ಸೋಮವಾರಪೇಟೆ, ಆ. ೭: ಇಲ್ಲಿನ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘದ ೩೦ನೇ ವರ್ಷದ ವಾರ್ಷಿಕ ಮಹಾಸಭೆ ಅಧ್ಯಕ್ಷೆ ಬೇಬಿ ಚಂದ್ರಹಾಸ್ ಅವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಕೆಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.
ಮಹಾಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು, ಮಹಿಳೆಯರಿಂದಲೇ ಸ್ಥಾಪನೆಯಾದ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘ ೩೦ ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಸದಸ್ಯರುಗಳು ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸಹಕಾರ ಸಂಘದಿAದ ಸಾಲವನ್ನು ಪಡೆದುಕೊಂಡು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದರೆ ಸಂಘವು ಇನ್ನಷ್ಟು ಅಭಿವೃದ್ಧಿ ಕಾಣಲಿದೆ ಎಂದರು.
೨೦೨೫-೨೦೨೬ನೇ ಸಾಲಿನಲ್ಲಿ ಸಂಘವು ೧೮.೯೧ ಲಕ್ಷ ಲಾಭದಲ್ಲಿದೆ. ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ ಶೇ.೧೦ ಡಿವಿಡೆಂಡ್ ನೀಡಲಾಗುವುದು. ಸದಸ್ಯರುಗಳೇ ಸಂಘದ ಅಡಿಪಾಯವಾಗಿದ್ದು, ಎಲ್ಲರೂ ಸಂಘದಲ್ಲಿಯೇ ವ್ಯವಹಾರ ಮಾಡಿ, ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಿದರೆ ಸಂಘವು ಶತಮಾನೋತ್ಸವವನ್ನು ಕಾಣಬಹುದು ಎಂದು ಅಭಿಪ್ರಾಯಿಸಿದರು.
ಸಭೆಯಲ್ಲಿ ಹಿರಿಯ ಸದಸ್ಯರಾದ ಲೀಲಾ ನಿರ್ವಾಣಿ, ಕಲಾ ಸದಾನಂದ್, ರೋಹಿಣಿ ಸುಬ್ಬಯ್ಯ ಅವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಇದರೊಂದಿಗೆ ಸಂಘದಲ್ಲಿ ೨೬ ವರ್ಷಗಳಿಂದ ಪಿಗ್ಮಿ ಸಂಗ್ರಾಹಕರಾಗಿ ಸೇವೆ ಸಲ್ಲಿಸುತ್ತಿರುವ ಸರಸ್ವತಿ ನಂಜಪ್ಪ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷೆ ಉಮಾ ರುದ್ರಪ್ರಸಾದ್, ಮಾಜಿ ಅಧ್ಯಕ್ಷೆ ಜಲಜಾಶೇಖರ್, ನಿರ್ದೇಶಕರಾದ ಲೋಕೇಶ್ವರಿ ಗೋಪಾಲ್, ಕವಿತಾ ವಿರೂಪಾಕ್ಷ, ವಿದ್ಯಾ ಸೋಮೇಶ್, ವರಲಕ್ಷಿö್ಮÃ ಸಿದ್ದೇಶ್ವರ್, ಚಂದ್ರಾವತಿ ಶಾಂತಪ್ಪ, ಗೀತಾ ರಾಜು, ಮಂಜುಳ, ಜೀತಾಶ್ರೀ ಧುರೀಣ್, ಮೀನಾಕ್ಷೀ, ರಂಜಿತ ಲೋಕೇಶ್ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಪೃಥ್ವಿ ಚಂದ್ರಶೇಖರ್ ಅವರುಗಳು ಉಪಸ್ಥಿತರಿದ್ದರು.