ವರದಿ: ಚಂದ್ರಮೋಹನ್ ಎಂ ಎನ್
ಕುಶಾಲನಗರ, ಆ. ೭: ಒಳಚರಂಡಿ ಯೋಜನೆ ಹೆಸರಿನಲ್ಲಿ ಅಧಿಕಾರಿಗಳು ನಿಧಾನಗತಿಯ ಕಾಮಗಾರಿ ನಡೆಸಿ ಪಟ್ಟಣದ ವ್ಯಾಪಾರ ವಹಿವಾಟು ಸೇರಿದಂತೆ ರಸ್ತೆ ಸಂಚಾರಕ್ಕೆ ಧಕ್ಕೆ ಉಂಟು ಮಾಡುತ್ತಿರುವ ಬಗ್ಗೆ ಕುಶಾಲನಗರ ಪಟ್ಟಣದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
೨೦೧೨ರಲ್ಲಿ ಕುಶಾಲನಗರ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ರಾಜ್ಯ ಸರ್ಕಾರ ಯೋಜನೆಯೊಂದನ್ನು ರೂಪಿಸಿ ಆಡಳಿತಾತ್ಮಕ ಅನುಮೋದನೆ ನೀಡಿ ಕಾಮಗಾರಿ ಪ್ರಾರಂಭಗೊAಡು ೧೨ ವರ್ಷಗಳು ಕಳೆದರೂ ಈ ಯೋಜನೆ ಇನ್ನೂ ಕುಂಟುತ್ತಾ ಸಾಗುತ್ತಿದೆ.
೩೦ ತಿಂಗಳಲ್ಲಿ ಅಂದರೆ ೨೦೧೬ರ ಆರಂಭದಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಲೋಕಾರ್ಪಣೆಗೊಳಿಸಲು ಅಂತಿಮ ಗಡುವು ನೀಡಿದ್ದರೂ ಪ್ರಸಕ್ತ ೨೦೨೬ ಅಂತ್ಯಗೊಳ್ಳುತ್ತಿದ್ದರೂ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಮುಂದುವರಿದಿದೆ.
ಸ್ವಚ್ಛ ಪಟ್ಟಣ ಹಾಗೂ ಸ್ವಚ್ಛ ಕಾವೇರಿ ಗುರಿ ಹೊಂದಿ ಈ ಯೋಜನೆ ರೂಪುಗೊಂಡಿದ್ದು ಸಂಬAಧಿಸಿದ ಜಲ ಮಂಡಳಿ ಅಧಿಕಾರಿಗಳ ನಿರ್ಲಕ್ಷö್ಯದಿಂದಾಗಿ ಯೋಜನೆ ಸಂಪೂರ್ಣ ನೆನೆಗುದಿಗೆ ಬಿದ್ದಿದೆ.
ಕುಶಾಲನಗರ ಪಟ್ಟಣದ ಜನಸಂಖ್ಯೆ ೨೦೨೭ ಹಾಗೂ ೨೦೪೩ ಇಸವಿಯಲ್ಲಿ ಆಗಬಹುದಾದ ಜನಸಂಖ್ಯೆಗೆ ಅನುಗುಣವಾಗಿ ಈ ಯೋಜನೆಯ ಅಂದಾಜು ಪಟ್ಟಿ ತಯಾರಿಸಲಾಗಿದೆ. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಯೋಜನೆ ಬಹುತೇಕ ಅವೈಜ್ಞಾನಿಕವಾಗಿ ಸಾಗುತ್ತಿದ್ದು ಕುಶಾಲನಗರ ಪಟ್ಟಣ ಮಧ್ಯಭಾಗದಲ್ಲಿ ಕಳೆದ ೭೦ ದಿವಸಗಳಿಂದ ಕಾಮಗಾರಿ ನಡೆಸುತ್ತಿರುವುದನ್ನು ಕಾಣಬಹುದು.
ಮಳೆ ನಡುವೆ ಒಂದೆಡೆ ಹೆದ್ದಾರಿ ರಸ್ತೆಯ ವಾಹನ ಸಂಚಾರಕ್ಕೆ ತೊಡಕು ಉಂಟಾಗುತ್ತಿದ್ದು ಇನ್ನೊಂದೆಡೆ ಪಾದಚಾರಿಗಳಿಗೆ ನಡೆದಾಡಲು ಕಿರಿಕಿರಿ ಉಂಟಾಗುತ್ತಿದೆ ಹಾಗೂ ಅಪಾಯಕಾರಿ ಸನ್ನಿವೇಶ ಎದುರಾಗುತ್ತಿವೆ ಎಂದು ನಾಗರಿಕರ ದೂರಾಗಿದೆ.
ಬೃಹತ್ ಯಂತ್ರಗಳನ್ನು ತಂದು ಪಟ್ಟಣದ ಹೃದಯ ಭಾಗದಲ್ಲಿ ಕಳೆದ ಒಂದು ತಿಂಗಳಿನಿAದ ಇರಿಸಲಾಗಿದ್ದು ಇದರಿಂದ ವರ್ತಕರಿಗೆ ವ್ಯಾಪಾರ ವಹಿವಾಟುಗಳಿಗೂ ಅನಾನುಕೂಲ ಉಂಟಾಗಿದೆ. ವಿದ್ಯಾರ್ಥಿಗಳಿಗೆ ಮತ್ತು ವ್ಯಾಪಾರ ವಹಿವಾಟುದಾರರಿಗೆ ಈ ವ್ಯಾಪ್ತಿಯಲ್ಲಿ ನಡೆದಾಡಲು ಕೂಡ ಸಂಪೂರ್ಣ ಅನಾನುಕೂಲ ಉಂಟಾಗಿದೆ ಎನ್ನುತ್ತಾರೆ ಇಲ್ಲಿನ ಉದ್ಯಮಿಗಳು.
