ಕೆ.ಎಂ ಇಸ್ಮಾಯಿಲ್ ಕಂಡಕರೆ

ಮಡಿಕೇರಿ, ಆ. ೭: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಅವಧಿಯನ್ನು ರಾಜ್ಯ ಸರಕಾರ ವಿಸ್ತರಿಸಿದ್ದು, ತಾ.೧೭ರಂದು ಮೊದಲ ಹಂತ ಮುಕ್ತಾಯಗೊಳ್ಳಲಿದೆ. ಅಂದರೆ ತಾ.೧೭ರವರೆಗೆ ಮತದಾರರಿಂದ ಬಿ.ಎಲ್.ಓಗಳು ನಮೂನೆಗಳನ್ನು ಸಂಗ್ರಹಿಸಬಹುದಾಗಿದೆ. ಪಟ್ಟಿಯಿಂದ ಹೊರಗುಳಿದಿರುವ ಮತದಾರರಿಗೆ ತಾ.೧೭ರವರೆಗೆ ‘ರೋಲ್‌ಬ್ಯಾಕ್’ ಮಾಡಲು ಕಾಲಾವಕಾಶ ಇದೆ.

ಕೆಲ ಬಿ.ಎಲ್.ಒಗÀಳ ಆತುರ ನಿರ್ಧಾರ, ಚುನಾವಣಾ ಆಯೋಗದ ಒತ್ತಡದಿಂದಾಗಿ ಡಿಜಿಟಲೀಕರಣ ಪೂರ್ಣಗೊಳಿಸುವ ನಿಟ್ಟಿನಲ್ಲಿ ಎನ್ಯುಮರೇಶನ್ ಫಾರ್ಮ್ ನೀಡಲು ತಡಮಾಡಿರುವ ಮತದಾರರನ್ನು ಕೂಡ ಜಿಲ್ಲೆಯಲ್ಲಿ ಂSಆಆಔ(Abseಟಿಣ-ಗೈರು, Shiಜಿಣeಜ-ಸ್ಥಳಾಂತರ, ಆeಚಿಣh-ಮೃತ, ಆuಠಿಟiಛಿಚಿಣe-ನಕಲಿ, ಔಣheಡಿs-ಇತರೆ) ಅಡಿಗೆ ಸೇರಿಸಿರುವುದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಆದರೆ ಇದೀಗ ಅವಧಿ ವಿಸ್ತರಣೆ ಆಗಿರುವ ಹಿನ್ನೆಲೆ ರೋಲ್‌ಬ್ಯಾಕ್ ಮಾಡಲು ಮತ್ತಷ್ಟು ಕಾಲಾವಕಾಶವಿದೆ. ಸರಿಯಾಗಿ ಪರಿಶೀಲನೆ ನಡೆಸದೆ, ಸ್ಥಳಾಂತರಗೊAಡಿದ್ದಾರಾ? ಎಂದು ಸ್ಥಳ ಮಹಜರು ಮಾಡದೆ, ಂSಆಆಔ ಪಟ್ಟಿಗೆ ಸೇರಿಸಲಾಗಿದೆೆ. ಇದಕ್ಕೆ ಸ್ಪಷ್ಟ ನಿದರ್ಶನವೆಂಬAತೆ ಕಳೆದ ಒಂದು ವಾರದಲ್ಲಿ ಂSಆಆಔ ಪಟ್ಟಿಯಲ್ಲಿದ್ದ ೧,೩೨೨ ಮತದಾರರು ‘ರೋಲ್‌ಬ್ಯಾಕ್’ ಮಾಡಿಕೊಂಡು ತಮ್ಮ ಎನ್ಯುಮರೇಶನ್ ಫಾರ್ಮ್ ಡಿಜಿಟಲೀಕರಣ ಮಾಡಿಸಿದ್ದಾರೆ.

ಜುಲೈ ೩೦ ರಂದು ಕೊಡಗು ಜಿಲ್ಲೆಯಲ್ಲಿ ಂSಆಆಔ ಮತದಾರರ ಸಂಖ್ಯೆ ೬೪,೯೫೭ ಇತ್ತು, ಆಗಸ್ಟ್ ೬ ರ ಸಂಜೆ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ೬೩,೬೩೫ಕ್ಕೆ ಇಳಿಕೆಯಾಗಿದೆ.ತಪ್ಪಾಗಿ ಂSಆಆಔ ಪಟ್ಟಿಯಲ್ಲಿ ಹೆಸರು ಸೇರಿಕೊಂಡಿರುವ ಮತದಾರರಿಗೆ ತಾ.೧೭ ರವರೆಗೆ ರೋಲ್‌ಬ್ಯಾಕ್ ಮಾಡಿಕೊಳ್ಳುವ ಅವಕಾಶ ಇದೆ.ಅಂತಹ ಮತದಾರರ ಹೆಸರು ಆಗಸ್ಟ್ ೨೪ ರಂದು ಕರಡು ಪಟ್ಟಿಯಲ್ಲಿ ಪ್ರಕಟವಾಗಲಿದೆ. ಂSಆಆಔ ಅಡಿಯಲ್ಲಿರುವ ಅರ್ಹ ಮತದಾರರು ರೋಲ್‌ಬ್ಯಾಕ್ ಮಾಡಿಕೊಳ್ಳದಿದ್ದರೆ ಆಗಸ್ಟ್ ೨೪ರ ಬಳಿಕ ಫಾರ್ಮ್ ೬ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರಿಸುವ ಪ್ರಕ್ರಿಯೆ ನಡೆಯಬೇಕಿದೆ.

