ಪೊನ್ನAಪೇಟೆ, ಆ. ೧೦: ಕುಶಾಲನಗರ ಫಾತಿಮಾ ಪಿಯು ಕಾಲೇಜು ಆಯೋಜಿಸಿದ್ದ ಜಿಲ್ಲಾಮಟ್ಟದ ಆಹ್ವಾನಿತ ಹ್ಯಾಂಡ್‌ಬಾಲ್ ಪಂದ್ಯಾವಳಿಯ ಫೈನಲ್‌ನಲ್ಲಿ ಆತಿಥೇಯ ಫಾತಿಮಾ ಪಿಯು ಕಾಲೇಜು ತಂಡವನ್ನು ೭-೨ ಗೋಲುಗಳ ಅಂತರದಿAದ ಮಣಿಸುವ ಮೂಲಕ ಗೋಣಿಕೊಪ್ಪಲು ಕಾವೇರಿ ಪಿಯು ಕಾಲೇಜು ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.

ಜಿಲ್ಲೆಯ ವಿವಿಧ ೧೪ ಪಿಯು ಕಾಲೇಜುಗಳ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಫೈನಲ್ ಪಂದ್ಯದಲ್ಲಿ ಕಾವೇರಿ ಕಾಲೇಜು ಗೆಲುವು ಸಾಧಿಸಿತು. ನಾಯಕ ಮುಜಾಮಿಲ್ ನೇತೃತ್ವದ ತಂಡದಲ್ಲಿ ಭಗತ್ ಭೀಮಯ್ಯ, ಬಿಪಿನ್ ಬಿದ್ದಪ್ಪ, ರುವಾಯ್ಜ್, ಮುಸ್ತಫ, ಸಚಿನ್ ಸೋಮಣ್ಣ, ನಿರ್ಮಿತ್, ದಿಗಂತ್, ಸಚಿನ್.ಎ, ದ್ಯಾನ್ ಚಂಗಪ್ಪ, ತನ್ಮಯ್, ಡೆನ್ ಮುತ್ತಣ್ಣ, ಕೌಶಲ್, ಆಶಿಕ್ ಉತ್ತಮ ಪ್ರದರ್ಶನ ತೋರಿದರು. ತಂಡದ ವ್ಯವಸ್ಥಾಪಕರಾಗಿ ದೈಹಿಕ ಶಿಕ್ಷಣ ನಿರ್ದೇಶಕರಾದ ಎಂ.ಟಿ. ಸಂತೋಷ್ ಮತ್ತು ಹರ್ಷಿತ್ ಅವರು ಕಾರ್ಯನಿರ್ವಹಿಸಿದರು. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ, ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿ ವೃಂದವು ಹರ್ಷ ವ್ಯಕ್ತಪಡಿಸಿದೆ.