ಕಳೆದ ೧೨ ವರ್ಷಗಳಿಂದ ಯೋಜನೆ ನಡೆಯುತ್ತಿದ್ದು ಇದೀಗ ಮಳೆಗಾಲದಲ್ಲಿ ನಾಮಕಾವಸ್ಥೆಗೆ ಕಾಮಗಾರಿ ನಡೆಸುತ್ತಿರುವ ಬಗ್ಗೆ ಸಂಬAಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಈ ಯೋಜನೆಯನ್ನು ಅತಿ ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎನ್ನುತ್ತಾರೆ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಎಸ್. ನಾಗೇಶ್. ಕಾಮಗಾರಿ ಸಂಬAಧ ಪೈಪ್ ಲೈನ್ ಅಳವಡಿಸಲು ಚರಂಡಿ ತೆಗೆಯುತ್ತಿದ್ದು ಆ ಭಾಗದಲ್ಲಿ ಬಂಡೆಕಲ್ಲು ಇರುವ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ ಎನ್ನುತ್ತಾರೆ ಕಾಮಗಾರಿಯ ಗುತ್ತಿಗೆದಾರರು.
ಆದರೆ ಯಾವುದೇ ಅಧಿಕಾರಿಗಳು ಮೇಲ್ವಿಚಾರಣೆ ವಹಿಸದ ಹಿನ್ನೆಲೆಯಲ್ಲಿ ಸಮರ್ಪಕ ಸಲಹೆಯ ಕೊರತೆ ಈ ಅವಾಂತರಕ್ಕೆ ಕಾರಣ ಎನ್ನುತ್ತಾರೆ ಸ್ಥಳೀಯರು.
ಒಳಚರಂಡಿ ಯೋಜನೆ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣ ವ್ಯಾಪ್ತಿ ಸಂಪೂರ್ಣ ಕಲುಷಿತ ತ್ಯಾಜ್ಯಗಳು ನೇರವಾಗಿ ಕಾವೇರಿ ನದಿ ಪಾಲಾಗುತ್ತಿದೆ ಇದರಿಂದ ಕಾವೇರಿ ನದಿ ನೀರಿನ ಗುಣಮಟ್ಟ ಬಹುತೇಕ ಕ್ಷೀಣವಾಗಿ ಜನರಿಗೆ ನೇರವಾಗಿ ಬಳಸಲು ಕೂಡ ಯೋಗ್ಯವಾಗಿಲ್ಲ ಈ ಯೋಜನೆಗೆ ಒಳಚರಂಡಿ ಕೊಳವೆ ಮಾರ್ಗ ಹಾಗೂ ಗುಂಡಿಗಳ ನಿರ್ಮಾಣ ಕಾಮಗಾರಿ ನಡೆದು ೧೨ ವರ್ಷಗಳು ಕಳೆದಿದ್ದು ಕೆಲವು ಕಡೆ ಕಾಮಗಾರಿಗಳು ಶಿಥಿಲಗೊಂಡಿದ್ದು ಇದರಿಂದ ಕಲುಷಿತ ತ್ಯಾಜ್ಯ ನೀರು ನೇರವಾಗಿ ನದಿ ಒಡಲು ಸೇರುತ್ತದೆ. ಇವುಗಳ ನಿರ್ವಹಣೆ ಕಾಮಗಾರಿ ನಡೆಯಬೇಕಾಗಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಮೂಲಕ ಅಧಿಕಾರಿಗಳ ಮೇಲೆ ಕರ್ತವ್ಯ ಲೋಪ ಮತ್ತು ಕಾಮಗಾರಿಯ ಗುಣಮಟ್ಟ ಸಂಬAಧಿಸಿದAತೆ ಲೋಕಾಯುಕ್ತ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದು ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಪುರಸಭೆ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಕುಶಾಲನಗರ ಒಳಚರಂಡಿ ಕಾಮಗಾರಿ ಬಗ್ಗೆ ಇತ್ತೀಚೆಗೆ ಮಡಿಕೇರಿಯಲ್ಲಿ ಸಚಿವ ನರೇಂದ್ರಸ್ವಾಮಿ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ವಿಧಾನಸಭಾ ಸದಸ್ಯ ಮಂತರ್ ಗೌಡ ಅವರು ಒಳಚರಂಡಿ ಮಂಡಳಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ತಕ್ಷಣ ಕಾಮಗಾರಿ ಪೂರ್ಣ ಗೊಳಿಸದಿದ್ದಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿರುವುದನ್ನು ಗಮನಿಸಬಹುದು. ಸ್ವಚ್ಛ ಪಟ್ಟಣ ಸ್ವಚ್ಛ ಕಾವೇರಿ ಉದ್ದೇಶ ಹೊಂದಿ, ರೂಪಿಸಿದ ಯೋಜನೆಯೊಂದು ಕಳೆದ ೧೨ ವರ್ಷ ಕಳೆದರೂ ಪೂರ್ಣಗೊಳ್ಳದಿರುವ ಬಗ್ಗೆ ಕುಶಾಲನಗರ ಜನತೆ ಅಸಹನೆ ವ್ಯಕ್ತಪಡಿಸುತ್ತಿದ್ದು ತಕ್ಷಣ ಕಾಮಗಾರಿಯನ್ನು ಪೂರ್ಣಗೊಳಿಸಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿದ್ದಾರೆ.