ಚುನಾವಣಾ ಆಯೋಗ ಬುಧವಾರ ಂSಆಆಔ ಮತದಾರರ ಮಾಹಿತಿಯನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಂSಆಆಔ ಎಂದು ನಮೂದಿಸಲಾಗಿರುವ ಮತದಾರರ ವಿವರಗಳನ್ನು ಸಾರ್ವಜನಿಕರು ಪರಿಶೀಲಿಸಬಹುದಾಗಿದೆ. ಛಿeo.ಞಚಿಡಿಟಿಚಿಣಚಿಞಚಿ.gov.iಟಿ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಜಾಲತಾಣದಲ್ಲಿ ‘ಂSಆಆಔ ಐISಖಿ’ ಎಂಬ ಲಿಂಕ್ ಇದ್ದು, ಅದರಲ್ಲಿ ಪ್ರತಿ ಜಿಲ್ಲೆ, ವಿಧಾನಸಭಾ ಕ್ಷೇತ್ರ ಹಾಗೂ ಮತಗಟ್ಟೆವಾರು ಂSಆಆಔ ಪಟ್ಟಿ ಲಭ್ಯವಿದೆ. `ಛಿeo.ಞಚಿಡಿಟಿಚಿಣಚಿಞಚಿ.gov.iಟಿ` ಗೆ ಹೋಗಿ ‘ಂSಆಆಔ ಐISಖಿ’ ಕ್ಲಿಕ್ ಮಾಡಿ, ನಿಮ್ಮ ಜಿಲ್ಲೆ, ಕ್ಷೇತ್ರ, ಮತಗಟ್ಟೆ ಆಯ್ಕೆ ಮಾಡಿ ಪಟ್ಟಿ ಡೌನ್‌ಲೋಡ್ ಮಾಡಿ, ನಿಮ್ಮ ಹೆಸರು ಂSಆಆಔ ಪಟ್ಟಿಯಲ್ಲಿದ್ದರೆ, ತಕ್ಷಣ ನಿಮ್ಮ ಮತಗಟ್ಟೆ ವಾರ್ಡಿನ ಸಹಾಯಕ ಮತದಾರರ ನೋಂದಣಾಧಿಕಾರಿ/ ಮತದಾರರ ನೋಂದಣಾಧಿಕಾರಿಗೆ ಸಂಪರ್ಕಿಸಿ, ಗಣತಿ ನಮೂನೆಯನ್ನು ರೋಲ್‌ಬ್ಯಾಕ್ ಮಾಡಲು ಮನವಿ ಸಲ್ಲಿಸಿ, ಫಾರ್ಮ್ ಭರ್ತಿ ಮಾಡಿ ಬಿ.ಎಲ್.ಒಗೆ ನೀಡಬೇಕು. ರೋಲ್‌ಬ್ಯಾಕ್ ಮಾಡಿಕೊಳ್ಳಲು ತಾ.೧೭ರವರೆಗೆ ಕಾಲಾವಕಾಶ ಇದೆ.

ಪೊನ್ನಂಪೇಟೆ ತಾಲೂಕಿನಲ್ಲಿ ಅತೀ ಹೆಚ್ಚು ಂSಆಆಔ ಮತದಾರರು

ಂSSಆಔ ಪಟ್ಟಿಯಲ್ಲಿ ಪೊನ್ನಂಪೇಟೆ ತಾಲೂಕಿನಲ್ಲೇ ಅತೀ ಹೆಚ್ಚು ಮತದಾರರು ಪತ್ತೆಯಾಗಿದ್ದಾರೆ. ಗುರುವಾರ ಸಂಜೆ ೪ ಗಂಟೆಯವರೆಗೆ ೧೭,೩೬೪ ಮತದಾರರು ಂSಆಆಔ ಪಟ್ಟಿಯಲ್ಲಿ ಇದ್ದಾರೆ.

ಗುರುವಾರ ಸಂಜೆ ೪ ಗಂಟೆಯವರೆಗೆ ಜಿಲ್ಲೆಯಲ್ಲಿ ೧೩,೭೨೭ ಮೃತಪಟ್ಟ ಮತದಾರರು, ೩೩,೮೦೩ ಶಾಶ್ವತವಾಗಿ ಸ್ಥಳಾಂತರಗೊAಡವರು, ೫,೮೮೪ ಮತದಾರರು ಎರಡು ಕಡೆ ಹೆಸರು ಹೊಂದಿರುವವರು, ೧೦,೧೦೦ ಮಂದಿ ಮತದಾರರು ಗೈರು ಹಾಗೂ ೧೨೧ ಮತದಾರರನ್ನು ಇತರೆ ಕಾರಣಗಳಿಂದ ಂSಆಆಔ ಪಟ್ಟಿಗೆ ಸೇರಿಸಲಾಗಿದೆ.

