ ಬೆಳೆ ಪರಿಹಾರ ಪ್ಯಾಕೇಜ್ ಘೋಷಿಸಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ.
ತಕ್ಷಣ ಸಮೀಕ್ಷೆಗೆ ಒತ್ತಾಯ
ನಿರಂತರ ಮಳೆಯಿಂದ ಕೊಳೆರೋಗ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಾಫಿ ಮಂಡಳಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ತಕ್ಷಣ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆ ಹಾನಿಯ ಸಮಗ್ರ ಸಮೀಕ್ಷೆ ನಡೆಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಕಾಫಿ ಕಾಯಿ ಉದುರಿದ ಮೂರ್ನಾಲ್ಕು ದಿನಗಳಲ್ಲೇ ಅದರ ಬಣ್ಣ ಕಪ್ಪಾಗುವ ಕಾರಣ ತಡವಾಗಿ ಪರಿಶೀಲನೆ ನಡೆಸಿದರೆ ನೈಜ ಹಾನಿಯ ಪ್ರಮಾಣ ಅಂದಾಜಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಬೆಳೆ ನಷ್ಟವನ್ನು ದಾಖಲಿಸಿ, ಕೊಳೆರೋಗ ನಿಯಂತ್ರಣಕ್ಕೆ ತಾಂತ್ರಿಕ ಸಲಹೆ ಹಾಗೂ ಅಗತ್ಯ ಔಷಧೋಪಚಾರದ ಕುರಿತು ಮಾರ್ಗದರ್ಶನ ನೀಡಬೇಕು ಎಂದು ಬೆಳೆಗಾರರು ಆಗ್ರಹಿಸಿದ್ದಾರೆ.
ಬೆಳೆಗಾರರ ಅಳಲು
ದೇಶಕ್ಕಾಗಿ ಸೇವೆ ಸಲ್ಲಿಸಿದ ಬಳಿಕ ಕಳೆದ ಹತ್ತು ವರ್ಷಗಳಿಂದ ಕಾಫಿ ಕೃಷಿಯನ್ನೇ ಅವಲಂಬಿಸಿದ್ದೇನೆ. ಆದರೆ ಪ್ರತಿವರ್ಷ ಜುಲೈ-ಆಗಸ್ಟ್ ತಿಂಗಳಲ್ಲಿ ಸುರಿಯುವ ಅತಿಯಾದ ಮಳೆಯಿಂದ ಅರಬಿಕಾ ಹಾಗೂ ರೋಬಸ್ಟಾ ಕಾಫಿ ಕೊಳೆರೋಗಕ್ಕೆ ತುತ್ತಾಗಿ ಕಾಯಿಯಾಗುವ ಮುನ್ನವೇ ಉದುರುತ್ತಿದೆ. ಇದಕ್ಕಿಂತಲೂ ದೊಡ್ಡ ಸಮಸ್ಯೆ ಎಂದರೆ ಜಂಟಿ ಆರ್‌ಟಿಸಿ ಇರುವ ಕಾರಣ ಸರ್ಕಾರ ಅಥವಾ ಕಾಫಿ ಮಂಡಳಿಯಿAದ ಒಂದು ರೂಪಾಯಿ ಪರಿಹಾರವೂ ಸಿಗುತ್ತಿಲ್ಲ. ಒಂದು ಕಡೆ ಪ್ರಕೃತಿ ಹೊಡೆಯುತ್ತಿದೆ, ಇನ್ನೊಂದು ಕಡೆ ವ್ಯವಸ್ಥೆಯೇ ಕೈಬಿಟ್ಟಿದೆ. ಅಧಿಕಾರಿಗಳು ಬಿಸಿಲು ಬಂದ ನಂತರವಲ್ಲ, ಕಾಫಿ ಉದುರುತ್ತಿರುವ ಸಂದರ್ಭದಲ್ಲೇ ಸ್ಥಳಕ್ಕೆ ಭೇಟಿ ನೀಡಿ ನೈಜ ಹಾನಿಯನ್ನು ದಾಖಲಿಸಬೇಕು. ಜಂಟಿ ಆರ್‌ಟಿಸಿ ಹೊಂದಿರುವ ರೈತರಿಗೂ ಬೆಳೆ ನಷ್ಟ ಪರಿಹಾರ ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಸೂರ್ಲಬ್ಬಿ ಗ್ರಾಮದ ಕಾಫಿ ಬೆಳೆಗಾರ ಹಾಗೂ ಮಾಜಿ ಸೈನಿಕ ತಂಬುಕ್ಕುತ್ತಿರ ಗಪ್ಪು ಸೋಮಯ್ಯ ಆಗ್ರಹಿಸಿದ್ದಾರೆ.
ವಿಶೇಷ ಪ್ಯಾಕೇಜ್‌ಗೆ ಆಗ್ರಹ
ರಾಜ್ಯದಲ್ಲೇ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮೂರನೇ ಸ್ಥಾನದಲ್ಲಿರುವ ಸೂರ್ಲಬ್ಬಿ ನಾಡಿಗೆ ಈ ಬಾರಿ ಅತಿವೃಷ್ಟಿಯೇ ಶಾಪವಾಗಿ ಪರಿಣಮಿಸಿದೆ. ವರ್ಷದಿಂದ ವರ್ಷಕ್ಕೆ ಸುರಿಯುತ್ತಿರುವ ಅಧಿಕ ಮಳೆಯಿಂದ ಕೊಳೆರೋಗ ಮತ್ತು ಕಾಫಿ ಫಸಲು ಉದುರುವಿಕೆ ಹೆಚ್ಚುತ್ತಿದ್ದು, ಬೆಳೆಗಾರರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಈ ಭಾಗವನ್ನು ವಿಶೇಷ ಅತಿವೃಷ್ಟಿ ಕಾಫಿ ವಲಯವೆಂದು ಗುರುತಿಸಿ ಸರ್ಕಾರ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು. ಕಾಫಿ ಮಂಡಳಿ ಹಾಗೂ ತೋಟಗಾರಿಕೆ ಇಲಾಖೆ ಶಾಶ್ವತ ಪರಿಹಾರ ಕಂಡು ಕೊಳ್ಳಲು ವಿಶೇಷ ಅಧ್ಯಯನ ಕೈಗೊಳ್ಳಬೇಕೆಂದು ಮಂಕ್ಯ ಗ್ರಾಮದ ಬೆಳೆಗಾರರಾದ ಚಾಮೆರ ದಿನೇಶ್ ಆಗ್ರಹಿಸಿದ್ದಾರೆ.