ಮಡಿಕೇರಿ ವಿಧಾನಸಭಾ ಕ್ಷೇತ್ರದ ೨,೩೮,೪೪೭ ಮತದಾರರಲ್ಲಿ ಗುರುವಾರದವರೆಗೆ ೨,೦೯,೦೨೯ ಮತದಾರರ ಎನ್ಯುಮರೇಶನ್ ಫಾರ್ಮ್ ಡಿಜಿಟಲೀಕರಣಗೊಂಡಿದೆ.

೨೯,೪೧೮ ಮತದಾರರು ಂSಆಆಔ ಪಟ್ಟಿಯಲಿದ್ದಾರೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೨,೩೦,೨೧೦ ಮತದಾರರಲ್ಲಿ ಇದುವರೆಗೆ ೧,೯೫,೯೯೩ ಮತದಾರರ ಗಣತಿ ನಮೂನೆ ಅಪ್ಲೋಡ್ ಆಗಿದ್ದು, ೩೩,೨೧೭ ಮತದಾರರು ಂSಆಆಔ ಪಟ್ಟಿಯಲ್ಲಿ ಇದ್ದಾರೆ.

ಸೋಮವಾರಪೇಟೆ ತಾಲೂಕಿನಲ್ಲಿ ೮,೩೮೩, ಕುಶಾಲನಗರ ತಾಲೂಕಿನಲ್ಲಿ ೧೨,೫೧೭, ಮಡಿಕೇರಿ ತಾಲೂಕಿನಲ್ಲಿ ೮,೫೧೮ ಮತದಾರರನ್ನು ಂSಆಆಔ ಪಟ್ಟಿಗೆ ಸೇರಿಸಲಾಗಿದೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಮಡಿಕೇರಿ ತಾಲೂಕಿನಲ್ಲಿ ೬,೦೯೧, ವೀರಾಜಪೇಟೆ ತಾಲೂಕಿನಲ್ಲಿ ೧೦,೭೬೨ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ ೧೭,೩೬೪ ಮತದಾರರು ಂSಆಆಔ ಪಟ್ಟಿಯಲ್ಲಿ ಇದ್ದಾರೆ.

ಲಾಜಿಕಲ್ ಡಿಸ್ಕಿçಪೆನ್ಸಿ ಸರಿಪಡಿಸಲು ಪರದಾಡುತ್ತಿರುವ ಮತದಾರರು

ಎನ್ಯುಮರೇಶನ್ ಫಾರ್ಮ್ ಅಪ್ಲೋಡ್ ಮಾಡಿರುವ ಮತದಾರರಲ್ಲಿ, ತಾರ್ಕಿಕ ವ್ಯತ್ಯಾಸ ಇರುವ ಮತದಾರರನ್ನು ಲಾಜಿಕಲ್ ಡಿಸ್ಕಿçಪೆನ್ಸಿ ಅಡಿಯಲ್ಲಿ ಪ್ರತ್ಯೇಕಿಸಲಾಗುತ್ತದೆ. ಈಗಾಗಲೇ ಜಿಲ್ಲೆಯ ಸಾವಿರಾರು ಮತದಾರರ ಹೆಸರು ಲಾಜಿಕಲ್ ಡಿಸ್ಕಿçಪೆನ್ಸಿ ಎಂದು ಬಿ.ಎಲ್.ಒ ಆ್ಯಪ್‌ನಲ್ಲಿ ಪ್ರತ್ಯೇಕಿಸಲಾಗಿದೆ. ಕೊನೆಯ ಕ್ಷಣದಲ್ಲಿ ತಾರ್ಕಿಕ ವ್ಯತ್ಯಾಸವನ್ನು ಸರಿಪಡಿಸಲು ಮತದಾರರು ಪರದಾಡುತ್ತಿದ್ದಾರೆ.

ಬೆರಳೆಣಿಕೆಯಷ್ಟು ಬೂತ್‌ಗಳಲ್ಲಿ ಮಾತ್ರ ತಾರ್ಕಿಕ ವ್ಯತ್ಯಾಸ ತಿದ್ದುಪಡಿ ಮಾಡಿದ್ದು, ಕೆಲವೊಂದು ಬೂತ್‌ಗಳಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ತಾರ್ಕಿಕ ವ್ಯತ್ಯಾಸವನ್ನು ಹೇಗೆ ಸರಿಪಡಿಸುವುದು ಎಂಬ ಮಾಹಿತಿ ಇಲ್ಲದೆ, ಮತದಾರರು ನೋಟಿಸ್ ಭೀತಿ ಎದುರಿಸುತ್ತಿದ್ದಾರೆ.